ಸುದ್ದಿಗಳು

‘ಕಿನಾರೆ’ ಹಾಡು ಬಿಡುಗಡೆ ಮಾಡಿದ ಡಾಲಿ

ಸದ್ಯ ಡಾಲಿ ಟಗರು ಸಿನಿಮಾದಿಂದ ಸಾಕಷ್ಟು ಸುದ್ದಿಯಾಗಿದ್ದರು. ಈ ಸಿನಿಮಾದ ನಂತರ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದಿರೋದು ಗೊತ್ತೇ ಇದೆ. ಈಗಾಗ್ಲೆ ಡಾಲಿ ಭೈರವ ಗೀತಾ ಸಿನಿಮಾ ಶೂಟಿಂಗ್‌ ನಲ್ಲಿ ಬ್ಯುಸಿಯಾಗಿದ್ದಾರೆ ಈ ಮಧ್ಯೆ ಕಿನಾರೆ ಸಿನಿಮಾದ ಹಾಡು ಬಿಡುಗಡೆ ಮಾಡಿದ್ದಾರೆ.

ತಿಂಗಳ ಪೂರ್ತಿ ಒಂದೊಂದೇ ಹಾಡನ್ನ ರಿಲೀಸ್ ಮಾಡೋದಾಗಿ ಹೇಳಿ, ಒಬೊಬ್ಬ ಸ್ಟಾರ್‌ ನಿಂದ ಒಂದೊಂದು ಹಾಡನ್ನ ರಿಲೀಸ್ ಮಾಡ್ತಿರೋ ಕಿನಾರೆ ಚಿತ್ರತಂಡ ಇದೀಗ ಯೋಗರಾಜ್ ಭಟ್ಟರು ಸಾಹಿತ್ಯ ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ, ಸುರೇಂದ್ರನಾಥ್ ಸಂಗೀತ ಸಂಯೋಜಿಸಿರುವ ಹಲೋ ಹೌವ್ ಆರ್ ಯೂ..ನಿಮ್ಮ ಊರೆಲ್ಲೆಲ್ಲಾ ಆರಾಮಾ..?  ಹಾಡನ್ನ ಡಾಲಿ ಧನಂಜಯ್ ರಿಂದ ರಿಲೀಸ್ ಮಾಡಿಸಿದ್ದಾರೆ.

ಈಗಾಗ್ಲೇ, ಧ್ರುವಾ ಸರ್ಜಾ ಒಂದು, ಪುನೀತ್ ರಾಜ್‌ಕುಮಾರ್ ಒಂದು ಹಾಡನ್ನ ರಿಲೀಸ್ ಮಾಡಿದ್ದ ಚಿತ್ರತಂಡ, ಇದೀಗ ಡಾಲಿಯಿಂದ ಈ ಸ್ಪೆಷಲ್ ಹಾಡನ್ನ ರಿಲೀಸ್ ಮಾಡಿಸಿದೆ. ಈ ಹಾಡನ್ನ ಕೇಳಿ ಡಾಲಿ ಭಟ್ಟರ ಈ ವಿಶೇಷ ಹಾಡಿನ ಬಗ್ಗದೆ ವಿಶೇಷವಾಗಿ ಮಾತನಾಡಿದ್ದಾರೆ. ಜೊತೆಗೆ ಕಿನಾರೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಂದ್ಹಾಗೆ ಹಲೋ ಹೌವ್ ಆರ್‌ಯೂ ಹಾಡಲ್ಲಿ ಶಮಂತ್ ಶೆಟ್ಟಿ ಮತ್ತು ಶ್ರುತಿ ನಂದೀಶ್ ಕಾಣಿಸಿಕೊಂಡಿದ್ದಾರೆ. ಈ ಹಾಡು ಕಿನಾರೆ ಚಿತ್ರದ ಹೈಲೈಟ್‌ ಗಳಲ್ಲಿ ಒಂದಾಗಿರಲಿದೆಯಂತೆ. ಕಿನಾರೆ ಚಿತ್ರವನ್ನ ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ರೆಡ್ ಪಲ್ ಮೂವೀಸ್ ನಿರ್ಮಾಣ ಮಾಡಿದೆ. ಮುಖ್ಯಪಾತ್ರದಲ್ಲಿ ಸತೀಶ್ ರಾಜ್ ಮತ್ತು ಗೌತಮಿ ಜಾದವ್ ಕಾಣಿಸಿಕೊಂಡಿದ್ದಾರೆ. ಈ ಹಾಡಿನೊಂದಿಗೆ ಮೂರು ಹಾಡುಗಳನ್ನ ರಿಲೀಸ್ ಮಾಡಿರೋ ಕಿನಾರೆ ಟೀಮ್, ಇನ್ನೆರಡೂ ಹಾಡುಗಳನ್ನು ರಿಲೀಸ್ ಮಾಡಿ, ನಂತರ ಟ್ರೈಲರ್ ಲಾಂಚ್ ಪ್ರೋಗ್ರಾಂಗೆ ಪ್ಲಾನ್ ಮಾಡ್ತಿದೆ.

 

Tags

Related Articles

Leave a Reply

Your email address will not be published. Required fields are marked *