ಸುದ್ದಿಗಳು

ಮಿಲೀ ಸೈರಸ್ ಜೊತೆಗೆ ಮದುವೆಯಾದ ನಂತರದ ಬಗ್ಗೆ ಮಾತನಾಡಿದ ಲಿಯಾಮ್ ಹೆಮ್ಸ್ವರ್ತ್

ಬೆಂಗಳೂರು, ಫೆ.05:

ನಟ ಲಿಯಾಮ್ ಹೆಮ್ಸ್ವರ್ತ್ ಅವರು ಪಾಪ್ ಸ್ಟಾರ್‍, ನಟಿ ಮಿಲೀ ಸೈರಸ್ ಜೊತೆಗಿನ ವೈವಾಹಿಕ ಜೀವನದ ಕುರಿತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

29 ವರ್ಷ ವಯಸ್ಸಿನ ನಟಿ ಮತ್ತು ಸೈರಸ್ (26) ಕಳೆದ ವರ್ಷ ಡಿಸೆಂಬರ್‍ ನಲ್ಲಿ ಫ್ರಾಂಕ್ಲಿನ್, ಟೆನ್ನೆಸ್ಸಿಯಲ್ಲಿನ ತಮ್ಮ ಮನೆಯಲ್ಲಿ ನಡೆದ ಸಮಾರಂಭದಲ್ಲಿ ವಿವಾಹವಾದರು.

‘ಇದು ಅದ್ಭುತವಾಗಿದೆ! ಅದನ್ನು ನಾನು ಪ್ರೀತಿಸುತ್ತಿದ್ದೇನೆ. ಬಹಳಷ್ಟು ಬದಲಾಗಿದೆ ಎಂದು ಅನಿಸುವುದಿಲ್ಲ, ಆದರೆ ಮತ್ತೊಂದೆಡೆ ಬದಲಾಗಿದೆ!” ಕ್ಯಾಲಿಫೋರ್ನಿಯಾದಲ್ಲಿ ನಡೆದ ಗುಡ್‍ ಡೇ ಯುಎಸ್ಎ ಗಾಲಾದಲ್ಲಿ ಭಾಗವಹಿಸಿ ಹೇಮ್ಸ್ವರ್ಥ್ ಮಾತನಾಡಿದರು.

ಇಂಡಿಪೆಂಡೆಂಟ್ ಪ್ರಕಾರ, ಕಾರ್ಯಕ್ರಮದಲ್ಲಿ ಮನರಂಜನೆ, ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಸ್ಟ್ರೇಲಿಯಾದ ವ್ಯಕ್ತಿಗಳನ್ನು ಗೌರವಿಸುತ್ತದೆ. ಹೇಮ್ಸ್ವರ್ತ್ ಅವರನ್ನು ಎಕ್ಸಲೆನ್ಸ್ ಇನ್ ಫಿಲ್ಮ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಹೇಮ್ಸ್ವರ್ತ್ ಮತ್ತು ಸೈರಸ್‍ ಅವರು ವಿವಾಹವಾದ ನಂತರ ಪ್ರಥಮ ಬಾರಿ ಇಬ್ಬರು ಒಟ್ಟಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ದಂಪತಿಗಳು ತಮ್ಮ ನಿಕಟ ಸಂಬಂಧಿಗಳು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನಿಸಿದ್ದರು. ತಮ್ಮ ವಿಶೇಷ ದಿನವನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುತ್ತಿರುವುದು ಆನಂದದಾಯಕವಾಗಿದೆ ಎಂದು ಹೇಳಿದರು.

ಗ್ರೀನ್ ಟೀ ಹೀಗೆಲ್ಲಾ ಆರೋಗ್ಯದಲ್ಲಿ ಚಮತ್ಕಾರ ಮಾಡತ್ತದೆಯೇ !!?!!

#hollywood #balkaninews #LiamHemsworth #LiamHemsworthwedding

Tags