ಸುದ್ದಿಗಳು

ಕಿಚ್ಚ ಸುದೀಪ್ ಜೊತೆ ಅಭಿನಯಿಸಿದ ನಾಯಕಿಯ #ಮೀ ಟೂ ಆರೋಪ…!

"ಹೆಬ್ಬುಲಿ" ಚಿತ್ರದ ನಾಯಕಿ ಅಮಲಾ ಪೌಲ್

ಬೆಂಗಳೂರು, ಅ.25: #ಮೀ ಟೂ ಅಭಿಯಾನದ ಅಡಿಯಲ್ಲಿ ಚಿತ್ರರಂಗದಲ್ಲಿ ಒಬ್ಬೊಬ್ಬರ ಬಣ್ಣ ಬಯಲಾಗುತ್ತಿದೆ. ಟಾಲಿವುಡ್ ಹಾಗೂ ಕಾಲಿವುಡ್ ನ ಖ್ಯಾತ ನಾಯಕಿ ಲೈಂಗಿಕ ಕಿರುಕುಳದ ಆರೋಪ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ನನಗೂ ಲೈಂಗಿಕ ಕಿರುಕುಳ ಆಗಿದೆ ಅಂತಿದ್ದಾರೆ. ಕಿಚ್ಚ ಸುದೀಪ್ ಜೊತೆ ಅಭಿನಯ ಮಾಡಿದ ನಟಿ ಅಮಲಾ ಪೌಲ್ ಸದ್ಯ ಈ ಆರೋಪ ಮಾಡುತ್ತಿರುವ ನಟಿ .

ಕಾಲಿವುಡ್ ಬೆಡಗಿಯ #ಮೀ ಟೂ ಆರೋಪ

ಕಾಲಿವುಡ್ ‘ತಿರುಟ್ಟು ಪಯಲೆ 2’ ಚಿತ್ರ ನಿರ್ದೆಶಕನ ಮೇಲೆ ಲೈಂಗಿಕ  ಕಿರುಕುಳ ಆರೋಪ ಕೇಳಿ ಬರುತ್ತಿದೆ. ಚಿತ್ರದ ನಿರ್ದೇಶಕ ಸುಶಿ ಗಣೇಶನ್ ಸದ್ಯ ಆರೋಪ ಎದುರಿಸುತ್ತಿರುವವರು.ನಿರ್ದೇಶಕಿ ಹಾಗೂ ಬರಹಗಾರ್ತಿ ಲೀನಾ ಮಣಿಮೆಕಲೈ ಈ ಹಿಂದೆ ಸುಶಿ ಗಣೇಶನ್ ಅವರ ಜೊತೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನಿರ್ದೇಶಕ ಸುಶಿ ಗಣೇಶನ್ ಕೆಟ್ಟದಾಗಿ ವರ್ತಿಸಿದ್ದರು ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಅದಕ್ಕೆ ತಕ್ಕಂತೆ ಈಗ ನಟಿ ಅಮಲಾ ಕೂಡ ಅದೇ ಆರೋಪ ಮಾಡುತ್ತಿದ್ದಾರೆ.ಅಮಲಾ ಪೌಲ್ ಕೂಡ ಆತ ನನ್ನ ಬಳಿಯೂ ಅಸಭ್ಯವಾಗಿ ನಡೆದುಕೊಂಡಿದ್ದ #ತಿರುಟ್ಟುಪಯಲೆ2 ಚಿತ್ರೀಕರಣದ ಸಮಯದಲ್ಲಿ ಡಬಲ್ ಮೀನಿಂಗ್ ನಲ್ಲಿ ಮಾತನಾಡುತ್ತಿದ್ದರು. ನಾನು ಸಂಪೂರ್ಣವಾಗಿ ಲೀನಾ ಮಣಿಮೆಕಲೈ ಅವರಿಗೆ ಬೆಂಬಲ ಸೂಚಿಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಅಮಲಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

 

Tags