ಸುದ್ದಿಗಳು

‘ನಾಯಗನ್’ ಸಿನಿಮಾಗೆ ಪ್ರೇರಣೆಯಾದ ಚಿತ್ರಗಳ ಬಗ್ಗೆ ಮಾತನಾಡಿದ ಕಮಲ್…!

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಭಾರತೀಯ  ಚಿತ್ರರಂಗ ಕಂಡ ಅದ್ಬುತ ನಟ. ಕಮಲ್ ಹಾಸನ್ ಚಿತ್ರರಂಗಕ್ಕೆ ಬಂದು ಆರು ದಶಕಗಳು ಕಳೆದಿವೆ. ಈ ಆರು ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಮಾಡಿದ ಪ್ರಯೋಗಗಳು ಒಂದೆರಡಲ್ಲಾ. ಅದರಲ್ಲೂ ಕಮಲ್ ಹಾಸನ್ ಚಿತ್ರಗಳು ಸಿನಿಮಾ ತಂತ್ರಜ್ಞರನ್ನು ಪ್ರಭಾವಿಸಿದ್ದು ಹೆಚ್ಚು. ಸಂದರ್ಶನವೊಂದರಲ್ಲಿ ಮಾತನಾಡಿದ ಕಮಲ್ ಹಾಸನ್ ತಾವು ಹಲವು ಅಂತರಾಷ್ಟ್ರೀಯ ಸಿನಿಮಾಗಳ ತಂತ್ರಜ್ಞರ ಪ್ರಭಾವಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರಭಾವ ಬೀರಿದ ಚಿತ್ರಗಳು

ಕಮಲ್ ಹಾಸನ್ ನಟಿಸಿರುವ ಬಹುನಿರೀಕ್ಷಿತ ‘ವಿಶ್ವರೂಪಂ’ ಚಿತ್ರ ಆಗಸ್ಟ್ 10ರಂದು ತೆರೆಕಾಣಲಿದ್ದು, 2014ರಲ್ಲಿ ತೆರೆ ಕಂಡ ವಿಶ್ವರೂಪಂ ಚಿತ್ರದ ಮುಂದುವರೆದ ಭಾಗವಿದು. ವಿಶ್ವರೂಪಂ2’ನಲ್ಲಿ ಕಮಲ್‌ ರಾ ಏಜೆಂಟ್‌ ಪಾತ್ರ ನಿರ್ವಹಿಸಿದ್ದು, ರಾಹುಲ್ ಬೋಸ್ ಉಗ್ರನಾಗಿ ನಟಿಸಿದ್ದಾರೆ. ಈ ನಡುವೆ ತಮ್ಮ ಸಿನಿಬದುಕಿನಲ್ಲಿ ತಾವು ಇಷ್ಟಪಟ್ಟ ಹಾಗೂ ತಮ್ಮ ಮೇಲೆ ಪ್ರಭಾವ ಬೀರಿದ ಚಿತ್ರಗಳ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ ನಟ ಕಮಲ್ ಹಾಸನ್. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸನ್ ಅಂತರಾಷ್ಟ್ರೀಯ ಚಿತ್ರಗಳು ಹೇಗೆ ತನ್ನ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ.ಪ್ರಭಾವ ಬೀರಿದ ಅಂತರಾಷ್ಟ್ರೀಯ ಸಿನಿಮಾಗಳು

“ಬ್ರಿಟಿಷ್‌ ಮತ್ತು ಅಮೆರಿಕನ್‌ ನಿರ್ದೇಶಕರ ಪೈಕಿ ನನ್ನ ಮೇಲೆ ಮರ್ಲಿನ್‌ ಬ್ರ್ಯಾಂಡೋ ಹೆಚ್ಚು ಪ್ರಭಾವ ಬೀರಿದವರು. ಆಧುನಿಕ ಸಿನಿಮಾ ಜಗತ್ತಿನ ಬಗ್ಗೆ ಮಾತನಾಡುವುದಾದರೆ, ತಂತ್ರಜ್ಞರಾದ ಅಲೆನ್ ಪಾರ್ಕರ್‌, ಸ್ಟ್ಯಾನ್ಲೇ ಕ್ಯೂಬ್ರಿಕ್‌ ಇಷ್ಟವಾಗುತ್ತಾರೆ ಎಂದಿದ್ದಾರೆ ಕಮಲ್ ಹಾಸನ್. ಅಂದ ಹಾಗೆ ತಾನು ಪೋಲೆಂಡ್ ಚಿತ್ರನಿರ್ದೇಶಕ ಕ್ರಿಜ್ಠಾಫ್ ಕಿಸ್ಲೋಸ್ಕಿ ಅವರ ಬಹುದೊಡ್ಡ ಅಭಿಮಾನಿ, “ಇಂಗ್ಮರ್ ಬರ್ಗ್‌ಮನ್‌” ಬಳಿಕ ಕಿಸ್ಲೋಸ್ಕಿ ಅವರು ನನ್ನ ಪಾಲಿನ ಲೆಜೆಂಡ್ ಎಂದಿದ್ದಾರೆ ಕಮಲ್ ಹಾಸನ್.

ಇಷ್ಟವಾದ ಸಿನಿಮಾಗಳು

“ಪಾರ್ಕರ್ ನಿರ್ದೇಶನದ ‘ದಿ ವಾಲ್‌’ ನನ್ನನ್ನು ಬಹುವಾಗಿ ಕಾಡಿದ ಸಿನಿಮಾಗಳಲ್ಲಿ ಒಂದು.   ರಿಡ್ಲೇ ಸ್ಕಾಟ್‌ ತಮ್ಮ  ಪ್ರಥಮ ಚಿತ್ರ, ದಿ ಡ್ಯೂಯೆಲಿಸ್ಟ್ ನಲ್ಲಿ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ ರಿಡ್ಲೇ ಸ್ಕಾಟ್ ಅವರನ್ನು ಹೊಗಳಿದ್ದಾರೆ ಕಮಲ್ . ತಮ್ಮ ಗ್ಯಾಂಗ್‌ಸ್ಟರ್‌ ಸಿನಿಮಾ ‘ನಾಯಗನ್‌’ಗೆ  “ಸೆರ್ಗಿಯೋ ಲಿಯೋನ್‌ ಅವರ ‘ಒನ್ಸ್ ಅಪಾನ್‌ ಎ ಟೈಂ ಇನ್ ಅಮೆರಿಕ’ ಚಿತ್ರ ಪ್ರೇರಣೆಯಾಯಿತು. ಈ ಸಿನಿಮಾಗಳ ಪಾತ್ರ ಹಾಗೂ ಸಂಗೀತ ನಮ್ಮನ್ನು ಗೊತ್ತಿಲ್ಲದಂತೆ ಆವರಿಸಿಕೊಂಡು ಬಿಡುತ್ತದೆ ಹಾಗೂ ಕಾಡುತ್ತದೆ ಎಂದವರು ಮಾಧ್ಯಮಕ್ಕೆ ಹೇಳಿ ಸುದ್ದಿಯಾಗಿದ್ದಾರೆ.

Tags

Related Articles