ಸುದ್ದಿಗಳು

ಮತದಾನದ ಅರಿವು ಮೂಡಿಸುವ ‘ಕೊನೆ ಆಸೆ’ ಕಿರುಚಿತ್ರ

ಬೆಂಗಳೂರು, ಏ.16:

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿಯೂ ಮತಜಾಗೃತಿ ಕಾರ್ಯ ಭರದಿಂದ ಸಾಗಿದೆ.

ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು. ಯಾರೂ ಕೂಡ ತಮ್ಮ ಹಕ್ಕು ಚಲಾಯಿಸುವುದರಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಾನಾ ಬಗೆಯ ಜಾಹೀರಾತು, ಜಾಗೃತಿ ಮೂಡಿಸಲಾಗುತ್ತಿದೆ.

ಕೇಶವ್ ಚೇತನ್, ನವೀನ್ ಶೆಟ್ಟಿ ತಂಡ ಇದೀಗ ಮತದಾನ ಜಾಗೃತಿ ಬಗ್ಗೆ ಒಂದು ಕಿರು ಚಿತ್ರ ಮಾಡಿದ್ದಾರೆ. ‘ಕೊನೆ ಆಸೆ’ ಹೆಸರಿನ ಈ ಶಾರ್ಟ್​ ಫಿಲ್ಮ್​​ಗೆ ನಿರ್ದೇಶಕ ಯೋಗರಾಜ್ ಭಟ್ ಸಾಥ್ ನೀಡಿದ್ದಾರೆ. ಎಲೆಕ್ಷನ್ ದಿನದಂದು ಊರು ಬಿಡುವ ಯುವಕ, ಯುವತಿಯರಿಗೆ, ಐಟಿ ಉದ್ಯೋಗಿಗಳಿಗೆ ಮತ್ತು ಮತದಾನ ಮಾಡದಿರುವವರಿಗೆ ‘ಮತದಾನ ಪ್ರತಿಯೊಬ್ಬರ ಹಕ್ಕು, ಮರೆಯದೆ ವೋಟು’ ಮಾಡಿ ಅಂತ ಸಂದೇಶ ನೀಡುತ್ತದೆ ಈ ಕಿರುಚಿತ್ರ.

ಹಾಸಿಗೆಯಲ್ಲಿ ಮಲಗಿ ಕೊನೆಯುಸಿರೆಳೆಯುತ್ತಿರುವ ಅಜ್ಜಿಗೆ ವೋಟು ಮಾಡಬೇಕೆಂಬ ಆಸೆ. ಅದುವೇ ಕಿರುಚಿತ್ರದ ಮುಖ್ಯ ಸಾರಾಂಶ. ನಿರ್ದೇಶಕ ಪವನ್ ಓಡೆಯರ್ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕೇಶವ್ ಚೇತನ್, ವಿಶಾಲ್ ಎಂಬ ಕ್ಯಾಮರಾಮ್ಯಾನ್ ಹಳ್ಳಿ ಸೊಗಡಿನಲ್ಲಿ ಚಿತ್ರೀಕರಣ ಮಾಡಿದ್ದಾರೆ. ನವೀನ್ ಶೆಟ್ಟಿ ಈ ಕಿರು ಚಿತ್ರವನ್ನು ಸಂಕಲನ ಮಾಡಿದ್ದಾರೆ. ಎಟಿಎಂ ಸ್ಟುಡಿಯೋ ನಡಿಯಲ್ಲಿ ಈ ಕಿರುಚಿತ್ರ ನಿರ್ಮಿಸಲಾಗಿದೆ.

ವಿವಾಹದ ಸಂಭ್ರಮದಲ್ಲಿರುವ ‘ಕೆಜಿಎಫ್’ ಚಿತ್ರದ ವಿಲನ್

#balkaninews #sandalwood #kannadashortfilms #koneaasekannadashortfilm

Tags