ಸುದ್ದಿಗಳು

ಮತ್ತೆ ಅರೆ ನಗ್ನಳಾದ ಈ ನಟಿ!!

ಕಿಮ್ ಹೊಸ ಮೇಕಪ್ ಕೂಡ ಚೆರ್ರಿ ಬ್ಲಾಸಮ್ ಮೇಕಪ್

ಮುಂಬೈ,ಸೆ.11: ಬಾಡಿಗೆ ತಾಯ್ತನದ ಮೂಲಕ ಮೂರನೇ ಮಗುವಿಗೆ ತಾಯಿಯಾಗಿರುವೆ ಎಂದು ಹೇಳಿಕೊಂಡಿದ್ದ ರಿಯಾಲಿಟಿ ಸ್ಟಾರ್ ಕಿಮ್ ಕರ್ದಾಶಿಯನ್ ಮತ್ತೆ ಬೆತ್ತಲಾಗಿದ್ದಾಳೆ.

ಅರೆನಗ್ನ

ಇದೀಗ 37 ವರ್ಷದ ಈ ನಟಿ ಕಂ ಮಾಡೆಲ್ ತನ್ನ ಅರೆನಗ್ನ ದೇಹವನ್ನು ಪ್ರದರ್ಶಿಸಿ ಮತ್ತೆ ಸುದ್ದಿಯಾಗುತ್ತಿದ್ದಾಳೆ.ಕಿಮ್ ಚೆರ್ರಿ ಹೂವುಗಳನ್ನು ತನ್ನ ದೇಹದ ಕೆಲ ಭಾಗಗಳಿಗೆ ಮಾತ್ರ ಮುಡಿಸಿಕೊಂಡು ಫೋಟೋಕ್ಕೆ ಫೋಸ್ ನೀಡಿದ್ದಾಳೆ.

ಚೆರ್ರಿ ಬ್ಲಾಸಮ್ ಮೇಕಪ್

ಕಿಮ್ ಹೊಸ ಮೇಕಪ್ ಕೂಡ ಚೆರ್ರಿ ಬ್ಲಾಸಮ್ ಮೇಕಪ್ ಆಗಿದೆ. ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿರುವ ಕಿಮ್, ನನ್ನ ಹೊಸ ಚೆರ್ರಿ ಬ್ಲಾಸಮ್ ಮೇಕಪ್ ಕಲೆಕ್ಷನ್. ಕೆಲವೇ ದಿನಗಳಲ್ಲಿ ನಿಮಗೆ ಲಭ್ಯವೆಂದು ಬರೆದಿದ್ದಾಳೆ.

ಕಿಮ್ ಕರ್ದಾಶಿಯನ್ ಹೊಸ ಮೇಕಪ್ ಸೆಟ್ ನಲ್ಲಿ 10 ಪ್ಯಾನ್ ಐ ಷಾಡೋ ಪ್ಯಾಲೆಟ್, 3 ಬ್ಲಶ್, 8 ಲಿಪ್ಸ್ಟಿಕ್, 3 ಲಿಪ್ ಲೈನರ್ ಇರಲಿದೆ. ಕಿಮ್ ಹೊಸ ಕಲೆಕ್ಷನ್ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದಾಳಂತೆ.ಏನಪ್ಪ ಇದು ವಯಸ್ಸು ಜಾಸ್ತಿಯಾಗುತ್ತಿದ್ದಂತೆ ಈಕೆಯ ಬೆತ್ತಲೆ ಪೋಟೋಗಳು ಕೂಡ ಜಾಸ್ತಿಯಾಗುತ್ತಿವೆ. ಅಷ್ಟಕ್ಕೂ ಈ ರೀತಿ ಅರೆನಗ್ನ ಪೋಟೋಗಳನ್ನೇಕೆ ಹೀಗೆ ಹಾಕುತ್ತಿದ್ದಾಳೆ ಎಂದು ಬಹುತೇಕ ಮಂದಿ ತಲೆಕೆಡಿಸಿಕೊಂಡಿದ್ದಾರೆ.

Tags