ಸುದ್ದಿಗಳು

‘ಕೌಸಲ್ಯ ಕಲ್ಯಾಣ’ ಸೆಲೆಬ್ರಿಟಿ ಶೋ: ಶಶಿಕುಮಾರ್ ಹಾಗೂ ರಾಘವಿ ಗೌಡ ನಟನೆಯನ್ನು ಮೆಚ್ಚಿಕೊಂಡ ಬಿಗ್ ಬಾಸ್ ಪ್ರಥಮ್

ಬಿಗ್ ಬಾಸ್ ಕಾರ್ಯಕ್ರಮಕ್ಕೂ ಹೋಗುವ ಮುನ್ನ ಶಶಿಕುಮಾರ್ ಅಭಿನಯಿಸಿದ್ದ ಸಿನಿಮಾ

ಬೆಂಗಳೂರು.ಏ.22: ಕನ್ನಡ ಬಿಗ್ ಬಾಸ್ ಸರಣಿ 6 ರ ವಿಜೇತ ಶಶಿಕುಮಾರ್ ಈಗ ನಾಯಕನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಅವರ ಚೊಚ್ಚಲ ಚಿತ್ರಕ್ಕೆ ‘ಕೌಸಲ್ಯ ಕಲ್ಯಾಣ’ ಎಂದು ಹೆಸರಿಡಲಾಗಿದ್ದು, ನಿನ್ನೆಯಷ್ಟೇ ಈ ಚಿತ್ರದ ಸೆಲೆಬ್ರಿಟಿ ಶೋ ಅನ್ನು ಏರ್ಪಡಿಸಲಾಗಿತ್ತು.

ಎಲ್ಲರಿಂದ ಮೆಚ್ಚುಗೆ ಪಡೆಯಿತು ‘ಕೌಸಲ್ಯ ಕಲ್ಯಾಣ’

ಚಿತ್ರದ ಹೆಸರೇ ಹೇಳುವಂತೆ ಇದೊಂದು ಪ್ರೇಮಮಯ ಕಥಾಹಂದರವನ್ನು ಒಳಗೊಂಡಿದ್ದು, ನಾಯಕ ಇಲ್ಲಿ ನೇರ ವ್ಯಕ್ತಿತ್ವದ ಯುವಕನಾಗಿ ಕಾಣಿಸಿಕೊಂಡಿರುತ್ತಾನೆ. ಪ್ರೀತಿ ಮತ್ತು ಸಂಬಂಧಗಳಿಗೆ ಬೆಲೆ ನೀಡುವಂಥ ಹುಡುಗನ ಪಾತ್ರ ಇಲ್ಲಿದೆ. ಇನ್ನು, ನಾಯಕಿ ರಾಘವಿ ಗೌಡ ಶ್ರೀಮಂತರ ಮನೆಮಗಳಾಗಿ ಕಾಣಿಸಿಕೊಂಡಿದ್ದು, ಕೌಟುಂಬಿಕ ಮೌಲ್ಯಗಳ ಬಗ್ಗೆಯೂ ಹೇಳಲಾಗುತ್ತಿದೆ.

Image may contain: 2 people, people smiling, beard, text and indoor

ಬಿಗ್ ಬಾಸ್ ಗೆ ಬರುವ ಮುನ್ನವೇ ನಟನೆ

ಎಲ್ಲರೂ ಅಂದುಕೊಂಡಿರುವಂತೆ ಈ ಚಿತ್ರವನ್ನು ಶಶಿಕುಮಾರ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಈ ಚಿತ್ರದಲ್ಲಿ ನಟಿಸಿಲ್ಲ, ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ನಟಿಸಿದ್ದರು. ಈ ಮೂಲಕ ಇನ್ನು ವೃತ್ತಿಯಲ್ಲಿ ರೈತನಾಗಿರುವ ಅವರು ನಾಯಕನಟರೂ ಆಗಿದ್ದಾರೆ. ಅದರಲ್ಲೂ ಚಿತ್ರದಲ್ಲಿ ಅವರ ಮನೋಜ್ಞರಾಗಿ ಅಭಿನಯಿಸಿದ್ದು, ಎಲ್ಲರಿಂದ ಮೆಚ್ಚುಗೆ ಗಳಿಸುತ್ತಾರೆ.

Image may contain: 2 people, people standing

ನಾಯಕ-ನಾಯಕಿಯರನ್ನು ಮೆಚ್ಚಿಕೊಂಡ ಪ್ರಥಮ್

ಅಂದ ಹಾಗೆ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿರುವ ನಟ, ನಿರ್ದೇಶಕ ಪ್ರಥಮ್ ಚಿತ್ರದ ಬಗ್ಗೆ ಹಾಗೂ ಕಲಾವಿದರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನಟಿ ರಾಘವಿ ಗೌಡ ಬಹಳ ಮುದ್ದು ಮುದ್ದಾಗಿ ಕಾಣುತ್ತಾರೆ. ನವೀನ್ ಮತ್ತು ಹರೀಶ್ ಜೊತೆಗೂಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ, ಅವರಿಗೆ ಒಳ್ಳೆಯದಾಗಲಿ.

ಖಂಡಿತಾ ಈ ಚಿತ್ರವನ್ನು ಎಲ್ಲಾ ಕನ್ನಡಿಗರು ನೋಡಬೇಕು. ಕಲಾವಿದರಾದ ಶಶಿಕುಮಾರ್ ಕೂಡಾ ಚೆನ್ನಾಗಿ ನಟಿಸಿದ್ದಾರೆ. ಗೆಳೆಯನಿಗೆ ಒಳ್ಳೇದಾಗಲಿ. ಕೌಸಲ್ಯ ಜೊತೆ ಕಲ್ಯಾಣ ಮಾಡ್ಕೊಂಡು ಶ್ರೀರಾಮನಂತ ಮಕ್ಕಳ ಹೆಸರಲ್ಲಿ ಮುಂದಿನ ಸಿನಿಮಾ ಬರಲಿ. ಯಾರು ಬೇಕಾದ್ರೂ ಹೀರೋ ಆಗಬಹುದು. ಆದರೆ ಒಬ್ಬ ರೈತ ಹೀರೋ ಆಗೋದು ನಿಜಕ್ಕೂ ಹೆಮ್ಮೆ. ರೈತ ಗೆದ್ದರೆ ದೇಶ ಗೆದ್ದಂತೆ. ಅವರಂತೆಯೇ ರಾಘವಿ ಗೌಡ ಅಷ್ಟೇ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ’ ಎಂದು ಚಿತ್ರಕ್ಕೆ ಪ್ರಥಮ್ ಶುಭ ಹಾರೈಸಿದ್ದಾರೆ.

ಶುರುವಾದವು ಅನೇಕ ಅನುಮಾನಗಳು

ಅಂದ ಹಾಗೆ ವೃತ್ತಿಯಲ್ಲಿ ರೈತನಾಗಿರುವ ನಾಯಕ ಶಶಿಕುಮಾರ್ ಈ ಚಿತ್ರದ ಕುರಿತಂತೆ ಎಲ್ಲಿಯೂ ಹೇಳಿಕೊಂಡಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಯಾವ ಪೋಸ್ಟ್ ಸಹ ಮಾಡದೇ ಇರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕುತ್ತಿದ್ದು, ಅನೇಕ ಚರ್ಚೆಗಳಾಗುತ್ತಿವೆ. ಅಲ್ಲದೇ ಹೊಸ ಚಿತ್ರದ ತಯಾರಿಯಲ್ಲಿದ್ದ ಕಾರಣ ಅವರು ಈ ಸೆಲೆಬ್ರಿಟಿ ಶೋ ಗೆ ಬಂದಿರಲಿಲ್ಲ.

ಅಂದ ಹಾಗೆ ಈ ಪ್ರೀಮಿಯರ್ ಶೋ ನಲ್ಲಿ ‘ಕೌಸಲ್ಯರ ಕಲ್ಯಾಣ’ವನ್ನು ನೋಡಲು ಕನ್ನಡ ಬಿಗ್ ಬಾಸ್  ಸ್ಪರ್ಧಿಗಳಾದ ಪ್ರಥಮ್,  ಆದಂ ಪಾಶಾ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿ, ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಸದ್ಯ ಜಂಟಿಯಾಗಿ ಈ ಚಿತ್ರಕ್ಕೆ  ಆ್ಯಕ್ಷನ್-ಕಟ್ ಹೇಳಿರುವ ನವೀನ್ ಮತ್ತು ಗಿರೀಶ್ ಭವಿಷ್ಯದಲ್ಲೂ ಹಲವು ಸಿನಿಮಾಗಳಿಗೆ ಜೊತೆಯಾಗಿ ನಿರ್ದೇಶನ ಮಾಡುವ ಆಲೋಚನೆ ಇಟ್ಟುಕೊಂಡಿದ್ದಾರೆ. ಅವರಿಗೆ ಶುಭವಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಶ್ರೀಲಂಕಾ ದಾಳಿಗೆ ಮಿಡಿಯುತ್ತಿದೆ ಸಿನಿ ತಾರೆಯರ ಕಂಬನಿ

#kousalakalyana. #celebrity ,#show, #balkaninews #filmnews, #kannadasuddigalu

Tags