ಸುದ್ದಿಗಳು

ನಿನ್ನ ಉಸಿರಲ್ಲಿ, ನನ್ನ ಉಸಿರಾಗಿ: ಗುಂಗು ಹಿಡಿಸುವ ‘ಕೌಸಲ್ಯ ಕಲ್ಯಾಣ’ ಚಿತ್ರದ ಲಿರಿಕಲ್ ಹಾಡು

ನೀ ಇಲ್ಲದೇ ಈ ಜೀವ ಮೂಕ ವೇದನೆ ಹಾಗೆಯೇ ಈ ಪಯಣವೂ ಸಾಗದು..!!

ಬೆಂಗಳೂರು.ಮೇ.22:

ಕನ್ನಡ ಬಿಗ್ ಬಾಸ್ ಸರಣಿ 6 ರ ವಿಜೇತರಾಗಿರುವ ಕೃಷಿಕ ಶಶಿಕುಮಾರ್ ನಾಯಕನಟರಾಗಿರುವ ‘ಕೌಸಲ್ಯ ಕಲ್ಯಾಣ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಲಿರಿಕಲ್ ವಿಡಿಯೋ ಹಾಡೊಂದು ರಿಲೀಸ್ ಆಗಿದ್ದು, ಮೋಡಿ ಮಾಡುತ್ತಿದೆ.

ಇದೊಂದು ಫ್ಯಾಥೋ ಸಾಂಗ್ ಆಗಿದ್ದು, ಗೀರೀಶ್ ರವರು ಬರೆದಿರುವ ಸಾಹಿತ್ಯಕ್ಕೆ ಕಾರ್ತಿಕ್ ಪೈ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಹಾಡಿಗೆ ಸಿದ್ದಾರ್ಥ್ ಬೆಳುಮಣ್ಣು ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ಶಶಿಕುಮಾರ್ ರಿಗೆ ರಾಘವಿ ಗೌಡ ಜೋಡಿಯಾಗಿದ್ದಾರೆ.

ಅಂದ ಹಾಗೆ ಈ ಹಿಂದೆ *121# ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ನವೀನ್ ಕುಮಾರ್ ಹಾಗೂ ಗಿರೀಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಚಿತ್ರವು ಪ್ರೇಮಮಯ ಕಥೆಯನ್ನು ಒಳಗೊಂಡಿದೆ.

ಎಲ್ಲರೂ ಅಂದುಕೊಂಡಿರುವಂತೆ ಈ ಚಿತ್ರವನ್ನು ಶಶಿಕುಮಾರ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಈ ಚಿತ್ರದಲ್ಲಿ ನಟಿಸಿಲ್ಲ, ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ನಟಿಸಿದ್ದರು. ಈ ಮೂಲಕ ಇನ್ನು ವೃತ್ತಿಯಲ್ಲಿ ರೈತನಾಗಿರುವ ಅವರು ನಾಯಕನಟರೂ ಆಗಿದ್ದಾರೆ.

ನಾಯಕ ಇಲ್ಲಿ ನೇರ ವ್ಯಕ್ತಿತ್ವದ ಯುವಕನಾಗಿ ಕಾಣಿಸಿಕೊಂಡಿರುತ್ತಾನೆ. ಪ್ರೀತಿ ಮತ್ತು ಸಂಬಂಧಗಳಿಗೆ ಬೆಲೆ ನೀಡುವಂಥ ಹುಡುಗನ ಪಾತ್ರ ಇಲ್ಲಿದೆ. ಇನ್ನು, ನಾಯಕಿ ರಾಘವಿ ಶ್ರೀಮಂತರ ಮನೆಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಕೌಟುಂಬಿಕ ಮೌಲ್ಯಗಳ ಬಗ್ಗೆಯೂ ಹೇಳಲಾಗುತ್ತಿದೆ.

‘ಮಾಯಾ ಕನ್ನಡಿ’ ಟೀಸರ್ ರಿಲೀಸ್…

#kousalyakalyana, #movie, #song, #realsed, #balkaninews #bigboss, #kannadasuddigalu, #filmnews,

Tags