ಸುದ್ದಿಗಳು

‘ಕೃಥ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಸದ್ಯ ಟೀಸರ್ ನಿಂದ ಗಮನ ಸೆಳೆಯುತ್ತಿರುವ ಸಿನಿಮಾ

ಬೆಂಗಳೂರು.ಫೆ.14

ಸಿನಿಮಾರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಬರುತ್ತಲೇ ಇದ್ದಾರೆ. ಹಾಗೆಯೇ ವಿಶಿಷ್ಟ ಹಾಗೂ ವಿಭಿನ್ನ ಪ್ರಯೋಗಗಳಿಂದ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡ ಈಗ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಅದುವೇ ‘ಕೃಥಾ’

ಹೌದು, ಈಗಾಗಲೇ ತನ್ನ ವಿಶಿಷ್ಟ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿರುವ ಈ ಸಿನಿಮಾ ವಿ.ಕೆ ಗೃಪ್ ಬ್ಯಾನರ್ ನಡಿ ಮೂಡಿ ಬರುತ್ತಿದೆ. ಸದ್ಯ ಈ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಈ ಚಿತ್ರವನ್ನು ವಿಜೇಂದ್ರ ನಿರ್ಮಾಣ ಮಾಡಿದ್ದು, ಉಪ್ಪರಿ ರಮೇಶ್ ನಿರ್ದೇಶನ ಮಾಡಿದ್ದಾರೆ.

ಗಮನ ಸೆಳೆದ ಹಾಡು

ಇತ್ತೀಚೆಗಷ್ಟೇ ಖಾಸಗಿ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿದ್ದ ಆಧ್ಯ ಈ ಚಿತ್ರಕ್ಕಾಗಿ ಅಮ್ಮನ ಮೇಲಿನ ಪ್ರೇಮವನ್ನು ಸಾರುವ ಹಾಡನ್ನು ಹಾಡಿದ್ದಾರೆ. ಚಿತ್ರದಲ್ಲಿ ವಿಜಯೇಂದ್ರ, ಮೇಘನಾ ಗೌಡ, ಸೇರಿದಂತೆ ಅನೇಕರು ನಟಿಸಿದ್ದು, ಮಂಜು ಚರಣ್ ಸಂಗೀತ ನೀಡಿದ್ದಾರೆ.

ಗಮನ ಸೆಳೆಯುವ ಟೀಸರ್

ಟೀಸರ್ ತೋರಿಸಿರುವಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದ್ದು, ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೆ ನಟಿಸಿದ್ದಾರೆ. ಒಬ್ಬ ಸೈಕೋ ಹಲವರನ್ನು ಕೊಲೆ ಮಾಡುತ್ತಾನೆ. ಇದರ ಬೆನ್ನಿಗೆ ಅತೃಪ್ತ ಆತ್ಮದ ಬಗ್ಗೆಯೂ ಚಿತ್ರದಲ್ಲಿ ತೋರಿಸಲಾಗಿದೆ. 110 ನಿಮಿಷದ ಈ ಚಿತ್ರವು ಸದ್ಯದಲ್ಲಿಯೇ ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ.

 

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ ದಶ ಲಾಭಗಳನ್ನು ನಿಸ್ಸಂಶವಾಗಿ ನಿಮ್ಮದಾಗಿಸಿಕೊಳ್ಳಿ

#krutha, #balkaninews #filmnews, #kannadasuddigalu, #cencar

Tags