ಸುದ್ದಿಗಳು

‘ಕುಚ್ ಕುಚ್ ಹೋತಾ ಹೈ’ ಯನ್ನು 7300 ದಿನಗಳು ಓಡಿಸಿದ ಮುಂಬೈಕರ್ ಗಳು..

‘ಕುಚ್ ಕುಚ್ ಹೋತಾ ಹೈ’ ಗೆ ಬರೋಬ್ಬರಿ ‘ಎರಡು’ ದಶಕ!!!!

ಬೆಂಗಳೂರು,ಅ.17: ‘ಕುಚ್ ಕುಚ್ ಹೋತಾ ಹೈ’  ಹೆಸರು ಕೇಳಿದ ತಕ್ಷಣ ನೆನಪಾಗುವುದೇ ಕಿಂಗ್ ಖಾನ್.. ‘ಕೆಕೆ ಎಚ್ ಎಚ್’ ಎಂದೂ ಕರೆಯಲಾಗುವ 1998 ರಲ್ಲಿ ಹಿಂದಿ  -ಭಾಷೆಯಲ್ಲಿ  ಬಿಡುಗಡೆಯಾದ ಪ್ರಣಯನಾಟಕ ಚಿತ್ರ, ಇದು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ 16 ಅಕ್ಟೋಬರ್ 1998 ರಂದು ಬಿಡುಗಡೆಯಾಗಿತ್ತು.  ಈ ಚಿತ್ರಕ್ಕೆ ಇದೀಗ ಬರೋಬ್ಬರಿ 20 ವರ್ಷ.

kuch kuch hota hai ಗೆ ಚಿತ್ರದ ಫಲಿತಾಂಶ

ಯುವ ಹೃದಯಗಳ ಮಿಡಿತ ‘ಕುಚ್ ಕುಚ್ ಹೋತಾ ಹೈ’ 

ಈ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಿದ್ದು , ತಮ್ಮ ನಾಲ್ಕನೆಯ ಸ್ಕ್ರೀನ್ನಲ್ಲಿ -ಶಾರೂಖ್ ಖಾನ್ ಮತ್ತು ಕಾಜೊಲ್ ನಟಿಸಿದರು. ರಾಣಿ ಮುಖರ್ಜಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಲ್ಮಾನ್ ಖಾನ್ ಸಹ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಸನಾ ಸಯೀದ್ ಬಾಲ ನಟಿಯಾಗಿ ಕಾಣಿಸಿಕೊಂಡು ತನ್ನ ಚೊಚ್ಚಲ ಪ್ರವೇಶವನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವುದರಲ್ಲಿ ಆಕೆಯ ಪಾತ್ರ ಮಹತ್ವದ್ದು. . ಕಥಾವಸ್ತುವಿನ ಎರಡು ಪ್ರೀತಿಯ ತ್ರಿಕೋನಗಳನ್ನು ವರ್ಷಗಳಿಂದ ಅಂತರದಲ್ಲಿ ಸಂಯೋಜಿಸುತ್ತದೆ. ಮೊದಲಾರ್ಧದಲ್ಲಿ ಕಾಲೇಜು ಕ್ಯಾಂಪಸ್ನಲ್ಲಿ ಸ್ನೇಹಿತರನ್ನು ಒಳಗೊಂಡರೆ, ಇನ್ನು ಅರ್ಧದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಮಗಳು ತನ್ನ ತಂದೆಯ ಹಳೆಯ ಗೆಳೆಯರನ್ನು ಒಗ್ಗೂಡಿಸುವುದರ ಬಗ್ಗೆ ಕಥೆ ಸಾಗುತ್ತಾ ಹೋಗುತ್ತದೆ,

ಕಾಜೊಲ್ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ

ಇನ್ನು ‘ಕುಚ್ ಕುಚ್ ಹೋತಾ ಹೈ’  ಭಾರತ, ಮಾರಿಷಸ್, ಮತ್ತು ಸ್ಕಾಟ್ಲ್ಯಾಂಡ್ನಲ್ಲಿ ಚಿತ್ರೀಕರಿಸಲಾಯಿತು,  ಇದು ಜೋಹರ್ ಅವರ ನಿರ್ದೇಶನದ ಮೊದಲ ಚಿತ್ರವಾಗಿತ್ತು . ಹಿಂದಿ ಸಿನೆಮಾವಾದ ಇದು ಚಿತ್ರರಂಗದಲ್ಲಿ ಒಂದು ಹೊಸ ದಾಖಲೆಯನ್ನೇ ಸೃಷ್ಟಿಸಿತು. ಸಂಗೀತವನ್ನು ಜತಿನ್-ಲಲಿತ್ ರಚಿಸಿದ್ದಾರೆ . ಕುಚ್ ಕುಚ್ ಹೋತಾ ಹೈ ವಿಮರ್ಶಕರಿಂದ ಸಕಾರಾತ್ಮಕ ಸ್ವಾಗತ ಸಿಕ್ಕಿತು, ಕಾಜೊಲ್ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ. ಚಟ್ ಪಟ್ ಅಂತಾ ಮಾತನಾಡುತ್ತಾ ಅಂಜಲಿ ಪಾತ್ರದಲ್ಲಿ ಕಾಜಲ್ ಮಿಂಚಿದ್ದೋ ಮಿಂಚಿದ್ದು..

Related image

ಭರ್ಜರಿಯಾಗಿ ಪ್ರದರ್ಶನ

ಈ ಚಿತ್ರವು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಭರ್ಜರಿಯಾಗಿ ಪ್ರದರ್ಶನಗೊಂಡಿತ್ತು,  ಈ ಚಿತ್ರ ವರ್ಷದ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರವಾಗಿ ಹೊರ ಹೊಮ್ಮುವುದರ ಮೂಲಕ ಮತ್ತು ಇದುವರೆಗಿನ ಮೂರನೇ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿದೆ. ಭಾರತದ ಹೊರಗೆ, ಕರಣ್ ಅವರ  2001 ರಲ್ಲಿ ಬಿಡುಗಡೆಯಾದ ಕಭಿ ಖುಷಿ ಕಭೀ ಗಮ್ … ಚಿತ್ರವನ್ನು ಬ್ರೇಕ್ ಮಾಡುವ ಮೂಲಕ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿತ್ತು..

ಎಂದೂ ಮರೆಯಲಾದ , ಅಳಿಸಲಾಗದ ಸಿನಿಮಾ

ಈಗ 20 ವರ್ಷ ದಾಟಿದರೂ ‘ಕುಚ್ ಕುಚ್ ಹೋತಾ ಹೈ’  ಸಿನಿಮಾ ಮಾತ್ರ ಅಚ್ಚಳಿಯದೆ ಮನಸಿನಲ್ಲಿ ಹಾಗೆಯೇ ಉಳಿದು ಬಿಡುತ್ತದೆ.. ಯಾಕೆಂದರೆ ಆ ಚಿತ್ರದಲ್ಲಿ ಇರುವುದು ಒಂದು ಸ್ನೇಹ ಹಾಗೂ ಪ್ರೀತಿ.. ಇದರೆಡರನ್ನು ಚೆನ್ನಾಗಿ ದೂಗಿಸಿಕೊಂಡು ಹೋಗುವ ಸಿನಿಮಾದಲ್ಲಿ ಮುಖವಾಗಿ ಎಲ್ಲರಿಗೂ ಇಷ್ಟವಾಗುವುದು ಹಾಡುಗಳು ಹಾಗೂ ಮ್ಯೂಸಿಕ್..  ಎಂದೂ ಮರೆಯಲಾದ , ಅಳಿಸಲಾಗದ ಸಿನಿಮಾವೇ ‘ಕುಚ್ ಕುಚ್ ಹೋತಾ ಹೈ..’ ಮುಂದೊಮ್ಮೆ  ‘ಕುಚ್ ಕುಚ್ ಹೋತಾ ಹೈ’  ಸೀಕ್ವೆಲ್ ಮಾಡಿದಲ್ಲಿ ಕರಣ್ ಜಾಹ್ನವಿ ಕಪೂರ್ ನನ್ನು ಹಾಕಿ ಚಿತ್ರ ಮಾಡುತ್ತಾರಂತೆ

Tags