ಸುದ್ದಿಗಳು

ಕೊಡಗು ಜಿಲ್ಲೆಯ ಸುಸಜ್ಜಿತ ಆಸ್ಪತ್ರೆಗೆ ಅಭಿಯಾನ ಶುರುಮಾಡಿದ ತಾರೆಯರು

ನಿನ್ನೆಯಿಂದ ಟ್ವಿಟರ್ ನಲ್ಲಿ #WeNeedEmergencyHospitalInKodagu ಎಂಬ ಅಭಿಯಾನ ಶುರುವಾಗಿದೆ. ಈಗಾಗಲೇ ಈ ಅಭಿಯಾನಕ್ಕೆ ಹಲವಾರು ತಾರೆಯರು ಹಾಗೂ ತಂತಜ್ಞನರು ಬೆಂಬಲ ನೀಡಿದ್ದಾರೆ. ಇದರ ಸಲುವಾಗಿ ನಿನ್ನೇಯಷ್ಟೇ  ಶಿವರಾಜ್ ಕುಮಾರ್ ವಿಡಿಯೋ ಮಾಡುವ ಮೂಲಕ ಈ ವಿಚಾರವಾಗಿ ಜಾಗೃತಿಮೂಡಿಸಿದ್ದರು. ಇದೀಗ ಚಿತ್ರರಂಗದ ಬಹಳಷ್ಟು ತಾರೆಯರು ಈ ವಿಚಾರವಾಗಿ ದ್ವನಿ ಎತ್ತಿದ್ದಾರೆ.

ಹೌದು, ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು.. ಎಂದು ಬಹಳಷ್ಟು ಜನರು ಟ್ವೀಟ್ ಮಾಡುತ್ತಿದ್ದು, ಈ ಮೂಲಕ ಸರ್ಕಾರದ ಹಾಗೂ ಜನ ಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುವುದಾಗಿದೆ. ರಶ್ಮಿಕಾ ಮಂದಣ್ಣ, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಛ, ದಿಶಾ ಪೂವಯ್ಯ ಈ ಅಭಿಯಾನದ ಕುರಿತಂತೆ ಮಾತನಾಡಿದ್ದು, ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ನೀಡುತ್ತಿದ್ದಾರೆ.

 

View this post on Instagram

 

#weneedemergencyhospitalinkodagu

A post shared by Harshika Poonacha (@harshikapoonachaofficial) on

ಇದರ ಬಗ್ಗೆ ಶಿವಣ್ಣ ‘ಕೊಡಗು ಎಂದಿಗೂ ಕರ್ನಾಟಕಕ್ಕೆ ಸೇರಿದ್ದು. ನಮ್ಮ ದೇಶ ಕಾಯುವ ಎಷ್ಟೋ ಯೋಧರು ಕೊಡಗಿನವರಾಗಿದ್ದಾರೆ. ಅಲ್ಲಿನ ಜನರಿಗೆ ಆಸ್ಪತ್ರೆಯ ವ್ಯವಸ್ಥೆ ಬಹಳ ಕಡಿಮೆ ಇದೆ ಎಂದು ಕೇಳ್ಪಟ್ಟೆ. ಅಲ್ಲಿ ಆಸ್ಪತ್ರೆ ವ್ಯವಸ್ಥೆಗಳು ಆಗಲಿ ಎಂದು ಚಿತ್ರರಂಗದ ಪರವಾಗಿ ನಾನು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಾವು ನಿಮ್ಮ ಜೊತೆಗೆ ಇದ್ದೇವೆ’ ಎಂದಿದ್ದಾರೆ.

ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಕೊಡಗು ಜಿಲ್ಲೆಯಲ್ಲಿ ಇಂದಿಗೂ ಸಹ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲ. ಅನಾರೋಗ್ಯ, ಅಪಘಾತ ಏನಾದರೂ ಆದರೆ ಇಲ್ಲಿಯ ಜನರು ಮಂಗಳೂರು, ಬೆಂಗಳೂರು, ಮೈಸೂರು, ಸುಳ್ಯಗೆ ಹೋಗಬೇಕಾಗಿದೆ.

ಹೀಗೆ ಹೋಗುವಾಗಲೇ ಆಂಬುಲೆನ್ಸ್ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಒಂದು ಒಳ್ಳೆಯ ಆಸ್ಪತ್ರೆಯ ಅಗತ್ಯ ಇದೆ ಎಂದು ಕೊಡಗು ಜನರು ಮನವಿ ಮಾಡುತ್ತಿದ್ದಾರೆ. ಈ ಅಭಿಯಾನಕ್ಕೆ ಶಿವಣ್ಣ ಸಹ ಬೆಂಬಲ ನೀಡಿದ್ದಾರೆ.

ಪ್ರೇಕ್ಷಕರ ಮನಗೆದ್ದ ‘ಮಾಂಗಲ್ಯಂ ತಂತುನಾನೇನಾ’ ತೇಜಸ್ವಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ!!

#balkaninews #kodagu #shivararajkumar

 

Tags