ಸುದ್ದಿಗಳು

ಕೆಂಪು ತೋಟದ ಸಸ್ಯಕಾಶಿಗೆ ಎಪ್ಪತ್ತೆರಡನೆಯ ಸ್ವಾತಂತ್ರ್ಯ ವೈಭವ….

ಬೆಂಗಳೂರು, ಆ.10: ಲಾಲ್ ಬಾಗ್ ಎಂದಾಕ್ಷಣ ನೆನಪಿಗೆ ಬರುವುದು ಕೆಂಪು ತೋಟದೊಳಗಿರುವ ದೊಡ್ಡ ಗಾಜಿನ ಮನೆ . ಅದರ ಸುತ್ತಲೂ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಮೆರೆದಿರುವ ಸಸ್ಯಕಾಶಿ. ಪ್ರತಿ ವರ್ಷವೂ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚಾರಣೆ ಮತ್ತು ಜನವರಿ 26ರ  ಗಣರಾಜೋತ್ಸ್ಯವ ದಿನಾಚಾರಣೆಯ ಪ್ರಯುಕ್ತ ಕೆಂಪು ತೋಟವನ್ನು ವರ್ಷ ವರ್ಷವೂ ವಿಶಿಷ್ಟ ವೈಚಾರಿಕತೆಗಳನ್ನು ಬಿಂಬಿಸುವಂತೆ ಆಯೋಜಿಸಲಾಗುವ ಫಲಪುಷ್ಪ ಪ್ರದರ್ಶನಕ್ಕೆ ಈ ವರ್ಷವೂ ನೂಕುನುಗ್ಗಲು ಕಂಡುಬಂದಿತು.  ಗಾಜಿನಮನೆಯನ್ನು ವಿ‍ಜೃಂಭಣೆಯಿಂದ ಕಂಗೊಳಿಸುವಂತೆ ಮಾಡಲಾಗಿದ್ದು, ಈ ಬಾರಿ ಕರುನಾಡ ಚಿತ್ರೋದ್ಯಮ ಹಾಗೂ ಭಾರತೀಯ ಸೇನಾ ಪಡೆಗಳ ಪ್ರತಿನಿಧೀಸುವಂತೆ ಫಲಫುಷ್ಪಗಳನ್ನು ಸ್ವಾಭಾವಿಕವಾಗಿ ಪ್ರಸ್ತುತಪಡಿಸಿರುವುದನ್ನು ನೋಡಲು ಕಣ್ಣಿಗೊಂದು ಹಬ್ಬ.  ಈ ಕಾರಣಕ್ಕೆ ದಶಕಗಳೀಂದ ಬೆಂಗಳೂರಿನಲ್ಲಿರುವ ಪ್ರವಾಸಿ ತಾಣಗಳಲ್ಲಿ ಲಾಲ್ ಬಾಗ್ ಕೂಡಾ ಮಹತ್ವಾದ್ದಾಗಿದೆ.

ಮಂತ್ರಮುಗ್ಧರಾದ ಪ್ರೇಕ್ಷಕರು….!

ಸುತ್ತಲೂ ಗಿಡಮರ, ಸಸ್ಯಕಾಶಿ, ಹೂಗಳಿಂದ ನಿಸರ್ಗ ಸ್ನೇಹಿಗಳನ್ನು ಖುಷಿಪಡಿಸುವ  ಲಾಲ್ ಬಾಗನ್ನು ವೀಕ್ಷಿಸಲು ಸಾವಿರಾರು ಮಂದಿ ಪ್ರವಾಸಿಗರು ನಿತ್ಯವೂ ಬರುತ್ತಾರೆ. ಈ ವರ್ಷ 208 ನೇ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನದ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚಾರಣೆ ಪ್ರಯುಕ್ತ ಆಗಸ್ಟ್ 4 ರಿಂದ ಕಾರ್ಯಕ್ರಮವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸಮರ್ಪಿಸಲಾಗಿದೆ . ದೆಹಲಿಯ ಇಂಡಿಯಾ ಗೇಟ್ ಯುದ್ಧ ಸ್ಮಾರಕ, ಅಮರ್ ಜವಾನ್ ಸಮಾಧಿಯ  ಕಲಾಕೃತಿಯನ್ನು ಅತ್ಯಂತ ಮನಮೋಹಕವಾಗಿ ಇಲ್ಲಿ ಪ್ರದರ್ಶಿಸಲಾಗಿದೆ. ಚಂದನವನ ಕುರಿತಾಗಿ ಪ್ರಸ್ತುತ ಪಡಿಸಲಾಗಿರುವ ಫಲಫುಷ್ಪಗಳು ಕನ್ನಡ ಚಲನಚಿತ್ರ ಉದ್ಯಮವು ಪೂರ್ಣಗೊಂಡ 85 ವರ್ಷಗಳ ಸಂಭ್ರಮಾಚಾರಣೆಯನ್ನು ತಮ್ಮ ಪರಿಮಳದಿಂದ, ಅತ್ಯಕರ್ಷಕ ಬಣ್ಣ- ಕಂಪು- ಸೌಂದರ್ಯಗಳಿಂದ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿವೆ.   

ಹೂವುಗಳನ್ನು ಬಳಸಿ 150 ಕಲಾವಿದರಿಂದ ಹೂವಿನ ಪ್ರದರ್ಶವನ್ನು ಮಾಡಲಾಗಿದೆ. ಸುಮಾರು 15 ದಿನಗಳ ಕಾಲ ನಡೆಯುವ ಈ ಫಲಪುಷ್ಪ ಪ್ರದರ್ಶನ ಪ್ರತಿನಿತ್ಯ ಹೊಚ್ಚ ಹೊಸತನ ಮೇರೆಯುವಲ್ಲಿ ಅತ್ಯಂತ ಕಾಳಜಿ ವಹಿಸಿ   40,000 ಹೂವುಗಳನ್ನು ದಿನಕ್ಕೆ ಮೂರು ಬಾರಿ ಬದಲಾಯಿಸಲಾಗುವುದು. ಸುಮಾರು 87 ಜಾತಿಯ ಹೂವುಗಳನ್ನು ಬಳಸಿ ಪ್ರತಿಮೆಗಳನ್ನು ಮಾಡಲಾಗಿದೆ. ಈ ಕಾರ್ಯಕ್ರಮದ ಒಟ್ಟು ಖರ್ಚುವೆಚ್ಚ 2 ಕೋಟಿ ಗಳಿಗಿಂತಲೂ ಹೆಚ್ಚಿದೆ ಎನ್ನಬಹುದು.  ನೀವು ಕೂಡ ಒಮ್ಮೆ ಹೋಗಿ ನೋಡಿಕೊಂಡು ಬನ್ನಿ.

Tags

Related Articles