ಸುದ್ದಿಗಳು

‘2.0’ ಸಿನಿಮಾ ಕ್ಲೈಮಾಕ್ಸ್ ರಹಸ್ಯ ಬಿಚ್ಚಿಟ್ಟ ಸಂಗೀತ ನಿರ್ದೇಶಕ….

ರಜಿನಿಕಾಂತ್ ಸಿನಿಮಾಗಳು ಅಂದ್ರೆ ರಿಲೀಸ್ ಗೂ ಮೊದಲೇ ಸಾಕಷ್ಟು ಸುದ್ದಿಯಲ್ಲಿರುತ್ತವೆ. ಯಾಕಂದ್ರೆ ಅವರ ಸಿನಿಮಾಗಳೇ ವಿಭಿನ್ನವಾಗಿರುತ್ತವೆ. ಇವರ ಬಹು ನಿರೀಕ್ಷೆಯ ಸಿನಿಮಾ ‘೨.೦’. ಈಗಾಗ್ಲೆ ರಿಲೀಸ್ ಗೂ ಮೊದಲೇ ಸಾಕಷ್ಟು ಸುದ್ದಿಯಲ್ಲಿರೋ ಈ ಸಿನಿಮಾದ ಕ್ಲೈಮಾಕ್ಸ್ ಇದೀಗ ರಿವೀಲ್ ಆಗಿದೆ.

ಹೌದು, ಸೂಪರ್ ಸ್ಟಾರ್ ರಜಿನಿಕಾಂತ್, ಆಮಿಜಾಕ್ಸನ್, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ, ಶಂಕರ್ ನಿರ್ದೇಶನದಲ್ಲಿ, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗ್ತಿರೋ ೨.೦ ಸಿನಿಮಾ. ಸದ್ಯ  ಈ ವರ್ಷ ಪಕ್ಕಾ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು. ರೋಬೋ ಸೀಕ್ವೆಲ್ ಅಂತ ಹೇಳಲಾಗ್ತಿರೋ ೨.೦ ಸಿನಿಮಾದ ಕ್ಲೈಮಾಕ್ಸ್ ಕೂಡ ಅಷ್ಟೆ ಚೆನ್ನಾಗಿದೆಯಂತೆ. ಒಟ್ಟಾರೆ ಚಿತ್ರದ ಖರ್ಚುವೆಚ್ಚ

‘೨.೦’ ಸಿನಿಮಾದ ಬಜೆಟ್ ಬರೊಬ್ಬರಿ 450 ಕೋಟಿ ರೂಪಾಯಿ, ಲೈಕಾ ಪ್ರೊಡಕ್ಷನ್ಸ್ ಇಷ್ಟು ದೊಡ್ಡ ಬಜೆಟ್‌ ನಲ್ಲಿ ಹಾಲಿವುಡ್‌ ನ ಮೀರಿಸುವಂತಹ ಸಿನಿಮಾ ಮೇಕಿಂಗ್‌ ನ ಮಾಡ್ತಿದೆ. ಆದ್ರೆ, ಅದು ದಿನೇ ದಿನೇ ದುಡ್ಡು ತಿನ್ನುತ್ತಲೇ ಇದೆ. ಮಾಡ್ರನ್ ಟೆಕ್ನಾಲಜಿಯನ್ನ ಅಳವಡಿಸಿಕೊಂಡು ಮಾಡ್ತಿರೋ ೨.೦ ಸಿನಿಮಾದ ವಿಎಫ್‌ಎಕ್ಸ್‌ಗೆ ಇನ್ನೂ ಹಣ ಬೇಕಾಗಿದೆ. ಈಗಾಗ್ಲೇ ೪೫೦ಕೋಟಿ ರೂಪಾಯಿಯನ್ನ ಖರ್ಚು ಮಾಡಿಸಿಕೊಂಡಿರೋ ಚಿತ್ರ, ಇನ್ನೂ ಹಣ ಬೇಕು ಅಂತ ಕೇಳ್ತಿದೆ. ಆದ್ರೆ ಈಗಾಗ್ಲೇ ನಿರ್ಮಾಪಕರ ಜೇಬು ಖಾಲಿಯಾಗಿದೆ. ಈ ನಡುವೆ ಸಿನಿಮಾ ಡಿಲೇ ಆಗ್ತಿರೋದ್ರಿಂದ ವಿತರಕರು ಹಣವಾಪಸ್ ಕೇಳ್ತಿದ್ದಾರೆ. ಅನ್ನೋ ಮಾತುಗಳು ಕೂಡ ಕೇಳಿ ಬಂದಿದ್ವು. ಇದೀಗ ಈ ಸಿನಿಮಾದ ಕ್ಲೈಮಾಕ್ಸ್ ಬಗ್ಗೆ ಸಂಗೀತ ಮಾಂತ್ರಿಕ ರೆಹಮಾನ್ ಬಾಯ್ಬಿಟ್ಟಿದ್ದಾರೆ.ಸಂಗೀತ ನಿರ್ದೇಶಕರ ಮಾತು

ಈ ಚಿತ್ರಕ್ಕೆ ಸಂಗೀತ ನೀಡಿರೋ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಬಾಯಿಬಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದ್ರಲ್ಲಿ ಮಾತನಾಡ್ತಾ ಈ ಚಿತ್ರ ನೀವ್ಯಾರೂ ಊಹಿಸಲಾಗದಷ್ಟು ಅದ್ಭುತವಾಗಿದೆ. ಇಡೀ ಕ್ಲೈಮ್ಯಾಕ್ಸ್ ಒಂದೇ ಸೀನ್‌ನಲ್ಲಿದ್ಯಂತೆ. ಅದೂ ಅದ್ಧೂರಿಯಾಗಿದೆ. ಅಂತ ಹೇಳಿದ್ದಾರೆ. ಇಷ್ಟೇ ಅಲ್ಲ, ಸಿಕ್ಕಾಪಟ್ಟೆ ಟ್ವಿಸ್ಟ್‌ನೊಂದಿಗೆ ನೋಡುಗರಿಗೆ ಒಂದು ಸಲ ಎದೆ ಜುಮ್ಮೆನ್ನಲಿದ್ಯಂತೆ.ನಿರ್ದೇಶಕರ ಮಾತುಗಳು

ಇನ್ನು ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಚಿತ್ರ ನಿರ್ದೇಶಕ ಶಂಕರ್ ಇದೊಂದು ಭಾರತ ನಿರ್ಮಿತ ಹಾಲಿವುಡ್ ಸಿನಿಮಾ. ನಾನು ಆರಂಭದಲ್ಲಿ ಬರೆದಿದ್ದ ಸ್ಕ್ರಿಪ್ಟ್‌ನ ತೆರೆ ಮೇಲೂ ಹಾಗೆಯೇ ತರಲಾಗಿದೆ. ಅಲ್ದೇ, ಚಿಟ್ಟಿಯ ಇಂಟ್ರಡಕ್ಷನ್ ಮತ್ತು ಕ್ಲೈಮ್ಯಾಕ್ಸ್ ಭಾಗವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ ಅಂದಿದ್ರು. ವಿಶೇಷ ಅಂದ್ರೆ, ಚಿತ್ರಕ್ಕೆ ನೈಜತೆಯನ್ನು ಒದಗಿಸಲು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ವರ್ಚುವಲ್ ಕ್ಯಾಮೆರಾ ಬಳಸಿ ವಿಎಫ್‌ಎಕ್ಸ್ ಮಾಡಲಾಗಿದೆ.

ಈ ವರ್ಷದ ಆಗಸ್ಟ್ ತಿಂಗಳಲ್ಲಿ ತಪ್ಪಿದ್ದಲ್ಲಿ, ದೀಪಾವಳಿ ಹಬ್ಬಕ್ಕೆ ಸಿನಿಮಾವನ್ನ ರಿಲೀಸ್ ಮಾಡೋದಾಗಿ ಹೇಳಿದ್ದ ಚಿತ್ರತಂಡ ಈಗ ಹಿಂದಕ್ಕೆ ಸರೀತಿದೆ. ಹೌದು, ರೋಬೋ ಸೀಕ್ವೆಲ್ ಅಂತ ಹೇಳಲಾಗ್ತಿರೋ ‘೨.೦’ ಸಿನಿಮಾ ಈ ವರ್ಷ ರಿಲೀಸ್ ಆಗೋದಿಲ್ಲ. ಮುಂದಿನ ವರ್ಷ ಅಂದ್ರೆ, ೨೦೧೯ರ ಸಮ್ಮರ್‌ಗೆ ರಿಲೀಸ್ ಮಾಡೋದಕ್ಕೆ ಚಿತ್ರತಂಡ ನಿರ್ಧರಿಸಿದೆ. ಆದರೆ ಈ ಸಿನಿಮಾ ಕ್ಲೈ ಮಾಕ್ಸ್ ಹೇಳಿದ್ದು ನೋಡೊದ್ರೆ ಈ ವರ್ಷನೇ ರಿಲೀಸ್ ಆಗುತ್ತಾ ಅನ್ನೋ ಕುತೂಹಲ ಕಾಡ್ತಿದೆ.

Tags