ಸುದ್ದಿಗಳು

ಪ್ರೇಕ್ಷಕರಿಗೆ ಇಷ್ಟವಾಗದ ಕಾರಣ ‘ಕಿರಿಕ್ ಲವ್ ಸ್ಟೋರಿ’ಗೆ ಹೊಸ ಎಂಡಿಂಗ್..!!!

ಕನ್ನಡ, ತಮಿಳು ಮತ್ತು ಮಲೆಯಾಳಿ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ

ಬೆಂಗಳೂರು.ಫೆ.21: ಕಳದ ವರ್ಷದಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಮಲೆಯಾಳಂನ ‘ಒರು ಅಡಾರ್ ಲವ್ ಸ್ಟೋರಿ’ ಸಿನಿಮಾ ಮಲೆಯಾಳಂ, ತಮಿಳು ಸೇರಿದಂತೆ ಕನ್ನಡಕ್ಕೂ ಡಬ್ ಆಗಿ ಪ್ರೇಮಿಗಳ ದಿನದಂದು ರಿಲೀಸ್ ಆಗಿತ್ತು.

ಹೊಸ ಎಂಡಿಂಗ್

ಮಲೆಯಾಳಂನ ಈ ಚಿತ್ರ ಕನ್ನಡದಲ್ಲಿ ‘ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಡಬ್ ಆಗಿತ್ತು. ಆದರೆ ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಚಿತ್ರದ ಕ್ಲೈಮ್ಯಾಕ್ಸ್ ಇಷ್ಟವಾಗಿರಲಿಲ್ಲ. ಹೀಗಾಗಿ ಚಿತ್ರ ತಂಡ ಹೊಸ ಎಂಡಿಂಗ್ ದೃಶ್ಯವನ್ನು ಚಿತ್ರೀಕರಿಸಿ ಸಿನಿಮಾ ಬಿಡುಗಡೆಗೊಳಿಸಿದೆ.

ಒಮರ್ ಲುಲು ನಿರ್ದೇಶನದ ಈ ಸಿನಿಮಾ ತೆರೆ ಕಂಡ ಎಲ್ಲಾ ಭಾಷೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಿಯಾ ವಾರಿಯರ್ ಅವರ ಕಣ್ಸನ್ನೆಯ ದೃಶ್ಯವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದ ಕಾರಣ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿತ್ತು.

ಆದರೆ ಜನರಿಂದ ಸಿನಿಮಾ ಬಗ್ಗೆ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಂದ ಹಾಗೆ ಚಿತ್ರವು ಪ್ರೌಢಶಾಲಾ ವಿದ್ಯಾರ್ಥಿಗಳ ಜೀವನ ಮತ್ತು ಓದುಗಳ ತೋರಿಸಿಕೊಡುತ್ತದೆ. ಚಿತ್ರದಲ್ಲಿ ನಟಿಸಿದ ಎಲ್ಲರ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ.

ಇನ್ನು ಈ ಚಿತ್ರದಿಂದ ಕನ್ನಡದಲ್ಲಿಯೂ ಡಬ್ಬಿಂಗ್ ಚಿತ್ರಗಳು ತೆರೆ ಕಾಣಲು ಸಿದ್ದತೆ ನಡೆಸುತ್ತಿವೆ. ಸದ್ಯ ತಮಿಳಿನ ಅಜಿತ್ ನಟಿಸಿರುವ ಚಿತ್ರವೊಂದು ಕನ್ನಡದಲ್ಲಿ ‘ಜಗಮಲ್ಲ’ ಎಂಬ ಹೆಸರಿನಲ್ಲಿ ರಿಲೀಸ್ ಆಗಲು ತಯಾರಿ ನಡೆಸುತ್ತಿದೆ. ಆದರೆ ಡಬ್ಬಿಂಗ್ ಚಿತ್ರಗಳು ಕನ್ನಡದಲ್ಲಿ ಅಷ್ಟೊಂದು ಯಶಸ್ವಿಯಾಗುತ್ತಿಲ್ಲ ಎಂದೇ ಹೇಳಬಹುದು.

ಖಾಕಿ ತೊಟ್ಟು ಖದರ್ ತೋರಿಸಲು ರೆಡಿಯಾದ ಚಿರು!!

#kiriklovestory, #balkaninews #oruadaralovestory, #balkaninews, #dubbedfilm

Tags

Related Articles