ಸುದ್ದಿಗಳು

ಹೊಸಬರೊಂದಿಗೆ ಸಿನಿಮಾ ಮಾಡಲು ತಯಾರಿ ಮಾಡಿಕೊಂಡ ಕಿರಣ್ ಗೋವಿ

ಈ ಬಾರಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಮಾಡುತ್ತಿರುವ ನಿರ್ದೇಶಕರು

ಬೆಂಗಳೂರು.ಏ.13: ಚಂದನವನದಲ್ಲಿ ‘ಪಯಣ’, ‘ಸಂಚಾರಿ’, ‘ಪಾರು-ವೈಫ್ ಆಫ್ ದೇವದಾಸ್’, ‘ಯಾರಿಗೆ ಯಾರುಂಟು’ ಗಳಂತಹ ಮ್ಯೂಸಿಕಲ್ ಹಿಟ್ ಸಿನಿಮಾಗಳನ್ನು ನೀಡಿದಂತ ನಿರ್ದೇಶಕ ಕಿರಣ್ ಗೋವಿ ಈ ಬಾರಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಹೌದು, ಕಳೆದ ಫೆಬ್ರವರಿ ತಿಂಗಳಲ್ಲಿ ಕಿರಣ್ ಗೋವಿ ನಿರ್ದೇಶನದ ‘ಯಾರಿಗೆ ಯಾರುಂಟು’ ರಿಲೀಸ್ ಆಗಿ ತಕ್ಕ ಮಟ್ಟಿಗೆ ಬಾಕ್ಸ್ ಆಫೀಸ್ ನಲ್ಲಿ ಗೆಲುವು ಸಾಧಿಸಿತ್ತು. ಈ ಚಿತ್ರದ ಬಳಿಕ ಅವರು ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಕುತೂಹಲವಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಕಿರಣ್ ಗೋವಿ ಇದೀಗ ಹೊಸ ತಂಡದ ಜೊತೆಗೊಂದು ಹೊಸತರಹದ ಚಿತ್ರ ಕೊಡಲು ಅಣಿಯಾಗುತ್ತಿದ್ದಾರೆ. ಆ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲವಾದರೂ ಇದೊಂದು ಪಕ್ಕಾ ಸ್ವಮೇಕ್ ಕಥೆಯಾಗಿದೆ. ಇನ್ನು ಚಿತ್ರದಲ್ಲಿ ಮೂವರು ನಾಯಕರಿದ್ದು, ಒಬ್ಬಳೇ ನಾಯಕಿಯಿರುತ್ತಾಳೆ.

ಸದ್ಯಕ್ಕೆ ಮೂವರು ಹೀರೋಗಳ ಆಯ್ಕೆ ಪ್ರಕ್ರಿಯೆಯಲ್ಲಿರುವ ಕಿರಣ್ ಗೋವಿ, ಈಗಿನ ಟ್ರೆಂಡ್ಗೆ ತಕ್ಕಂತಹ ಸಿನಿಮಾ ಕೊಡಲು ಉತ್ಸಾಹದಲ್ಲಿದ್ದಾರೆ. ಈ ಬಾರಿಯೂ ಸಹ ಹೊಸ ಆಯಾಮದೊಂದಿಗೆ ಕಥೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದು, ಹಿಂದಿನ ಚಿತ್ರಗಳಂತೆಯೇ ಈ ಬಾರಿಯೂ ಸಹ ಹಾಡುಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಇನ್ನು ಮತ್ತೊಂದು ವಿಶೇಷವೆಂದರೆ, ಈ ಚಿತ್ರವು ಕನ್ನಡ ಸೇರಿದಂತೆ ಒಟ್ಟು ಮೂರು ಭಾಷೆಗಳಲ್ಲಿ ಮೂಡಿ ಬರಲಿದೆ. ಹೌದು, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಸಿದ್ಧಗೊಳ್ಳುತ್ತಿದೆ. ಈ ಮೂಲಕ ಹೊಸದೊಂದು ಕಥೆ ಮಾಡಿ ಚಿತ್ರ ಮಾಡಲು ಹೊರಟಿದ್ದಾರೆ ನಿರ್ದೇಶಕರು. ಅಂದಹಾಗೆ, ಚಿತ್ರಕ್ಕೆ ಇಷ್ಟರಲ್ಲೇ ಪೂಜೆ ನೆರವೇರಲಿದೆ.

ಆರ್ ಸಿಬಿ ಗೆಲುವಿಗೆ “ಕರ್ನಾಟಕ ಈಸ್ ಹ್ಯಾಪಿ’ ಎಂದ ರೋರಿಂಗ್ ಸ್ಟಾರ್!!

#kirangovi, #nextmovie, #balkaninews #filmnews, #payana, #sanchari, #kannadasuddigalu

Tags