ಸುದ್ದಿಗಳು

ತನ್ನ ಆಪ್ತ ಗೆಳೆಯನ ವಿವಾಹಕ್ಕೆ ವಿಶೇಷವಾಗಿ ವಿಶ್ ಮಾಡಿದ ಕಿಚ್ಚ

ಬೆಂಗಳೂರು, ಫೆ.19:

ನಟ ಮತ್ತು ಸಿಸಿಎಲ್ ಕ್ರಿಕೆಟರ್ ರಾಜೀವ್ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಇದೀಗ ಕಿಚ್ಚ ವಿಶ್ ಮಾಡಿದ್ದಾರೆ.

ಹೌದು, ಇತ್ತೀಚೆಗೆ ಸಿನಿಮಾ ತಾರೆಯರ ಕ್ರಿಕೆಟ್ ಲೀಗ್‌ ನಲ್ಲಿ ಕರ್ನಾಟಕ ಬುಲ್ಡೇಜರ್ ಟೀಮ್‌ ನಲ್ಲಿದ್ದ ರಾಜೀವ್ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಅವರ ಜೀವನ ಸುಖಕರವಾಗಿರಲೆಂದು ನಟ ಸುದೀಪ್ ಟ್ವಿಟ್ಟರ್ ಮೂಲಕ ಶುಭಾಷಯ ಕೋರಿದ್ದಾರೆ.

ಸಿನಿಮಾ ನಟನ ಮದುವೆಗೆ ಕಿಚ್ಚನ ಆರೈಕೆ

ಹೌದು, ಹಲವಾರು ಸಿನಿಮಾ ಮೂಲಕ ಹಾಗೂ ಸಿಸಿಎಲ್ ಮೂಲಕ ತಮ್ಮದೇ ಆದ ಹೆಸರು ಮಾಡಿದ್ದ ರಾಜೀವ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಇವರು ಇತ್ತೀಚೆಗೆ ಹಸೆಮಣೆ ಏರಿದ್ದರು. ರೇಷ್ಮಾ ಎಂಬುವವರನ್ನು ಇವರು ಮದುವೆಯಾಗಿದ್ದು, ಇದೀಗ ಈ ಮದುವೆಗೆ ಕಿಚ್ಚ ಕೂಡ ಹಾಜರಾಗಿದ್ದರು. ಇದೀಗ ಕಿಚ್ಚ ಟ್ವಿಟರ್ ನಲ್ಲಿ ಶುಭಾಷಯ ತಿಳಿಸಿದ್ದಾರೆ.

ಬಾಳಿನುದ್ದಕ್ಕೂ ಖುಷಿಯಾಗಿರಿ

ಈ ಬಗ್ಗೆ ಟ್ವಿಟ್ ಮಾಡಿರುವ ಕಿಚ್ಚ, ನನ್ನ ಸ್ನೇಹಿತ ರಾಜೀವ ಹೊಸ ಜೀವನಕ್ಕೆ ಕಾಲಿಟ್ಟಿದ್ದೀರಾ. ನಿಮ್ಮ ಹೊಸ ಜೀವನ ಸುಖಕರವಾಗಿರಲಿ. ಹೊಸದೊಂದು ಪ್ರಯಾಣ ಆರಂಭವಾಗಿದೆ. ಬಾಳಿನುದ್ದಕ್ಕೂ ಖುಷಿಯಾಗಿರಿ ಎಂದು ಟ್ವಿಟ್ ಮಾಡಿದ್ದಾರೆ.

ರಾಕಿ ಬಾಯ್ ಗೆ ತಾಯಿಯಾಗಿದ್ದ ಅರ್ಚನಾ ಈಗ ನಾಯಕಿ..!!!

#sandalwood #kannadamovies #balkaninews #kichchasudeep #kichchasudeepandrajeevhanu #rajeevhanufacebook #rajeevhanuwedding

Tags

Related Articles