ಸುದ್ದಿಗಳು

“ಲಕ್ಷ್ಮೀಸ್ ಎನ್ ಟಿಆರ್” ಮೂಲಕ್ ಬಾಂಬ್ ಸಿಡಿಸುತ್ತೇನೆಂದ ನಿರ್ದೇಶಕ

ಹೈದ್ರಾಬಾದ್, ಫೆ.11:

ಬಾಲಕೃಷ್ಣ ಅವರು ತಮ್ಮ ತಂದೆ ಎನ್ ಟಿಆರ್ ಅವರ  ಬಯೋಪಿಕ್ ಅನ್ನು ತೆರೆಗೆ ತರುವುದಾಗಿ ಹೇಳಿದ ಬಳಿಕ, ಕಾಂಟ್ರೋವರ್ಸಿಯಲ್ ಡೈರೆಕ್ಟರ್ ಎಂದೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ ಹೆಚ್ಚು ಸುದ್ದಿಯಾದರು. ಬಾಲಕೃಷ್ಣ ಅವರು ಎನ್ ಟಿಆರ್ ಕಥಾನಾಯಕುಡು, ಮಹಾನಾಯಕುಡು ಎಂಬ ಎರಡು ಸರಣಿಗಳಲ್ಲಿತಮ್ಮ ತಂದೆಯ ಬಯೋಪಿಕ್ ಬಿಡುಗಡೆಗೆ ಸಿದ್ದರಾಗುತ್ತಿದ್ದರೆ. ಅತ್ತ ರಾಮ್ ಗೋಪಾಲ್ ವರ್ಮಾ, ಲಕ್ಷ್ಮೀಸ್ ಎನ್ ಟಿಆರ್ ಎಂಬ ಟೈಟಲ್ ಅನ್ನು ನೋಂದಣಿ ಮಾಡಿಸಿಕೊಂಡು ಬಾಲಯ್ಯಗೆ ಸೆಡ್ಡು ಹೊಡೆದರು.

ಇದೀಗ ಬಳಿಕ ಎನ್ ಟಿಆರ್ ಕಥಾನಾಯಕುಡು ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಗಿದ್ದು ಆಯ್ತು. ಮತ್ತೊಂದೆಡೆ ಲಕ್ಷ್ಮೀಸ್ ಎನ್ ಟಿಆರ್ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸದ್ದುಮಾಡಿತು. ಹೀಗೆ ಬಾಲಯ್ಯ ಅವರಿಗೆ ಒಂದೊಂದೆ ಟಾಂಗ್ ನೀಡುವ ಕೆಲಸವನ್ನು ಮಾಡುತ್ತಿರುವ ರಾಮ್ ಗೋಪಾಲ್ ವರ್ಮಾ. ಇದೀಗ ಮಹಾನಾಯಕುಡು ಚಿತ್ರಬಿಡುಗಡೆಯ ದಿನಾಂಕ ಘೋಷಣೆಯಾಗತ್ತಿದ್ದಂತೆ ತನ್ನ ಲಕ್ಷ್ಮೀಸ್ ಎನ್ ಟಿಆರ್ ನ ಟ್ರೇಲರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಬಾಲಯ್ಯ ಅವರ ನಿದ್ದೆಗೆಡಿಸುವ ಪ್ರಯತ್ನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಹೆಚ್ಚುತ್ತಿದೆ ಕುತೂಹಲ

ಅಂದಹಾಗೆ ಲಕ್ಷ್ಮೀಸ್ ಎನ್ ಟಿಆರ್ ನಲ್ಲಿ ತಾನು ನೈಜವಾದ ವಿಚಾರವನ್ನೇ ಹೇಳಿಕೊಂಡಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಬಾಂಬ್ ಹಾಕಿರುವುದು ಇದೀಗ ಬಾಲಯ್ಯ, ಎನ್ ಟಿಆರ್ ಕುಟುಂಬ ಸದಸ್ಯರು, ಆಂದ್ರಪ್ರದೇಶ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಯ್, ಟಿಡಿಪಿ ಪಕ್ಷದ ನಾಯಕರಲ್ಲಿ ಕುತೂಹಲ ಹಾಗೂ ಭಯವನ್ನುಂಟುಮಾಡಿದೆ. ಚಂದ್ರಬಾಬು ಹಾಗೂ ಅವರ ಬೆಂಬಲಿಗರು ಎನ್ ಟಿಆರ್ ಅವರ ಬೆನ್ನಿಗೆ ಚೂರಿಹಾಕಿದರು ಎಂಬಂತೆ ಚಿತ್ರದಲ್ಲಿ ತೋರಿಸಲಾಗಿದ್ದು. ಚುನಾವಣಾ ಸಮಯದಲ್ಲಿ ಇಂತಹ ಸಿನಿಮಾಗಳು ಬಂದರೆ ತಮ್ಮ ಪಕ್ಷಕ್ಕೆ ತೊಂದರೆಯಾಗಬಹುದು ಎಂಬ ಭಯ ಇದೀಗ ಪಕ್ಷದ ನಾಯಕರು ಹಾಗೂ ಚಂದ್ರಬಾಬು ಅವರನ್ನು ಕಾಡುತ್ತಿದೆಯಂತೆ.

ಚಿತ್ರದ ಪ್ರಮೋಷನ್ ಗಾಗಿ ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14ರಿಂದ ವಿಭಿನ್ನವಾಗಿ ಚಿತ್ರದ ಪ್ರಮೋಷನ್ ಮಾಡುವುದಾಗಿ ಆರ್ ಜಿವಿ ಹೇಳಿಕೊಂಡಿದ್ದಾರೆ. ಈ ನಡುವೆ ಲಕ್ಷ್ಮೀಸ್ ಎನ್ ಟಿಆರ್ ನಲ್ಲಿ ಚಂದ್ರಬಾಬು ನಾಯ್ಡು ಅವರನ್ನೇ ಮುಖ್ಯ ಟಾರ್ಗೆಟ್ ಮಾಡಲಾಗಿದೆ ಎಂಬ ಮಾತು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ವ್ಯಾಸರಾಯ್ ಹೊಟೇಲ್ ನಲ್ಲಿ ನಡೆದ ಘಟನೆಯೊಂದನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಇದಕ್ಕಾಗಿ ವ್ಯಾಸರಾಯ್ ಹೋಟೆಲ್ ನ ಸೆಟ್ ಹಾಕಿಸಿಕೊಂಡಿರುವುದಾಗಿ ಆರ್ ಜಿವಿ ಹೇಳಿದ್ದಾರೆ.

#tollywood #tamilmovies #balkaninews #rgv #lakshmisntr #balkaninews #lakshmisntrrgv

Tags