ಸುದ್ದಿಗಳು

ಮೋಡಿ ಮಾಡುವ ‘ಕುಹೂ ಕುಹೂ ಕೋಗಿಲೆ’ ರೊಮ್ಯಾಂಟಿಕ್ ಸಾಂಗ್

‘ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳಿ’ ಚಿತ್ರದ ಖ್ಯಾತಿಯ ವಿಕ್ರಮ್ ಆರ್ಯ ಇದೀಗ ‘ಪದ್ಮಾವತಿ’ ಹೆಸರಿನ ಚಿತ್ರ ಮಾಡಿದ್ದು, ಅತೀ ಶೀಘ್ರದಲ್ಲಿಯೇ ಈ ಸಿನಿಮಾ ತೆರೆಗೆ ಬರಲಿದೆ. ಸದ್ಯ ಚಿತ್ರದ ರೊಮ್ಯಾಂಟಿಕ್ ವಿಡಿಯೋವೊಂದು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

‘ಕುಹೂ ಕುಹೂ ಕೋಗಿಲೆ’.. ಎಂದು ಶುರುವಾಗುವ ಈ ಹಾಡು ಡ್ಯುಯೆಂಟ್ ಸಾಂಗ್ ಆಗಿದ್ದು, ಪ್ರೇಮ್ ಸಾಯಿ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ ನೀಡಿದ್ದು, ಶ್ರೀ ಹರ್ಷ ಹಾಗೂ ಸ್ನೇಹ ಹಾಡಿಗೆ ಧ್ವನಿ ನೀಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಮೋಡಿ ಮಾಡುತ್ತದೆ.

ಅಂದಹಾಗೆ ಚಿತ್ರದ ಹೆಸರನ್ನು ಕೇಳಿದರೆ ಹಿಂದಿಯ ‘ಪದ್ಮಾವತ್’ ಸಿನಿಮಾ ನೆನಪಾಗುತ್ತದೆ. ಹಾಗಂತಾ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಚಿತ್ರತಂಡ ಸ್ಪಷ್ಟಪಡಿಸಿದೆ.

‘ಮಹಿಳೆಯರ ಬದುಕನ್ನು ಕಟ್ಟಿಕೊಡುವಂಥ ಚಿತ್ರ ಇದಾಗಿದ್ದು, ಕಮರ್ಷಿಯಲ್ ಅಂಶಗಳೊಂದಿಗೆ ಪ್ರೇಕ್ಷಕರಿಗೆ ಇಷ್ಟವಾಗುವಂಥ ಎಲ್ಲ ಅಂಶಗಳನ್ನು ಬೆರೆಸಿಕೊಂಡು ಸಿನಿಮಾ ಮಾಡಿದ್ದೇವೆ. ಇದೊಂದು ಅತ್ಯುತ್ತಮ ಸಿನಿಮಾ ಆಗಲಿದೆ ಎಂಬ ನಂಬಿಕೆ ನನ್ನದು’ ಎಂದು ಚಿತ್ರತಂಡದವರು ಹೇಳಿದ್ದಾರೆ.

ಹೀಗಾಗಿ ‘ಪದ್ಮಾವತಿ’ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾದರೂ, ನಾಯಕನ ಪಾತ್ರಕ್ಕೂ ತನ್ನದೇ ಆದ ಮಹತ್ವವಿದೆ. ಮಹಿಳಾ ಸಂವೇದನೆ ಹೊಂದಿರುವ ಸಿನಿಮಾವಿದು. ಇನ್ನು ಚಿತ್ರವನ್ನುದಾಮೋದರ್ ನಿರ್ಮಾಣ ಮಾಡುತ್ತಿದ್ದು, ಮಿಥುನ್ ಚಂದ್ರಶೇಖರ್ ನಿರ್ದೇಶನ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಬಹುತಾರಾಬಳಗದ ‘ಯುವರತ್ನ’: ನನ್ನ ಕನಸು ನನಸಾಯ್ತು ಎಂದ ಅರು ಗೌಡ

#kuhookuhoo #song #realsed #balkaninews #vikramarya, #kannadasuddigalu #padmavathi #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags