ಸುದ್ದಿಗಳು

ಲೈಫೇನೇ ಟು ಟ್ವೆಂಟಿ: ‘ಐ ಲವ್ ಯೂ’ ಮೂವಿ ವಿಡಿಯೋ ಸಾಂಗ್ ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ನಟಿಸಿರುವ ‘ಐ ಲವ್ ಯೂ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಬಾಕ್ಸ್ ಆಫೀಸ್ ನಲ್ಲಿಯೂ ಕಮಾಲ್ ಮಾಡುತ್ತಿದೆ.

ಅಂದ ಹಾಗೆ ಇಷ್ಟು ದಿನಗಳ ಕಾಲ ಈ ಚಿತ್ರವು ಲಿರಿಕಲ್ ಹಾಡುಗಳಿಂದ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಚಿತ್ರದ ವಿಡಿಯೋ ಹಾಡೊಂದು ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಈ ಚಿತ್ರದ ‘ಲೈಫೇನೇ ಟು ಟ್ವೆಂಟಿ ಹಾಗೂ ಲವ್ ಅನ್ನೊಂದು ಒಂದು ದೊಡ್ಡ ರೋಗ’ ಎಂಬ ಸಾಲುಗಳನ್ನು ಒಳಗೊಂಡಿರುವ ವಿಡಿಯೋ ಹಾಡನ್ನು ಲಹರಿ ಮ್ಯೂಸಿಕ್ ನವರು ಯುಟ್ಯೂಬ್ ನಲ್ಲಿ ರಿಲೀಸ್ ನಲ್ಲಿ ಮಾಡಿದ್ದಾರೆ. ಈ ಹಾಡನ್ನು ಸಂತೋಷ್ ನಾಯ್ಕ್ ಬರೆದಿದ್ದು, ಡಾ. ಕಿರಣ್ ತೊಟಂಬೈಲ್ ಸಂಗೀತ ನೀಡಿದ್ದಾರೆ.

ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬಂದಿದ್ದು, ಈಗಾಗಲೇ ಯಶಸ್ವಿ ಎರಡು ವಾರಗಳನ್ನು ಪೂರೈಸಿದೆ. ಈ ಹಿಂದೆ ‘ಬ್ರಹ್ಮ’ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ಆರ್. ಚಂದ್ರು ಮತ್ತು ಉಪೇಂದ್ರ ಜೋಡಿ ಮತ್ತೆ ಕಮಾಲ್ ಮಾಡಿದೆ. ಚಿತ್ರದಲ್ಲಿ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ತ್ರಿವೇಣಿ ರಾವ್, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಪವರ್ ಸ್ಟಾರ್

#filmnews, #kannadasuddigalu #lifeyenet20, #videosomg, #realesed, #balkaninews #upendra, #rachitharam,

Tags