ಸುದ್ದಿಗಳು

‘ಟೊರುನ್’ ನಲ್ಲಿ ಕೋಟಿಗೊಬ್ಬ 3 ಶೂಟಿಂಗ್

ಕೋಟಿಗೊಬ್ಬ 3 ಶೂಟಿಂಗ್ ಪೋಲಾಂಡ್ ನಲ್ಲಿ ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ. ಕಿಚ್ಚ & ಟೀಂ ಪೋಲಾಂಡ್ ನಲ್ಲಿ ಬೀಡು ಬಿಟ್ಟಿದೆ.

ಪೋಲಾಂಡ್ ನಲ್ಲಿ ಚೇಸಿಂಗ್‌ ದೃಶ್ಯವೊಂದರ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿ ರಾಯಭಾರಿಯನ್ನು ಭೇಟಿ ಮಾಡಿದ್ದಾರೆ.

ಈ ಚೇಸಿಂಗ್‌ ದೃಶ್ಯದ ಕೆಲ ಭಾಗವನ್ನು ಬೆಲ್‍ಗ್ರೇಡ್‌ನಲ್ಲಿ ಈಗಾಗಲೇ  ಶೂಟ್ ಮಾಡಿದ್ದಾರೆ. ಅದರ ಮುಂದುವರೆದ ಭಾಗವನ್ನು ಪೋಲೆಂಡ್‌ನಲ್ಲಿ ಶೂಟ್‌ ಮಾಡಲಾಗುತ್ತಿದೆ. ಚಿತ್ರವನ್ನು ಶಿವ ಕಾರ್ತಿಕ್‌ ನಿರ್ದೇಶನ ಮಾಡಿದ್ದಾರೆ


ಅಫ್‍ತಾಬ್ ಶಿವದಾಸಾನಿ, ಮಡೋನ್ನ ಸೆಬಾಸ್ಟಿಯನ್ ಹಾಗೂ ನವಾಬ್ ಶಾ, ರವಿಶಂಕರ್ ಶ್ರದ್ಧಾ ದಾಸ್ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ.

ಈ ಬಗ್ಗೆ ಕಿಚ್ಚ ಟ್ವೀಟ್ ಮಾಡಿದ್ದು

“ಕೆ 3 ಗಾಗಿ ಕ್ಲೈಮ್ಯಾಕ್ಸ್ ವಾರ್ಸಾದಲ್ಲಿ ಶೂಟಿಂಗ್ ಮುಗಿಸಿದ್ದು, ಕ್ಲೈಮ್ಯಾಕ್ಸ್ ಆಕ್ಷನ್ ಒಂದು ಭಾಗವನ್ನು ಚೇಸ್ ಶೂಟ್ ಮಾಡಲು ಈಗ ಟೊರುನ್‌ ಗೆ ಹೋಗುತ್ತಿದ್ದೇವೆ. ಎಂದು ಬರೆದಿದ್ದಾರೆ

ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನ: ಜೈಹಿಂದ್ ವಂದೇ ಮಾತರಂ ಎಂದ ಜಗ್ಗೇಶ್

#kotigobba3 #sandalwood #kannadamovies

Tags