ಬಾಲ್ಕನಿಯಿಂದಸಂದರ್ಶನಸುದ್ದಿಗಳು

ಆ್ಯಕ್ಟರ್, ಹಾರ್ಡ್ ಕೋರ್ ಬೈಕ್ ರೇಸರ್ ಮತ್ತು ಬಾಡಿ ಬಿಲ್ಡರ್ ಈ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಚಂದು..!!!

ಬೆಂಗಳೂರು.ಮೇ.16: ಗೃಹಲಕ್ಷ್ಮಿ ಧಾರಾವಾಹಿಯ ರಾಘವ್ ಪಾತ್ರದ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಈತನ ಹೆಸರು ಚಂದು ಬಿ ಗೌಡ. ಬಾಲ್ಯದಿಂದಲೂ ತಾನೊಬ್ಬ ನಟನಾಗಬೇಕು, ತೆರೆಯ ಮೇಲೆ ಮಿಂಚಬೇಕು ಎಂಬ ಮಹದಾಸೆ ಹೊಂದಿದ್ದರು ಚಂದು. ಒಂದು ಒಳ್ಳೆಯ ಅವಕಾಶಕ್ಕೆ ಹಾತೊರೆಯುತ್ತಿದ್ದಾಗ ‘ಮುಂಗಾರುಮಳೆ’ ಕೃಷ್ಣ ಅವರ ಗೃಹಲಕ್ಷ್ಮಿ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಲು ಆಫರ್ ಬಂತು.

ಗೃಹಲಕ್ಷ್ಮಿ ಧಾರಾವಾಹಿ ಸಂಪೂರ್ಣ ಕುಟುಂಬ ಪ್ರಧಾನವಾಗಿದ್ದು ಅದರಲ್ಲಿ ಚಂದು ಅವರು ರಾಘವ್ ಎಂಬ ಪ್ರಬುದ್ಧ ಪಾತ್ರದಲ್ಲಿ ನಟಿಸಿದ್ದರು. ತನ್ನ ವಯಸ್ಸಿಗಿಂತ ಹಿರಿಯನಾಗಿ ನಟಿಸಿದ ಚಂದು ಗೃಹಲಕ್ಷ್ಮಿಯ ಮೂಲಕ ಮನೆ ಮಾತಾಗಿರುವುದು ಸುಳ್ಳಲ್ಲ. ತನಗೂ ಇಂಥ ಗಂಡ, ಮಗ, ಅಪ್ಪ ಇರಬೇಕು ಎಂಬಷ್ಟರ ಮಟ್ಟಿಗೆ ಮೋಡಿ ಮಾಡಿಬಿಟ್ಟಿತ್ತು ರಾಘವ್ ಪಾತ್ರ. ಇಂತಿಪ್ಪ ಚಂದು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ‘ಚಂದು’ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದಾರೆ.

“ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಜೀವನದ ಬಹುದೊಡ್ಡ ಕನಸು. ಅದೇ ಕಾರಣಕ್ಕಾಗಿಯೇ ನಾನು ನಟನಾ ಕೇತ್ರಕ್ಕೆ ಕಾಲಿಟ್ಟಿದ್ದೇನೆ. ಒಂದೊಂದೇ ಮೆಟ್ಟಿಲು ಹತ್ತಿ ಯಶಸ್ಸು ಪಡೆಯಬೇಕು ಎಂಬುದು ನನ್ನ ಗುರಿ. ನಿಧಾನವಾದರೂ ತೊಂದರೆಯಿಲ್ಲ. ಈ ಕ್ಷೇತ್ರದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳಬೇಕು ಎಂದು ಆತ್ಮವಿಶ್ವಾಸದಿಂದ ಹೇಳುವ ಚಂದು ಯಾವ ರೀತಿಯ ಪಾತ್ರ ಕೊಟ್ಟರೂ ಅದನ್ನ ನಿರರ್ಗಳವಾಗಿ ಮಾಡಬಲ್ಲೆ ಎಂಬ ನಿರೂಪಿಸುವ ಉದ್ದೇಶದಿಂದ ರಾಘವ್ ಪಾತ್ರ ಒಪ್ಪಿಕೊಂಡರಂತೆ.

ಈಗಾಗಲೇ ಜಾಹೀರಾತು ಕ್ಷೇತ್ರದಲ್ಲಿ ರೂಪದರ್ಶಿಯಾಗಿ ಗುರುತಿಸಿಕೊಂಡಿರುವ ಚಂದು ಅವರ ನಟನಾ ಹಾದಿ ಸುಲಭವಾಗಿರಲಿಲ್ಲ. ಇಂಜಿನಿಯರ್ ಪದವೀಧರರಾಗಿರುವ ಅವರು ಗಾಂಧಿನಗರದಲ್ಲಿ ಎರಡು ವರ್ಷ ಅಲೆದಿದ್ದಾರೆ. ನಟನಾಗುವುದು ಹೇಳಿದಷ್ಟು ಸುಲಭವಲ್ಲ ಎಂಬುದು ಅವರಿಗೆ ಆಗ ತಿಳಿಯಿತು. ಆದರೂ ಅದರಿಂದ ಹೊರಬರದೇ ಪ್ರಯತ್ಮ ಮಾಡುತ್ತಲೇ ಇದ್ದರು. ಕೊನೆಗೂ ಅವರ ಸತತ ಪ್ರಯತ್ನಕ್ಕೆ ಉತ್ತಮ ಪ್ರತಿಫಲವೇ ದೊರೆಯಿತು. ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡರು.

ಮೊದಲ ಧಾರಾವಾಹಿಯ ಪಾತ್ರದಲ್ಲೇ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾದರು. ಇದೀಗ ಅವರು ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ‘ಅಟೆಂಪ್ಟ್ ಟು ಮರ್ಡರ್’ ಮತ್ತು ‘ಪ್ಲಾಟ್ ನಂ 9’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.

ನಟನೆಯು ಒಂದು ದಿನದಲ್ಲಿ ಕಲಿತು ಮುಗಿಯುವಂತದ್ದು ಅಲ್ಲ. ಅಲ್ಲಿ ಪ್ರತಿದಿನವೂ ಕಲಿಯಬೇಕಾಗುತ್ತದೆ. ನನಗೆ ಎಲ್ಲವೂ ಬರುತ್ತದೆ ಎಂಬ ಧೋರಣೆ ಇದ್ದರೆ ತುಂಬಾ ಕಷ್ಟ. ಯಾವುದೇ ಕ್ಷೇತ್ರವಾಗಲೀ, ನಾವು ಇಷ್ಟಪಟ್ಟು ಆಯ್ದುಕೊಂಡದಕ್ಕೆ ಬೆಲೆ ಕೊಡಬೇಕು. ನಟನೆ ಎಷ್ಟು ನ್ಯಾಚುರಲ್ ಆಗಿದೆಯೋ ಅಷ್ಟು ಜನ ಅದನ್ನು ಇಷ್ಟಪಡುತ್ತಾರೆ ಎನ್ನುವ ಚಂದು ಅವರಿಗೆ ಗೃಹಲಕ್ಷ್ಮಿಯ ನಿರ್ದೇಶಕಿ ಸ್ವಪ್ನಾ ಕೃಷ್ಣ ಅವರು ನಟನೆಯ ಕುರಿತು ಸಲಹೆಗಳನ್ನು ನೀಡುತ್ತಿದ್ದರಂತೆ. ಕೃಷ್ಣ ಸರ್ ನನ್ನ ಗಾಡ್ ಫಾದರ್ ಎಂದು ಹೆಮ್ಮೆಯಿಂದ ಹೇಳುವ ಚಂದು ಅವರು ಇಂದು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದಕ್ಕೂ ಅವರೇ ಕಾರಣ ಎನ್ನುತ್ತಾರೆ.

ನಟನೆಯ ಹೊರತಾಗಿ ಚಂದು ಅವರ್ ಹಾರ್ಡ್ ಕೋರ್ ಬೈಕ್ ರೈಸರ್. ಸಿಕ್ಕಾ ಪಟ್ಟೆ ಬೈಕ್ ಹುಚ್ಚು ಇರುವ ಅವರು ರಾಲಿಗಳಲ್ಲಿ ಭಾಗವಹಿಸಿರುತ್ತಾರೆ. ಇದರ ಹೊರತಾಗಿ ಫಿಟ್ ನೆಸ್ ನಲ್ಲೂ ಅಗಾಧ ಆಸಕ್ತಿ ಹೊಂದಿರುವ ಇವರು ಬಾಡಿ ಬಿಲ್ಡಿಂಗ್ ಮಾಡುತ್ತಾರೆ.

– ಅನಿತಾ ಬನಾರಿ

ಸನ್ ಸ್ಕ್ರೀನ್ ಬಳಸುವ ಮುನ್ನ ಜಾಗರೂಕರಾಗಿರಿ…!

#lakshmibaramma, #chandu, #interview, #balkaninews #filmnews, #kannadasuddigalu

Tags