ಸುದ್ದಿಗಳು

ಲಕ್ಷ್ಮೀ ರಾಯ್ ಮೇಲೆ ಎಂಥೆಂಥ ಗಾಸಿಪ್ ಸುದ್ದಿಯಿದ್ದವು ನಿಮಗೆ ಗೊತ್ತಾ?

ಕನ್ನಡದ ನಟಿ ಲಕ್ಷ್ಮೀ ರಾಯ್‌ ಗ್ಲಾಮರ್ ಪಾತ್ರಗಳಿಂದ, ಗಾಸಿಪ್ ಸುದ್ದಿಗಳಿಂದಲೇ ಪ್ರಸಿದ್ಧರಾದವರು. ಚಿತ್ರರಂಗಕ್ಕೆ ಬಂದು ಹದಿನೈದು ವರ್ಷಗಳಾದರೂ ಈಗಲೂ ಒಂದಿಲ್ಲೊಂದು ಕಾರಣಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ.

‘ನಾನು ಸಿನಿಮಾ ಪ್ರವೇಶಿಸಲು, ಅವಕಾಶ ಪಡೆಯಲು ಸಮಸ್ಯೆಗಳೆದುರಾಗಲಿಲ್ಲ. ಆದರೆ ಅದನ್ನ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ ಆಗಿಬಿಡುತ್ತಿತ್ತು. ಯಾಕೆಂದರೆ ಆರಂಭಿಕ ದಿನಗಳಲ್ಲಿ ನನ್ನನ್ನು ದಿಕ್ಕು ತಪ್ಪಿಸುವುದಕ್ಕೆಂದೇ ಕೆಲವರು ಸಿದ್ಧವಾಗಿರುತ್ತಿದ್ದರು. ಅವರಿಂದಾಗಿಯೂ ನಾನು ವಿವಾದಗಳನ್ನ ಫೇಸ್ ಮಾಡಬೇಕಾಯ್ತು. ಈಗ ಹುಷಾರಾಗಿದ್ದೇನೆ’ ಎನ್ನುತ್ತಾರೆ ಲಕ್ಷ್ಮೀ ರಾಯ್‌.

Image result for lakshmi rai jhansi

“ನಾನು ಯಾವ್ಯಾವ ನಟರ ಜೊತೆ ಅಭಿನಯಿಸುತ್ತಿದ್ದೆನೋ ಅವರೆಲ್ಲರ ಜೊತೆ ಡೇಟಿಂಗ್ ನಡೀತಿದೆ ಎಂಬ ಗುಲ್ಲುಗಳೆದ್ದು ಬಿಡುತ್ತಿದ್ದವು. ಯಾರು ಇದನ್ನೆಲ್ಲಾ ಯಾಕಾಗಿ ಮಾಡುತ್ತಾರೋ ಗೊತ್ತಿಲ್ಲ. ಮೊದಲೆಲ್ಲಾ ಇಂಥ ಸುಳ್ಳು ಸುದ್ದಿಗಳಿಂದಾಗಿ ನನ್ನ ಕುಟುಂಬದವರೂ ಸೇರಿದಂತೆ ಎಲ್ಲರೂ ಸಂಕಟಪಡುತ್ತಿದ್ದೆವು. ಜನರ ಸ್ವಭಾವ ಅರ್ಥವಾಗುತ್ತಾ ಹೋದಂತೆಲ್ಲಾ ಈಗ ಇದನ್ನೊಂದು ನಾನ್ ಸೆನ್ಸ್ ಜೋಕ್ ಎಂದು ತಳ್ಳಿ ಹಾಕುತ್ತಿದ್ದೇವೆ’ ಎನ್ನುತ್ತಾರೆ ಲಕ್ಷ್ಮಿ.

ಮಾವಿನಕಾಯಿ ಪ್ರಸಂಗ

ಸುಳ್ಳು ಸುದ್ದಿಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಅವರೊಂದು ಪ್ರಸಂಗವನ್ನೂ ನೆನಪಿಸಿಕೊಳ್ಳುತ್ತಾರೆ. ‘ಹೀಗೆ ಒಮ್ಮೆ ಹುಳಿ ಹುಳಿ ಮಾವಿನಕಾಯಿ ತಿಂದದ್ದನ್ನ ನೋಡಿದ ಕೆಲವರು ‘ಲಕ್ಷ್ಮಿ ರಾಯ್ ಪ್ರೆಗ್ನೆಂಟಿರಬೇಕು’ ಎಂದು ಸುದ್ದಿ ಹಬ್ಬಿಸಿಬಿಟ್ಟಿದ್ದರು. ಅದಕ್ಕೆ ಇನ್ನೊಂದಷ್ಟು ಅಂತೆಕಂತೆಗಳು ಸೇರಿಕೊಂಡು ನನಗೇ ತಲೆ ತಿರುಗುವಷ್ಟು ಕಥೆ ಸೃಷ್ಟಿಯಾಗಿಬಿಟ್ಟಿತ್ತು. ಇಂಥ ಸುದ್ದಿ ಹಬ್ಬಿಸುವ ಕಿಡಿಗೇಡಿಗಳ ಸದ್ದಡಗಿಸುವುದಕ್ಕೆ ನಾನು ಕೋರ್ಟ್ ತನಕ ಬೇಕಾದರೂ ಹೋಗಿ ಫೈಟ್ ಮಾಡಬಲ್ಲೆ, ಹಾಗಂತ ನಿರ್ಧರಿಸಿಬಿಟ್ಟಿದ್ದೇನೆ’ ಎನ್ನುತ್ತಾರೆ ಲಕ್ಷ್ಮಿ ರಾಯ್.

‘ಝಾನ್ಸಿ’ ಯ ಫಿಟ್ನೆಸ್ ವಿಡಿಯೋ ವೈರಲ್…!!!

#balkaninews #lakshmiroy #gossip #tollywood #lakshmiroyinstagram #lakshmiroytwitter #lakshmiroyfacebook

Tags