
ಸುದ್ದಿಗಳು
‘ಕೋಟಿಗೊಬ್ಬ 3’ ಬೆಡಗಿಯ ಓಣಂ ಸಂಭ್ರಮ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ 3’. ಈಗಾಗಲೇ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಕೋಟಿಗೊಬ್ಬನ ರಾಣಿ ಮಡೋನಾ ಸೆಬಾಸ್ಟಿಯನ್ ಇಂದು ಸಂಭ್ರಮದಿಂದ ಓಣಂ ಹಬ್ಬವನ್ನು ಆಚರಣೆ ಮಾಡಿದ್ದಾರೆ.ಹೌದು, ಇಂದು ಎಲ್ಲೆಡೆ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಇದೇ ವೇಳೆ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಯಲ್ಲಿ ಡ್ಯುಯೆಟ್ ಆಡಲಿರುವ ಮಲಯಾಳಿ ಬ್ಯೂಟಿ ಮಡೋನಾ ಸೆಬಾಸ್ಟಿಯನ್ ತಮ್ಮ ಮನೆಯಲ್ಲಿ ಓಣಂ ಹಬ್ಬವನ್ನು ಕುಟುಂಬದವರೊಡನೆ ಆಚರಿಸಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮಲಯಾಳಂ ‘ಪ್ರೇಮಂ’ ಚಿತ್ರದ ಮೂಲಕ ಮನೆಮಾತಾದ ಮಡೋನ್ನಾ ಬ್ರದರ್ಸ್ ಡೇ, ಜುಂಗ, ಪ ಪಾಂಡಿ, ಇಬ್ಲಿಸ್, ವೈರಸ್ ಹೀಗೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
#MadonnaSebastian #MadonnaSebastianmovies #MadonnaSebastiankotigobba3 #kotigobba3 #onamcelebration