ಸುದ್ದಿಗಳು

ಕಮರ್ಷಿಯಲ್ ಗೆಲುವಿನ ನಿರೀಕ್ಷೆಯಲ್ಲಿ ಕೃತಿಕಾ ರವೀಂದ್ರ

ಮುಂದಿನ ವಾರ ತೆರೆ ಕಾಣಲಿರುವ ‘ಯಾರಿಗೆ ಯಾರುಂಟು’

ಬೆಂಗಳೂರು.ಫೆ.14

ಈಗಾಗಲೇ ವಿಭಿನ್ನ ಹಾಡುಗಳು, ಟೀಸರ್ ಮತ್ತು ಟ್ರೈಲರ್ ನಿಂದ ಎಲ್ಲರ ಗಮನ ಸೆಳೆದಿರುವ ‘ಯಾರಿಗೆ ಯಾರುಂಟು’ ಸಿನಿಮಾ ಮುಂದಿನ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರದ ಮೂಲಕ ‘ಒರಟ’ ಪ್ರಶಾಂತ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಚಿತ್ರದಲ್ಲಿದ್ದಾರೆ ಮೂವರು ನಾಯಕಿಯರು

ಕಿರಣ್ ಗೋವಿ ನಿರ್ದೇಶನದ ಈ ಚಿತ್ರದಲ್ಲಿ ಲೇಖಾ ಚಂದ್ರ, ಅದಿತಿ ರಾವ್ ಹಾಗೂ ಕೃತಿಕಾ ನಾಯಕಿರಾಗಿ ನಟಿಸಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಸಲ ಕೃತಿಕಾ, ಈ ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಪಾತ್ರ ಕೂಡ ತೂಕ ಹೆಚ್ಚಿಸಿದ್ದು, ಎಲ್ಲರೂ ಹೊಸ ಕೃತಿಕಾಳನ್ನಿಲ್ಲಿ ಕಾಣಬಹುದು ಎಂಬ ಸಂತಸ ಅವರದು.

“ಹೌದು, ಇದೇ ಮೊದಲ ಬಾರಿಗೆ ನಾನು ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರದ ಕಥೆ ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಿದೆ. ಚಿತ್ರದಲ್ಲಿ ನಾನು ಚಾಲೆಂಜಿಂಗ್ ಆಗಿರುವ ಪಾತ್ರವನ್ನು ಎಂಜಾಯ್ ಮಾಡಿಕೊಂಡೇ ನಿರ್ವಹಿಸಿದ್ದೇನೆ. ಸಿನಿಮಾದೊಳಗಿನ ಸಿನಿಮಾ ಸೆಲೆಬ್ರಿಟಿಯಾಗಿ ನಟಿಸಿದ್ದರಿಂದ ಚಿತ್ರ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ” ಎಂದು ಕೃತಿಕಾ ಹೇಳುತ್ತಾರೆ.

ಖಂಡಿತಾ ಇಷ್ಟವಾಗುತ್ತದೆ

ನಟಿ ಕೃತಿಕಾ ಪಕ್ಕಾ ಗ್ಲಾಮರ್ ಆಗಿ ಕಾಣಿಸಿಕೊಂಡಿರುವುದಲ್ಲದೆ, ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಯಾರಾದರೂ ಕೆಣಕಿದರೆ, ಅವರು ತಮ್ಮ ವ್ಯಕ್ತಿತ್ವವನ್ನೇ ಬದಲಿಸಿಕೊಂಡು ತೆರೆಯ ಮೇಲೆ ಹೊಸ ರೂಪ ಪಡೆದುಕೊಳ್ಳುವ ಚಾಲೆಂಜ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಇನ್ನು ಚಿತ್ರವು ಒಂದು ಆರೋಗ್ಯಧಾಮದಲ್ಲಿ ನಡೆಯುವಂತಹ ಅಪರೂಪದ ಕಥೆಯನ್ನು ಒಳಗೊಂಡಿದೆ. ಸಾಮಾನ್ಯವಾಗಿ ಆಸ್ಪತ್ರೆ ಅಂದರೆ ಒಂದು ರೀತಿಯ ಭಯ, ಗೊಂದಲ, ಟೆನ್ಷನ್ ಕಾಮನ್. ಆದರೆ, ಇಲ್ಲಿ ಆರೋಗ್ಯಧಾಮದಲ್ಲೇ ಕಥೆ ಸಾಗುವುದರಿಂದ ಸಂಪೂರ್ಣ ಮನರಂಜನೆಯಲ್ಲೇ ಸಾಗುತ್ತದೆ ಎಂಬುದು ಚಿತ್ರತಂಡದ ಮಾತು.

“ಪ್ರಪಂಚದಲ್ಲಿ ಯಾರಿಗೆ ಯಾರೂ ಇರುವುದಿಲ್ಲ. ಹಾಗೆಯೇ ಯಾರಿಗಾದರೂ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಈ ಎರಡೂ ವಿಷಯಗಳನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ಒಬ್ಬ ಇನೋಸೆಂಟ್ ಹುಡುಗ ಮತ್ತು ಮೂರು ಹುಡುಗಿಯರ ಸುತ್ತ ಕಥೆಯನ್ನು ಹೆಣೆದಿದ್ದೇವೆ. ಸಮಾಜಕ್ಕೆ ಇನೋಸೆನ್ಸ್ ಯಾವ ರೀತಿಯಲ್ಲಿ ಕಾಣುತ್ತದೆ, ಇನೋಸೆನ್ಸ್ ಗೆ ಯಾವ ರೀತಿಯ ಸ್ಪಂದನೆ ಸಿಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೊರಿಸಿದ್ದೇವೆ. ಕಾಮಿಡಿಯ ಜೊತೆಗೆ ನವಿರಾದ ಲವ್ ಸ್ಟೋರಿಯೂ ಇದೆ.’’ ಎನ್ನುತ್ತಾರೆ ನಿರ್ದೇಶಕ ಕಿರಣ್ ಗೋವಿ.

ಸೆನ್ಸಾರ್ ಮಂಡಳಿ ಮೆಚ್ಚಿಕೊಂಡ ‘ಯಾರಿಗೆ ಯಾರುಂಟು’

#kruthikaravindra, #balkaninews #yarigeyaruntu, #filmnews, #aditirao,

Tags