ಸುದ್ದಿಗಳು

ಲೇಕ್ ಕೊಮೊ’ದಲ್ಲಿ ಮದುವೆಯಾಗಬೇಕೆಂಬ ಕನಸು ರಣವೀರ್ ನದ್ದು ಆಗಿರಲಿಲ್ಲವಂತೆ!?!

ಆಕೆಯ ಖುಷಿಯಲ್ಲೇ ನನ್ನ ಖುಷಿಯಿದೆ

ಮುಂಬೈ,ನ.29: ಬಾಲಿವುಡ್ ​ನ ಮೋಹಕ ಜೋಡಿ ದೀಪಿಕಾ ಪಡುಕೊಣೆ ಹಾಗೂ ರಣವೀರ್​ ಸಿಂಗ್​ ಅವರ ವಿವಾಹ ಇತ್ತೀಚೆಗೆಯಷ್ಟೇ ಇಟಲಿಯ ಲೇಕ್​ ಕೊಮೊದಲ್ಲಿ ನೆರವೇರಿತು..  ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಆರತಕ್ಷತೆ ನಡೆದಿದ್ದು ಇದೀಗ ನಿನ್ನೆ ಮುಂಬೈನಲ್ಲೂ ಆರತಕ್ಷತೆ ನಡೆದಿದೆ.. ಈಗ ರಣವೀರ್ ಒಂದು ಕುತೂಹಲಕಾರಿ ಸುದ್ದಿಯನ್ನು ಹೊರಹಾಕಿದ್ದಾರೆ..

Related image

ಡಿಪ್ಪಿ ಬಯಕೆಂತೆ!

ಲೇಕ್​ ಕೊಮೊದಲ್ಲಿ  ಮದುವೆಯಾಗಬೇಕೆಂಬ ಆಲೋಚನೆ ರಣವೀರ್ ನದ್ದು ಆಗಿರಲಿಲ್ಲವಂತೆ.. ಬದಲಾಗಿ ದೀಪಿಕಾಳಿಗೆ ಅಲ್ಲಿಯೇ ವಿವಾಹ ಆಗಬೇಕಂಬ ಕನಸಿತ್ತು ಹಾಗಾಗಿ ನಾನು ಆಕೆ ವಿರುದ್ದ ಹೋಗಲಿಲ್ಲ. ಆಕೆ ಬಯಸಿದ್ದರಿಂದಲೇ ನಾನು ಒಪ್ಪಿದೆ. ಆಕೆಯ ಖುಷಿಯಲ್ಲೇ ನನ್ನ ಖುಷಿಯಿದೆ ಎಂದು ಸಂದರ್ಶನವೊಂದರಲ್ಲಿ ರಣವೀರ್​ ತಿಳಿಸಿದ್ದಾರೆ.
ಪ್ರತಿ ಹೆಜ್ಜೆಯಲ್ಲೂ ದೀಪಿಕಾ ಆಲೋಚನೆ ಸ್ಪಷ್ಟವಾಗಿರುತ್ತಿತ್ತು. ಆಕೆ ಏನು ಬಯಸಿದ್ದಳೋ ಅದೇ ರೀತಿ ಮದುವೆ ನೆರವೇರಿತು ಎಂದು ವಿವಾಹದ ನಂತರ ರಣವೀರ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ

Related image

 

Tags