ಸುದ್ದಿಗಳು

ಹಿಟ್ ಆಯ್ತು ಕನ್ನಡಕ್ಕೆ ಡಬ್ ಆದ ‘ಕಿರಿಕ್ ಲವ್ ಸ್ಟೋರಿ’ ಚಿತ್ರದ ಟ್ರೈಲರ್ ಮತ್ತು ಹಾಡುಗಳು..

ಏಕಕಾಲಕ್ಕೆ ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ

ಬೆಂಗಳೂರು.ಫೆ.12

ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಅನೇಕ ಹೋರಾಟಗಳು ಸಹ ನಡೆದಿವೆ. ಇನ್ನು ಪರ-ವಿರೋಧ‍ ಹೋರಾಟಗಳ ನಡುವೆ ತಮಿಳಿನ ಕೆಲವು ಚಿತ್ರಗಳು ಡಬ್ ಆಗಿ ರಿಲೀಸ್ ಸಹ ಆಗಿವೆ. ಈಗ ಮಲೆಯಾಳಂನ ‘ಒರು ಅಡಾರ್ ಲವ್ ಸ್ಟೋರಿ’ ಕನ್ನಡಕ್ಕೆ ‘ಕಿರಿಕ್ ಲವ್ ಸ್ಟೋರಿ’ ಆಗಿ ಡಬ್ ಆಗಿದೆ.

ಡಬ್ ಆದ ಸಿನಿಮಾ

ಫೆ. 14 ರಂದು ದೇಶಾದ್ಯಂತ ತೆರೆ ಕಾಣುತ್ತಿರುವ ‘ಒರು ಅಡಾರ್ ಲವ್ ಸ್ಟೋರಿ’ ಮಲೆಯಾಳಂ, ತಮಿಳು ಮತ್ತು ಕನ್ನಡದ ಅವತರಣಿಕೆಯಲ್ಲೂ ತೆರೆ ಕಾಣುತ್ತಿದೆ. ವಿಶೇಷವೆಂದರೆ, ಇಂದಿನಿಂದಲೇ ಈ ಚಿತ್ರದ ಮುಂಗಡ ಬುಕ್ಕಿಂಗ್ ಶುರುವಾಗಿದೆ.

ಹಾಡುಗಳು ಮತ್ತು ಟ್ರೈಲರ್

ಈಗಾಗಲೇ ‘ಕಿರಿಕ್ ಲವ್ ಸ್ಟೋರಿ’ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಹಿಟ್ ಆಗಿದ್ದು, ನೋಡುಗರಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ. ಇನ್ನು ಚಿತ್ರೀಕರಣ ಹಂತದಲ್ಲಿರುವಾಗಲೇ ರಿಲೀಸ್ ಮಾಡಿದ್ದ ಪ್ರಿಯಾ ವಾರಿಯರ್ ಕಣ್ಣು ಹೊಡೆಯುವ ಒಂದು ದೃಶ್ಯ ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಿತ್ತು.

ಆನಂತರದಲ್ಲಿ ಪ್ರಿಯಾ ವಾರಿಯರ್ ದೇಶದ ಜನಪ್ರಿಯ ಕ್ರಷ್ ಹುಡುಗಿಯಾಗಿ ಹೊರ ಹೊಮ್ಮಿದ್ದರು. ಸ್ಕೂಲ್ ಹುಡುಗರ ಪ್ರೇಮಕತೆ ಇರುವ ಚಿತ್ರ ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿತು.

ಪ್ರಿಯಾ ವಾರಿಯರ್ ದೊಡ್ಡ ಸ್ಟಾರ್ ನಟಿಯಂತೆ ಪ್ರಚಾರ ಪಡೆದರು. ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ಸ್ಟಾರ್ಸ್‌ ಗಳೂ ಅವರ ನಟನೆಗೆ ಫಿದಾ ಆದರು. ಇದಾದ ನಂತರ ಇನ್ನೊಂದು ಟೀಸರ್ ರಿಲೀಸ್ ಮಾಡಲಾಯಿತು. ಇದೂ ಕೂಡಾ ಹಿಟ್ ಆಯಿತು. ಈ ನಡುವೆ ವಿವಾದಕ್ಕೂ ಕಾರಣವಾಗಿತ್ತು.

ಇದುವರೆಗೂ ಬರೀ ತೆಲುಗು-ತಮಿಳು ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವುದು ಸಾಮಾನ್ಯವಾಗಿತ್ತು. ಆದರೀಗ ಮಲಯಾಳಂನ ‘ಒರು ಅಡಾರ್ ಲವ್’ ಕನ್ನಡಕ್ಕೆ ಡಬ್ ಆಗುತ್ತಿರುವುದು ವಿಶೇಷವಾಗಿದೆ. ಈ ಚಿತ್ರಕ್ಕೆ ಒಮರ್ ಲುಲು ನಿರ್ದೇಶನ ಮಾಡಿದ್ದಾರೆ.

ನಿಗೂಢವಾಗಿ ಸಾವನ್ನಪ್ಪಿದ 90ರ ದಶಕದ ಜನಪ್ರಿಯ ಖಳನಟ

#kiriklovestory, #balkaninews #filmnews, #priyawarier, #oruadaralovestory, #dubbedfilm

Tags