ಸುದ್ದಿಗಳು

ಭಾಷೆ ಹಾಗು ಗಡಿ ವ್ಯಾಪ್ತಿ ಮೀರಿದ ಅಭಿಮಾನಿಗಳ ಮೌನ ಪ್ರತಿಭಟನೆ!

ನಮಗೆಲ್ಲ ತಿಳಿದು ತಿಳಿಯದೇ ಇರುವುದು ತಮಿಳಿಗರ ಹಾಗು ಶ್ರೀಲಂಕಿಗರ ಮದ್ಯೆ ಸುಮಾರು ವರ್ಷಗಳಿಂದ ಕೋಲ್ಡ್ ವಾರ್ ನಡೆಯುತ್ತಲೇ ಇದೆ. ಮುಖ್ಯವಾಗಿ ಹೇಳುವುದಾದರೆ ಅಲ್ಲಿನ ಸಾಗರ ಸಂಪನ್ಮೂಲಗಳ ಮೇಲೆ ಆಧರಿಸಿರುವ ಜೀವನ ವ್ಯವಸ್ಥೆಯಲ್ಲಿ ತಮಿಳಿಗರ ಹಾಗು ಶ್ರೀಲಂಕಿಗರ ಮದ್ಯೆ ಕೆಲ ವರ್ಷಗಳ ಹಿಂದೆ ಕೋಲ್ಡ್ ವಾರ್ ನಡೆದಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ತಮಿಳಿಗರು ಶ್ರೀಲಂಕಾದ ಜೈಲಿನಲ್ಲಿ ತಮ್ಮ ಹೋರಾಟದ ಜೀವನವನ್ನು ಸವೆಸುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಶ್ರೀಲಂಕಾದ ಅನೇಕರು ತಮ್ಮ ಹೋರಾಟದ ಜೀವನವನ್ನು ತಮಿಳಿನಾಡಿನ ಜೈಲಿನಲ್ಲಿ ಸವೆಸಿದ್ದಾರೆ ಈ ಹಿನ್ನೆಲೆಯಲ್ಲಿ LTTE ಸಂಘಟನೆಯ ಪ್ರಾಮುಖ್ಯತೆ ತುಂಬಾ ಇದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಜೈಲಿನಲ್ಲಿರುವ ತಮಿಳಿನ ಕೈದಿಗಳನ್ನು ಬಿಡುಗಡೆಗೊಳಿಸಿವುದರ ಮೂಲಕ ಅವರಿಗೆ ಮರುಜನ್ಮ ನೀಡಲು 444ನೇ ತಾಯಂದಿರ ದಿನದ ಪ್ರಯುಕ್ತ ಕಾಲಿವುಡ್ ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ಅವರ ಶ್ರೀಲಂಕಾದ ಅಭಿಮಾನಿಗಳು ತಮಿಳಿಗರ ಬಿಡುಗಡೆಗೆ ಮಾನವ ಸರಪಳಿ ರಚಿಸುವುದರ ಮೂಲಕ ಮೌನ ಪ್ರತಿಭಟನೆಗೆ ಮುಂದಾಗಿರುವುದಲ್ಲದೇ ತಮ್ಮ ಅಂತರಾಳದ ದುಖಃವನ್ನು ವ್ಯಕ್ತ ಪಡಿಸುವುದರ ಮೂಲಕ ಶ್ರೀಲಂಕಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಹೇಳುವುದಾದರೆ ಒಬ್ಬ ಸಿನಿಮಾ ನಟನ ಅಭಿಮಾನಿಗಳು ಭಾಷೆ ಹಾಗು ಗಡಿ ವ್ಯಾಪ್ತಿಯನ್ನು ಮೀರಿ ತಮ್ಮ ಮಾನವೀಯತೆಯನ್ನು ಮೆರೆದಿರುವುದು ಇಡೀ ಸಿನಿಮಾ ಲೋಕಕ್ಕೆ ಹಾಗು ಇಳಯ ದಳಪತಿ ವಿಜಯ್ ಅವರಿಗೆ ಮೆಚ್ಚುಗೆ ತರುವಂತಹದ್ದು ಎಂದು ಪ್ರಶಂಶಿಸಬಹುದು. ಜೊತೆಗೆ ಈ ಹೋರಾಟಕ್ಕೆ ನಟ ವಿಜಯ್ ಅವರೂ ಸಹ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಹಾಗು ಈ ಹೋರಾಟದ ಹಿನ್ನೆಲೆಯಲ್ಲಿ ಶ್ರೀಲಂಕಾದ ಸರ್ಕಾರ ಈ ಮನವಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಸ್ವೀಕರಿಸಿ ಈ ವಿಷಯವನ್ನು ಚರ್ಚಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ.

Tags

Related Articles

Leave a Reply

Your email address will not be published. Required fields are marked *