ಸುದ್ದಿಗಳು

‘ಲಿಟಲ್ ವುಮೆನ್’ ಸೆಟ್ ನ ಚಿತ್ರಗಳನ್ನು ಹಂಚಿಕೊಂಡ ಎಮ್ಮಾ ವ್ಯಾಟ್ಸನ್

ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್

ಬೆಂಗಳೂರು, ಡಿ.15: ಎಮ್ಮಾ ವ್ಯಾಟ್ಸನ್ ಅವರು ‘ಲಿಟಲ್ ವುಮೆನ್’ ನ ಭಾಗವಾಗಿರುವುದಕ್ಕೆ ತುಂಬಾ ಸಂತೋಷವಾಗಿದ್ದಾರೆ ಎಂಬುದಕ್ಕೆ ಇತ್ತೀಚೆಗೆ ಅವರು ಪೋಸ್ಟ್ ಮಾಡಿದ ಫೋಟೊಗಳೇ ಸಾಕ್ಷಿ ಹೇಳುತ್ತಿವೆ.

‘ಹ್ಯಾರಿ ಪಾಟರ್’ ಚಿತ್ರದ ಸೆಟ್‍ ನಲ್ಲಿನ ಫೋಟೊಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಸೆಟ್‍ ನಲ್ಲಿ ಇದ್ದ ಗ್ರೇಟಾ ಗೆರ್ವಿಗ್ ಮತ್ತು ಅವಳ ಸಹವರ್ತಿಗಳಾದ ಟಿಮೊಥಿ ಚಲೆಮೆಟ್, ಸವೊಯಿರ್ಸೆ ರೊನಾನ್, ಫ್ಲೋರೆನ್ಸ್ ಪುಗ್ ಮತ್ತು ಮತ್ತು ಎಲಿಜಾ ಸ್ಕ್ಯಾನ್ಲೆನ್ ಕೂಡ ಕಾಣಿಸಿಕೊಂಡಿದ್ದಾರೆ.ಲೂಯಿಸಾ ಮೇ ಅಲ್ಕಾಟ್ ಅವರು ಬರೆದ ಕಾದಂಬರಿಯನ್ನು ಆಧರಿಸಿದ ಚಿತ್ರ

ಪುಸ್ತಕದ ಆಯ್ದ ಭಾಗವನ್ನು ಉಲ್ಲೇಖಿಸಿ ವ್ಯಾಟ್ಸನ್ “ನನ್ನ ಸಹೋದರಿಯರನ್ನು ಇಷ್ಟಪಡುವಷ್ಟು ಎಂದಿಗೂ ಯಾರನ್ನೂ ನಾನು ಪ್ರೀತಿಸಲಾರೆ” ಎಂದು ಬರೆದಿದ್ದಾರೆ. “- ಲೂಯಿಸಾ ಮೇ ಆಲ್ಕಾಟ್, @ ಲಿಟ್ಲ್ ವಿಮೆನ್? ಎಡದಿಂದ: ಮೆಗ್ ಮಾರ್ಚ್, ಗ್ರೆಟಾ ಗೆರ್ವಿಗ್ (ನಿರ್ದೇಶಕ), ಜೋ ಮಾರ್ಚ್, ಅಮಿ ಮಾರ್ಚ್, ಬೆತ್ ಮಾರ್ಚ್ ಮತ್ತು ಲಾರೀ (ಥಿಯೋಡೋರ್ ಲಾರೆನ್ಸ್)” ಫೋಟೊದಲ್ಲಿ ಇದ್ದಾರೆ.

ಮೆರಿಲ್ ಸ್ಟ್ರೀಪ್ ಸಹ ಚಿತ್ರದಲ್ಲಿ ನಟಿಸಿದ್ದು, ಲೂಯಿಸಾ ಮೇ ಅಲ್ಕಾಟ್ ಬರೆದ ಕಾದಂಬರಿಯ ಮೇಲೆ ಆಧಾರಿತವಾಗಿದೆ ಮತ್ತು ಮೆಗ್, ಜೋ, ಬೆತ್ ಮತ್ತು ಆಮಿ ನಾಗರಿಕ ಯುದ್ಧದ ನಂತರ ಅಮೇರಿಕದ ಮಾರ್ಚ್ ಸಹೋದರಿಯರ ಸುತ್ತಲೂ ಕೇಂದ್ರೀಕರಿಸಿದೆ.

ಈ ಕಾದಂಬರಿಯನ್ನು ಆಧರಿಸಿದ 1994ರಲ್ಲಿ ತೆರೆ ಕಂಡ ಚಿತ್ರದಲ್ಲಿ ವಿನ್ನೊನಾ ರೈಡರ್, ಕ್ರಿಶ್ಚಿಯನ್ ಬೇಲ್, ಸುಸಾನ್ ಸರಂಡನ್ ಮತ್ತು ಕಿರ್ಸ್ಟನ್ ಡನ್ಸ್ಟ್ ನಟಿಸಿದ್ದರು. ‘ಲಿಟಲ್ ವುಮೆನ್’ ಮುಂದಿನ ವರ್ಷ ಕ್ರಿಸ್ಮಸ್‍ ನಲ್ಲಿ ಬಿಡುಗಡೆಯಾಗಲಿದೆ ಎಂದು ಪತ್ರಿಕೆ ವರದಿ ಮಾಡಿದೆ.

Tags