ಸುದ್ದಿಗಳು

ಬಾಲಕನ ನೋವು ಮರೆಯಲು ನೆರವಾದ ರಜಿನಿ…!

ರಜಿನಿ ಸಿನಿಮಾ ನೋಡಿ ನೋವು ಮರೆತ ಬಾಲಕ

13 ವರ್ಷದ ಬಾಲಕ ಕುಷಾಲ್‌ಗೆ ಹೃದಯ ಬದಲಾವಣೆ ಮಾಡಲಾಗಿದೆ. ಹೃದಯ ಬದಲಾವಣೆ ನಂತರ ಅವರ ನೋವನ್ನು ಮರೆಯಲು ಇದೀಗ ರಜಿನಿಯ ಸಿನಿಮಾ ತೋರಿಸಲಾಗಿದೆ.

ಚೆನೈ, ಸೆ.05: ಕೆಲವೊಮ್ಮೆ ತಾವು ಇಷ್ಟಪಡುವ ನಟರ ಹಾಡುಗಳು ಸಿನಿಮಾಗಳು ಎಂಥಹ ನೋವನ್ನೂ ಮರೆಸುತ್ತವೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಈಗಾಗಲೇ ತಮ್ಮ ನೋವನ್ನು ಹಾಡು ಕೇಳುತ್ತ, ನೆಚ್ಚಿನ ನಟರ ಸಿನಿಮಾ ನೋಡುತ್ತಾ ನೋವು ಮರೆತಿರೋ ಉದಾಹರಣೆಗಳು ಕೂಡ ಇವೆ. ಇದೀಗ ಹೃದಯ ಬದಲಾವಣೆಗೊಂಡಿರುವ ಹುಡುಗನ ನೋವು ಮರೆಯಲು ರಜಿನಿ ನೆರವಾಗಿದ್ದಾರೆ.ಕುಷಾಲ್ ರಜಿನಿಯ ದೊಡ್ಡ ಅಭಿಮಾನಿ

ಹೌದು, ೧೩ ವರ್ಷದ ಬಾಲಕ ಕುಷಾಲ್‌ಗೆ ಹೃದಯ ಬದಲಾವಣೆ ಮಾಡಲಾಗಿದೆ. ಹೃದಯ ಬದಲಾವಣೆ ನಂತರ ಅವರ ನೋವನ್ನು ಮರೆಯಲು ಇದೀಗ ರಜಿನಿಯ ಸಿನಿಮಾ ತೋರಿಸಲಾಗಿದೆ. ಇನ್ನು ವಿಶಾಖಪಟ್ಟಣದಿಂದ ಬೆಂಗಳೂರಿಗೆ ಬಂದು ಹಾರ್ಟ್ ಆಪರೇಷನ್ ಮಾಡಲಾಗಿದೆ. ಇನ್ನು ಕುಷಾಲ್ ರಜಿನಿಯ ದೊಡ್ಡ ಅಭಿಮಾನಿ. ಈ ಅಭಿಮಾನಿಯ ನೋವು ಮರೆಸಲು ಅವರು ಇದ್ದ ಕಡೆಯೇ ರಜಿನಿಯ ಸಿನಿಮಾ ಒಂದನ್ನು ಹಾಕಿ ತೋರಿಸಲಾಗಿದೆ. ಇನ್ನು ಈ  ಸಿನಿಮಾ ನೋಡಿರೋ ಕುಷಾಲ್ ತುಂಬಾ ಖುಷಿಯಾಗಿದ್ದಾರೆ ಜೊತೆಗೆ ಗುಣಮುಖರಾಗುತ್ತಿದ್ದಾರಂತೆ.

Tags

Related Articles