ಸುದ್ದಿಗಳು

ಖರ್ಜೂರ ತಿನ್ನೋದ್ರಿಂದ ದೇಹಕ್ಕೆ ಸಿಗುತ್ತೆ ಹತ್ತು ಹಲವು ಲಾಭಗಳು!

ಸಾಮಾನ್ಯವಾಗಿ ನಾವು ನಮ್ಮ ದೇಹದ ಆರೊಗ್ಯವನ್ನು ಕಾಪಾಡಿಕೊಳ್ಳೊದಕ್ಕೆ ಹತ್ತು-ಹಲವು  ಸರ್ಖಸ್ ಮಾಡ್ತೀವಿ… ಯಾವ ಹಣ್ಣು ತರಕಾರಿ  ತಿಂದ್ರೆ ಆರೊಗ್ಯಕ್ಕೆ ಒಳ್ಳೆದು ಅಂತಾ ವೈದ್ಯರ ಬಳಿ ಕೆಲ ಸಲಹೆಯನ್ನೂ ಕೇಳ್ತೀವಿ..ನಮ್ಮ ಮನೆಯಲ್ಲೆ ಸದಾ ಇರುವ ಒಂದು ಹಣ್ಣಿನಿಂದ ನಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು… ಆಗಾದ್ರೆ ಆ ಹಣ್ಣು ಯಾವ್ದು ಅಂತೀರಾ    :

ಎಸ್..ಖರ್ಜೂರ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ … ಕೆಲವ್ರು ಅಂತು ಬಾಯಿ ಚಪ್ಪರಿಸಿಕೊಂಡು ಈ ಹಣ್ಣನ್ನು ತಿನ್ನುತಾರೆ …ಈ ಹಣ್ಣು ತಿನ್ನೊದ್ರಿಂದ ಬಾಯಿಗೆ ರುಚಿ ಸಿಗೊದು ಅಷ್ಟೇ ಅಲ್ಲದೆ  ದೇಹಕ್ಕೆ ಹತ್ತು ಹಲವು ಲಾಭಗಳು ಕೂಡ ಇದೆಯಂತೆ.. ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು  ಅಂತಾರಲ್ಲ ಅದೇ ರೀತಿ ಈ ಹಣ್ಣು ಕೂಡ..ಪ್ರತಿಯೊಬ್ಬರಿಗೂ ದೇಹದಲ್ಲಿ ನಾನಾ ರೀತಿಯ ತೊಂದರೆಗಳು ಇದ್ದೆ ಇರುತ್ತೆ…ಅಂತವರು  ನಿತ್ಯ ಒಂದೆರೆಡು ಖರ್ಜೂರಗಳನ್ನು ಸೇವಿಸಿದರೆ ದೇಹದಲ್ಲಿನ ಜೀರ್ಣಕ್ರಿಯೆ,ರಕ್ತಹೀನತೆ, ಸಮಸ್ಯೆಯನ್ನು ಹೋಗಲಾಡಿಸ ಬಹುದು..

ಅಸಿಡಿಟಿ, ಎದೆ ಉರಿ ಇರುವವರು ಕೂಡ  ಖರ್ಜೂರವನ್ನು ತಿಂದ್ರೆ ಎದೆ ಊರಿಯು ಕಡಿಮೆ ಆಗುತ್ತದೆ.ಈ ಖರ್ಜೂರದಲ್ಲಿ ವಿಟಮಿನ್,ಖನಿಜಾಂಶ ಸ್ವಲ್ಪ ಜಾಸ್ತಿನೇ ಇರೊದ್ರಿಂದ ಕೆಲ ಖಾಯಿಲೆಗಳಿಗು ಕೂಡ ಇದು ರಾಮಬಾಣವಾಗಿದೆ ಅಂತಾರೆ ಡಾಕ್ಟರ್….ಈ ಹಣ್ಣು ಎಲ್ಲಾ ಕಾಲದಲ್ಲೂ ಸಿಗುವುದರಿಂದ ಯಾರು ಯಾವಾಗ ಬೇಕಾದ್ರು ತಿನ್ನಬಹುದು… ಗರ್ಭಿಣಿಯಾದಾಗ ಕೆಲವರಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದರೆ ಖರ್ಜೂರ ತಿಂದರೆ ಸಾಕು, ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ಆರೋಗ್ಯ ವದ್ಧಿಸುವುದಲ್ಲದೆ ಭ್ರೂಣದ ಬೆಳವಣಿಗೆಗೆ ಸಹಕಾರಿಯಾಗಿ ಹೆರಿಗೆಯ ನಂತರ ಎದೆಯಲ್ಲಿ ಹಾಲು ಹೆಚ್ಚು ಉತ್ಪತ್ತಿ ಮಾಡುತ್ತದೆಯಂತೆ…

ಇನ್ನಾ ಡಯಾಬಿಟಿಸ್ ಇರೊರು ಅಯ್ಯೊ ಖರ್ಜೂರ ಅಂದ್ರೆ ಅದು ತುಂಬಾ ಸ್ವೀಟ್ ಆಗಿರುತ್ತೆ ನಾವು ಹೇಗಪ್ಪ ತಿನ್ನೊದು ಅಂತಾ ಯೋಚಿಸ್ತಿರ್ತಾರೆ… ಇನ್ನುಮುಂದೆ ಯಾವುದೇ ಭಯ ಇಲ್ಲಾದೆ ಡಯಾಬಿಟೆಸ್ ಇರೊರು ಕೂಡ ಖರ್ಜೂರವನ್ನು ತಿನ್ನಬಹುದು.. ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಈ ಹಣ್ಣು ತಿನ್ನೊದಕ್ಕೆ ಜನ್ರು ಕೂಡ ಇಷ್ಟ ಪಡ್ತಾರೆ…ಒಟ್ನಲ್ಲಿ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅನ್ನೊ ಗಾದೆ ಮಾತಿಗೆ ಈ ಖರ್ಜೂರದ ಮಹತ್ವ ಕೂಡ ಸೇರುತ್ತದೆ…..

Tags