ಸುದ್ದಿಗಳು

ವೆಬ್ ಸರಣಿಗಳತ್ತ ಗಮನ ಹರಿಸಿದ ಕೃಷಿ ತಾಪಂಡಾ

ನೆಟ್ ಪ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ಗಾಗಿ ತಯಾರಾಗುತ್ತಿರುವ ಕನ್ನಡದ ವೆಬ್ ಸರಣಿಗಳು

ಬೆಂಗಳೂರು.ಫೆ.10

ಈಗಾಗಲೇ ‘ಕಹಿ’, ‘ಅಕೀರ’ ಹಾಗೂ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರಗಳು ಮತ್ತು ಬಿಗ್ ಬಾಸ್ ಸೀಜನ್ 6 ರ ಮೂಲಕ ಸಾಕಷ್ಟು ಗಮನ ಸೆಳದ ಕೃಷಿ ತಾಪಂಡಾ ಈಗ ವೆಬ್ ಸರಣಿಗಳತ್ತ ಗಮನ ಹರಿಸಿದ್ದಾರೆ. ಹೌದು, ಅವರೀಗ ನೆಟ್ ಪ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ಗಾಗಿ ತಯಾರಾಗುತ್ತಿರುವ ಕನ್ನಡದ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.

ತಕ್ಷಣಕ್ಕೆ ತೆಗೆದುಕೊಂಡ ನಿರ್ಧಾರವಲ್ಲ

‘ನನ ಮೇಲೆ ನನಗೀಗ’ ಈ ಹಾಡನ್ನು ಕೇಳಿದವರೇ ಇಲ್ಲ ಎನ್ನಬಹುದು. ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಈ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಈಗ ಬಿಗ್ ಬಾಸ್ ಮುಗಿಸಿಕೊಂಡು ಬಂದ ಕೃಷಿ ಈಗ ಸಿನಿಮಾ ಬದಲಿಗೆ ವೆಬ್ ಸರಣಿಗಳತ್ತ ಗಮನ ಹರಿಸಿದ್ದಾರೆ.

“ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದೇನೆ. ಹಾಗಂತಾ ಇದು ತಕ್ಷಣಕ್ಕೆ ತೆಗೆದುಕೊಂಡ ನಿರ್ಧಾರವಲ್ಲಾ, ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಬೇಕು ಎಂದು ಆಲೋಚಿಸುತ್ತಿರುವಾಗ ಈ ಅವಕಾಶಗಳು ಹುಡುಕಿಕೊಂಡು ಬಂದವು. ಅದು ಅಲ್ಲದೇ ನೆಟ್ ಪ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ಗಳಲ್ಲಿ ಈ ವೆಬ್ ಸರಣಿಗಳು ಪ್ರಸಾರವಾಗುತ್ತವೆ. ಹೀಗಾಗಿ ಒಪ್ಪಿಕೊಂಡೆ” ಎಂದು ಕೃಷಿ ಹೇಳಿದ್ದಾರೆ.

ಕಥಾಹಂದರ

ಕನ್ನಡದೊಂದಿಗೆ ಹಿಂದಿ ಭಾಷೆಯಲ್ಲೂ ತಯಾರಾಗುತ್ತಿರುವ ಈ ವೆಬ್ ಸರಣಿಯ ಕಥೆ ಸಖತ್ ಬೋಲ್ಡ್ ಆಗಿದೆಯಂತೆ. ಅಂದರೆ ಹೊಸ ಬಗೆಯ ಒಂದು ಮಾದಕ ದ್ರವ್ಯದಿಂದ ಏನೆಲ್ಲ ಅನಾಹುತ ಆಗುತ್ತದೆ ಎಂಬುದನ್ನು ಈ ಕಥೆ ವಿವರಿಸುತ್ತದೆ. ಇಲ್ಲಿ ಕೃಷಿ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಒಂದು ಅಪರಾಧ ಪ್ರಕರಣವನ್ನು ಬಯಲಿಗೆ ಎಳೆಯಲು ಪ್ರಯತ್ನ ಪಡುವ ಧೈರ್ಯವಂತ ಯುವತಿಯಾಗಿ ಕೃಷಿ ತಾಪಂಡಾ ಕಾಣಿಸಿಕೊಂಡಿದ್ದು, ಆ ಪ್ರಕರಣದಲ್ಲಿ ಇನ್ನಷ್ಟು ಪ್ರಕರಣಗಳು ಬಯಲಿಗೆ ಬರಲಿವೆ.

ಮೊದಲ ಸಂಚಿಕೆಯ ಅವಧಿ 25 ನಿಮಿಷ

ಈಗಾಗಲೇ ಒಂದು ಎಪಿಸೋಡ್ ಚಿತ್ರೀಕರಣ ಮಾಡಲಾಗಿದ್ದು, ಬಹುತೇಕ ರಾತ್ರಿ ದೃಶ್ಯಗಳು ಹೆಚ್ಚಾಗಿ ಇರಲಿದ್ದು, ಬಾಲಸುಬ್ರಹ್ಮಣ್ಯ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಎಪಿಸೋಡ್ 25 ನಿಮಿಷ ಇರಲಿದೆ. ಇನ್ನುಳಿದ ಸಂಚಿಕೆಗಳು ಅಂದಾಜು 40 ನಿಮಿಷ ಇರಲಿವೆ. ಹೀಗಾಗಿ ಸಿನಿಮಾ ಮತ್ತು ವೆಬ್ ಸರಣಿ.. ಎರಡನ್ನೂ ಕೃಷಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಫ್ಯಾನ್ಸಿ ಕಿವಿಯೋಲೆಗೆ ಡಿಮಾಂಡಪ್ಪೋ ಡಿಮ್ಯಾಂಡ್!!

#krishitapanda, #balkaninews #websiries, #amazonprime, #netplix, #filmnews, #kannadasuddigalu

Tags