ಸುದ್ದಿಗಳು

ಯೂಟ್ಯೂಬ್ ನಲ್ಲಿ ಕೋಟಿಗೊಬ್ಬ-3 ಟ್ರೆಂಡಿಂಗ್ ಗುರು!!

ಸತತ ಮೂರು ದಿನಗಳಿಂದ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ..

ಚಿತ್ರದಲ್ಲಿ ಇಂಟರ್ಪೋಲ್ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗಿದು ಮೊದಲ ಕನ್ನಡ ಚಿತ್ರ

ಬೆಂಗಳೂರು,ಸೆ.04: ಕಿಚ್ಚ ಸುದೀಪ್ ನಟಿಸುತ್ತಿರುವ ‘ಕೋಟಿಗೊಬ್ಬ 3’ ಕಿಚ್ಚನ ಹುಟ್ಟು ಹಬ್ಬಕ್ಕೆ ಚಿತ್ರದ ಟೀಸರ್​  ಬಿಡುಗಡೆಯಾಗಿತ್ತು. ಈಗ ಯುಟ್ಯೂಬ್​ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನದಲ್ಲಿದೆ.

ಟ್ರೆಂಡಿಂಗ್

ಕಿಚ್ಚನ ಹುಟ್ಟುಹಬ್ಬದ ನಿಮಿತ್ತ ಬಿಡುಗಡೆಗೊಂಡಿರುವ ಈ ಚಿತ್ರದ ಟೀಸರ್​, ಸತತ ಮೂರು ದಿನಗಳಿಂದ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ. ಇದುವರೆಗೂ 12 ಲಕ್ಷ ಜನರಿಂದ ವೀಕ್ಷಣೆಯಾಗುವ ಮೂಲಕ ದಾಖಲೆ ಬರೆಯುತ್ತಿದೆ. ಇನ್ನು ಕೋಟಿಗೊಬ್ಬ 3 ಚಿತ್ರವನ್ನು ಶಿವಕಾರ್ತಿಕ ನಿರ್ದೇಶನ ಮಾಡುತ್ತಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ.

ಕ್ರಿಸ್ ಮಸ್ ಗೆ ಕೋಟಿಗೊಬ್ಬ..

ಈ ವರ್ಷಾಂತ್ಯಕ್ಕೆ ಕ್ರಿಸ್ ಮಸ್ ದಿನದಂದು ಕೋಟಿಗೊಬ್ಬ 3 ಬಿಡುಗಡೆಯಾಗಲಿದೆಯಂತೆ. ಈ ಚಿತ್ರದಲ್ಲಿ ಮಡ್ಡೋನ ಸೆಬಾಸ್ಟಿಯನ್‌ ನಾಯಕಿಯಾಗಿ ನಟಿಸುತ್ತಿದ್ದು, ಇದು ಅವರ ಮೊದಲ ಚಿತ್ರವಾಗಿದೆ. ಬಾಲಿವುಡ್‌ ನಟ ಅಫ್ತಾಬ್‌ ಶಿವದಾಸಾನಿ ನಟಿಸುತ್ತಿರುವುದು.

ಈ ಚಿತ್ರದಲ್ಲಿ ಇಂಟರ್‌ಪೋಲ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗಿದು ಮೊದಲ ಕನ್ನಡ ಚಿತ್ರ. ಇನ್ನು ಚಿತ್ರದಲ್ಲಿ ಸುದೀಪ್‌, ಮಡ್ಡೋನ, ಅಫ್ತಾಬ್‌ ಜೊತೆಗೆ ನವಾಬ್‌ ಷಾ, ಶ್ರದ್ಧಾ, ರವಿಶಂಕರ್‌, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ, ಶೇಖರ್‌ ಚಂದ್ರ ಅವರ ಛಾಯಾಗ್ರಹಣವಿದೆ.

Tags