ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಚಿತ್ರ ವಿಮರ್ಶೆ: ‘ಕುರುಕ್ಷೇತ್ರ’ದ ಅದ್ಭುತ ಕದನ ವೈಭವ

ಚಿತ್ರ              : ಕುರುಕ್ಷೇತ್ರ
ನಿರ್ಮಾಪಕ : ಮುನಿರತ್ನ
ನಿರ್ದೇಶಕ   : ನಾಗಣ್ಣ
ಸಂಗೀತ       : ವಿ .ಹರಿಕೃಷ್ಣ
ತಾರಾಗಣ   : ದರ್ಶನ್ , ಅಂಬರೀಶ್ ,ರವಿಚಂದ್ರನ್ , ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಡ್ಯಾನಿಶ್ ಅಖ್ತರ್, ಸೋನು ಸೂದ್, ಮೇಘನಾ ರಾಜ್, ಹರಿಪ್ರಿಯಾ, ಭಾರತಿ, ಶ್ರೀನಾಥ್, ಶ್ರೀನಿವಾಸ್ ಮೂರ್ತಿ ಹಾಗೂ ಮುಂತಾದವರು…

ಕುರುಕ್ಷೇತ್ರ.. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಸಿನಿಮಾ. ಮಹಾಭಾರತದ ಕಥೆ,2 ಡಿ ಹಾಗೂ 3 ಡಿ ಎಫೆಕ್ಟ್, ದರ್ಶನ್ 50ನೇ ಸಿನಿಮಾ, ಬಹುದೊಡ್ಡ ತಾರಾಬಳಗ, ಅದ್ದೂರಿ ವೆಚ್ಚ ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸಿನಿಮಾ ಮನರಂಜಿಸುತ್ತದೆ.

ಈ ಚಿತ್ರದ ಕಥೆ ಎಲ್ಲರಿಗೂ ತಿಳಿದಿರುವಂಥದ್ದೇ ಆಗಿದ್ದರೂ ಸಹ ಈ ಸಿನಿಮಾ ಅದ್ಭುತವಾಗಿ ಮತ್ತು ಅದ್ದೂರಿಯಾಗಿ ಮೂಡಿ ಬಂದಿದೆ.ಇನ್ನು ಚಿತ್ರದ ಕಥೆಯ ವಿಷಯಕ್ಕೆ ಬರುವುದಾದರೆ ಅಪ್ರತಿಮ ವೀರರಾದ ದುರ್ಯೋಧನ ಮತ್ತು ಭೀಮಸೇನ ಇವರಿಬ್ಬರ ಗದಾಯುದ್ಧದಿಂದಲೇ ಚಿತ್ರ ಶುರುವಾಗುತ್ತದೆ.

ಹೀಗೆ ಗದಾಯುದ್ಧಯಿಂದಲೇ ಶುರುವಾಗುವ ‘ಕುರುಕ್ಷೇತ್ರ’ ಕದನವು ಅದೇ ಗದಾಯುದ್ಧದ ಮೂಲಕ ಅಂತ್ಯ ಆಗುತ್ತದೆ. ಮಹಾಭಾರತ ಎಂಬ ಮಹಾಕಾವ್ಯವನ್ನು ಅಷ್ಟೇ ಚೆನ್ನಾಗಿ ತೆರೆ ಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದ್ದು, ಪೌರಾಣಿಕ ಪ್ರೇಮಿಗಳಿಗೆ ಸಿನಿಮಾ ಖುಷಿ ನೀಡುತ್ತದೆ.

ದುರ್ಯೋಧನ ಮತ್ತು ಭೀಮನ ಗದಾಯುದ್ಧ, ಶಕುನಿಯ ಸೇಡಿನ ಜ್ವಾಲೆ, ಪಗಡೆ ಆಟ, ದ್ರೌಪದಿಯ ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ಧ, ಚಕ್ರವ್ಯೂಹವನ್ನು ಬೇಧಿಸುವ ಅಭಿಮನ್ಯು, ಕರ್ಣನ ತ್ಯಾಗ, ವೀರ ದುರ್ಯೋಧನನ ಅಂತ್ಯ, ಪಾಂಡವರ ಪಕ್ಷಪಾತಿ ಶ್ರೀ ಕೃಷ್ಣನ ಯುದ್ದತಂತ್ರ ‘ಮಹಾಭಾರತ’ದ ಈ ಇಷ್ಟು ಸಂದರ್ಭಗಳಾಗಿದ್ದು, ಇವುಗಳೇ ಈ ಚಿತ್ರದ ಪ್ರಮುಖ ಭಾಗಗಳಾಗಿವೆ.

ದುರ್ಯೋಧನನಾಗಿ ದರ್ಶನ್ ಹಾಗೂ ಕರ್ಣನಾಗಿ ಅರ್ಜುನ್ ಸರ್ಜಾ ಪಾತ್ರಗಳು ಸೇರಿದಂತೆ ಬೀಷ್ಮನಾದ ಅಂಬರೀಶ್, ಕೃಷ್ಣನಾದ ರವಿಚಂದ್ರನ್ , ಕುಂತಿಯಾಗಿ ಭಾರತಿ ವಿಷ್ಣುವರ್ಧನ್ , ದ್ರೌಪದಿಯಾಗಿ ಸ್ನೇಹ, ಅಭಿಮನ್ಯುವಾಗಿ ನಿಖಿಲ್.. ಹೀಗೆ ಇವರೆಲ್ಲರ ಪಾತ್ರಗಳು ಸಹ ವೀಕ್ಷಕರಿಗೆ ಬಹು ಆಪ್ತವಾಗುತ್ತವೆ.

ಅಂದಹಾಗೆ ಈ ಚಿತ್ರದ ಕಥೆಯನ್ನು ಕೌರವರ ಅಗ್ರಜ ದುರ್ಯೋಧನನ ದೃಷ್ಟಿಕೋನದಲ್ಲಿ ನಿರೂಪಿಸಲಾಗಿರುವುದರಿಂದ ಸಹಜವಾಗಿ ಇಲ್ಲಿ ಪಾಂಡವರು ಮಂಕಾಗಿದ್ದಾರೆ ಎನ್ನಬಹುದು. ಆದರೂ ಎಲ್ಲರ ಅಭಿನಯವು ಮೋಡಿ ಮಾಡುತ್ತದೆ. ಅದಕ್ಕೆ ತಕ್ಕಂತೆ ಚಿತ್ರಕ್ಕೆ ಸಂಗೀತ ಮತ್ತು ಸಂಭಾಷಣೆಯೂ ಸಾಥ್ ನೀಡಿದೆ.

ಅಂದಹಾಗೆ ಇವತ್ತಿನ ಯುವ ಪೀಳಿಗೆಗಳಿಗೆ ‘ಕುರುಕ್ಷೇತ್ರ’ವೆಂಬ ಸಿನಿಮಾ ಬಹಳ ಪ್ರಮುಖವಾಗಿದೆ ಎಂದೇ ಹೇಳಬಹುದು. ನಿರ್ಮಾಪಕ ಮುನಿರತ್ನ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿರುವುದರಿಂದ ಚಿತ್ರದಲ್ಲಿನ ಅದ್ದೂರಿ ಸೆಟ್ ಗಳು, ಶ್ರೀಮಂತಿಕೆ ಚಿತ್ರದ ಸೌಂದರ್ಯ ಹೆಚ್ಚಿಸಿದೆ. ಇಡೀ ಕುಟುಂಬ ಸಮೇತ ಮಕ್ಕಳೊಂದಿಗೆ ಕುಳಿತು ಈ ಒಂದು ಮಹಾಕಾವ್ಯವನ್ನು ಎಲ್ಲರೂ ಒಮ್ಮೆ ನೋಡಲೇಬೇಕು.

ಹೊಸಬರ ಪ್ರೀತಿಯ ಕಥನ

#kurukshetramovie #kurukshetramoviereview #munirathnakurukshetra #kannadafilm, #kannadamovie, #kannadanews, #kannadanewmovie, #kannadacine,

Tags