ಸುದ್ದಿಗಳು

‘ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ಉಚಿತ ಟಿಕೆಟ್ ರೂಮರ್ ಬಗ್ಗೆ ಸಿಎಂ ಕ್ಲಾಸ್!!

ಮಂಡ್ಯ,ಫೆ.2

: ‘ಸೀತಾರಾಮ ಕಲ್ಯಾಣ’ ಸಿನಿಮಾ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.. ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಅಂತಹದರಲ್ಲಿ ಮಂಡ್ಯದಲ್ಲಿ ‘ಸೀತಾರಾಮ ಕಲ್ಯಾಣ’ ಚಿತ್ರದ ಟಿಕೆಟ್​ ಉಚಿತವಾಗಿ ಹಂಚುತ್ತಿದ್ದಾರೆ. ಸಿಎಂ ಪುತ್ರ ನಿಖಿಲ್​ ಚಿತ್ರ ನೋಡಲು ಮನೆಮನೆಗೆ ಟಿಕೆಟ್  ತಲುಪಿಸಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿತ್ತು..ಈಗ ಈ ಎಲ್ಲಾ ಗಾಳಿಸುದ್ದಿಗೆ ಬ್ರೇಕ್ ಬಿದ್ದಿದ್ದು ಈ ಬಗ್ಗೆ ಮುಖ್ಯಮಂತ್ರಿ ಹೆಚ್​​​ಡಿ ಕುಮಾರಸ್ವಾಮಿ ನಿನ್ನ ಮಾಧ್ಯಮದವರೊಂದಿಗೆ  ಪ್ರತಿಕ್ರಿಯಿಸಿದ್ದಾರೆ.

Image result for seetharama kalyana

ಟಿಕೆಟ್ಪುಕ್ಸಟ್ಟೆಯಾಗಿ ವಿತರಿಸುತ್ತಿದ್ದಾರೆ ಎಂದು ಅಪಪ್ರಚಾರ

ಟಿಕೆಟ್​ ಪುಕ್ಸಟ್ಟೆಯಾಗಿ ವಿತರಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ… ನಾವು ಅಷ್ಟೊಂದು ಅಗ್ಗದ ರಾಜಕಾರಣ ಮಾಡುವುದಿಲ್ಲೆಂದು ಗರಂ ಆಗಿ ಕುಮಾರಣ್ಣ ಉತ್ತರಿಸಿದ್ದಾರೆ…

ನಿಖಿಲ್ ಚಿತ್ರಕ್ಕೆ ಕುಮಾರಸ್ವಾಮಿ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ.. ಶೂಟಿಂಗ್ ಪ್ರಾರಂಭವಾದಾಗಿನಿಂದಲೂ ಸಿನಿಮಾ ಬಿಡುಗಡೆಯಾಗುವವರೆಗೂ ತಮ್ಮ ಮಗನಿಗೆ ಸಲಹೆ, ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ..

ಎ.ಹರ್ಷಾ ನಿರ್ದೇಶನದ ಈ ಚಿತ್ರದಲ್ಲಿ  ನಿಖಿಲ್​ ಗೌಡ, ರಚಿತಾರಾಮ್ ನಟಿಸಿದ್ದಲ್ಲದೆ ದೊಡ್ಡ ತಾರಾಬಳಗವೇ ಇತ್ತು..

Tags