ಸುದ್ದಿಗಳು

ವಿಭಿನ್ನ ಪಾತ್ರದಲ್ಲಿ ಮಿಂಚಲು ರೆಡಿಯಾದ ಅಕ್ಕಿ

ಬೆಂಗಳೂರು,ಮೇ.19: ಲಕ್ಷ್ಮಿಬಾಂಬ್ ಸಿನಿಮಾ ಮೂಲಕ ಸದ್ಯ ಅಕ್ಷಯ್ ಕುಮಾರ್ ಮಿಂಚೋದಕ್ಕೆ ರೆಡಿಯಾಗಿದ್ದಾರೆ.

ನಟ ಅಕ್ಷಯ್ ಕುಮಾರ್ ಸದಾ ವಿಭಿನ್ನ ಪಾತ್ರಗಳಿಗೆ ಹೆಸರಾದವರು. ಸಾಕಷ್ಟು ಸಿನಿಮಾಗಳ ಮೂಲಕ, ಯಾವುದೇ ಪಾತ್ರಕ್ಕಾದರೂ ಸೈ ಎನಿಸುವ ನಟ ಅಕ್ಷಯ್ ಕುಮಾರ್, ತಮ್ಮದೇ ಆದ ನಟನಾ ಶೈಲಿಯಲ್ಲಿ ಮಿಂಚಿದ ಈ ನಟ ಇದೀಗ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ ಅಕ್ಕಿ

ಹೌದು, ಈ ನಟ ಲಕ್ಷ್ಮಿಬಾಂಬ್ ಸಿನಿಮಾ ಮೂಲಕ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದನ್ನು ಸ್ವತಃ ಅಕ್ಷಯ್ ಕುಮಾರ್ ಬಹಿರಂಗ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಕಣ್ಣಿಗೆ ಕಾಡಿಗೆ ಹಚ್ಚುವ ರೀತಿಯಲ್ಲಿದೆ. ಸದ್ಯ ಈ ಪೋಸ್ಟರ್ ಭಾರೀ ಕುತೂಹಲ ಹಾಗೂ ಅಕ್ಷಯ್ ಅವರ ಪಾತ್ರದ ಕುರಿತಾದ ಚರ್ಚೆಗಳು ನಡೆಯುತ್ತಿವೆ.

Image result for laxmi bomb movie

ಮುಂದಿನ ವರ್ಷ ಸಿನಿಮಾ ಬಿಡುಗಡೆ

ಇನ್ನು ಈ ಬಗ್ಗೆ ಟ್ವಿಟ್ ಮಾಡಿರುವ ನಟ, ಹೊಸ ಸಿನಿಮಾ‌ ಬಗ್ಗೆ ಹೇಳಿದ್ದಾರೆ. ಲಕ್ಷ್ಮಿಬಾಂಬ್ ಸಿನಿಮಾದಲ್ಲಿ ನಟಿಸುತ್ತಿದ್ದಯ, ಚಿತ್ರವನ್ನು ಖ್ಯಾತ ನಿರ್ದೇಶಕ ರಾಘವ ಲಾರೆನ್ಸ್‌ ಅವರು ನಿರ್ದೇಶಿನ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾಗೆ ಕಿಯಾರಾ ಆಡ್ವಾಣಿ ಅವರು ನಾಯಕಿಯಾಗಲಿದ್ದಾರೆ. ಇನ್ನು ಈ ಚಿತ್ರವು 2020 ಜೂನ್‌ 5 ಕ್ಕೆ ಬಿಡುಗಡೆಯಾಗಲಿದೆ. ಸದ್ಯ ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿರುವ ಅಕ್ಷಯ್ ಲುಕ್ ಸಿನಿಮಾಗೆ ಕಾಯುವಂತೆ ಮಾಡಿದೆ.

ಶಿವಣ್ಣ ಫ್ಯಾನ್ಸ್ ರುಸ್ತುಂ ಸಾoಗ್ ವಿರುದ್ಧ ಗುಡುಗಿದ್ದಾದ್ರು ಯಾಕೆ..?

#laxmmibomb #bollywood #akshaykumar #sandalwood

 

Tags