ಸುದ್ದಿಗಳು

ಸಂಕ್ರಾಂತಿಗೆ ಬಂತು ಎಂಟೆದೆ ಬಂಟನ ‘ಪೈಲ್ವಾನ್’ ಟೀಸರ್!!

ಬೆಂಗಳೂರು,ಜ.15: ಹೌದು ಸುದೀಪ್ ಸಿನಿಮಾಗಳು ಅಂದರೆ ಅಲ್ಲಿ ಏನಾದರೂ ವಿಶೇಷಗಳು ಇದ್ದೇ ಇರುತ್ತವೆ. ಅನೇಕ ಚಿತ್ರಗಳ ಮೂಲಕ ಗೆದ್ದಿರುವ ಅವರು ಇದೀಗ ಮತ್ತೊಂದು ಗೆಲುವಿನ ಸೂಚನೆ ನೀಡಿದ್ದಾರೆ.  ಸಂಕ್ರಾಂತಿಗೆ  ಕಿಚ್ಚ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದಾರೆ.. ಕಿಚ್ಚ ಸುದೀಪ್, ‘ಹೆಬ್ಬುಲಿ’ ಕೃಷ್ಣ ಜೋಡಿಯ ಮತ್ತೊಂದು ಹೈ ಬಜೆಟ್ ಸಿನಿಮಾ ‘ಪೈಲ್ವಾನ್’. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ  ಈ ಸಿನಿಮಾ 10 ಭಾಷೆಯಲ್ಲಿ ಮೂಡಿ ಬರಲಿದೆ. ಈಗಾಗಲೇ ಸಂಕ್ರಾಂತಿಗೆ ಟೀಸರ್ ಬಿಡುಗಡೆಯಾಗಿದ್ದು ಟೀಸರ್ ಸಖತ್ ಆಗಿ ಮೂಡಿ ಬಂದಿದೆ..

Image result for pailwaan

“ಕೃಷ್ಣ ಮತ್ತು ಕಂಸ ಇಬ್ಬರೂ ಪೈಲ್ವಾನರು

“ಕೃಷ್ಣ ಮತ್ತು ಕಂಸ ಇಬ್ಬರೂ ಪೈಲ್ವಾನರು , ಕಂಸ ಅಧರ್ಮಕ್ಕೆ ಕುಸ್ತಿ ಹೊಡೆದರೆ. ಕೃಷ್ಣ ಧರ್ಮಕ್ಕೆ” ಎಂದು ಹಿನ್ನೆಲೆ ಧ್ವನಿ ಕೇಳುತ್ತಿರಬೇಕಾದರೆ ಕಿಚ್ಚ ಕುಸ್ತಿ ಅಖಾಡದಲ್ಲಿ ಗದೆ ಹಿಡಿದು ಧೂಳನ್ನು ಎಬ್ಬಿಸುವ ಪರಿ ಸಖತ್ ಆಗಿ ಬಂದಿದೆ.. ಇನ್ನು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬರಬೇಕಾದರೆ ಕಿಚ್ಚ ಕುಸ್ತಿ ಅಖಾಡಕ್ಕೆ ಎಂಟ್ರಿ ನೀಡಿ,, ಅಲ್ಲಿರುವ ಪೈಲ್ವಾನನ್ನು ಸೋಲಿಸಿ ಬಿಡುತ್ತಾರೆ..ಈ ಚಿತ್ರಕ್ಕಾಗಿ ಕಿಚ್ಚ ಕಟ್ಟು ಮಸ್ತಾದ ದೇಹ ಬೆಳೆಸಿದ್ದಾರೆಕನ್ನಡ ಭಾಷೆಯಲ್ಲಿ ಮಾತ್ರ ‘ಪೈಲ್ವಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ..

Image result for pailwaan

#kiccasudeep #pailwaanteaser #rrmotionpictures

Tags