ಸುದ್ದಿಗಳು

ನನಗೆ ಇದೊಂದು ವಿಶಿಷ್ಟ ಸಿನಿಮಾ: ಅವಿನಾಶ್

ನ. 9 ರಂದು ತೆರೆ ಕಾಣುತ್ತಿರುವ ‘ಲಾಕ್’

ಬೆಂಗಳೂರು, ಅ.27: ಇತ್ತಿಚೆಗೆ ಸಮಾಜದ ವಿವಿಧ ಕ್ಷೇತ್ರಗಳಿಂದ ಚಿತ್ರರಂಗಕ್ಕೆ ಬಂದು, ಈ ಪವರ್ ಫುಲ್ ಮಾಧ್ಯಮದ ಸದುಪಯೋಗ ಮಾಡಿಕೊಳ್ಳಲು ತಮ್ಮಲ್ಲಿರುವ ಅದಮ್ಯ ಆಸಕ್ತಿ, ವಿಚಾರ, ಸಂದೇಶಗಳನ್ನು ಜಗಜ್ಜಾಹೀರು ಮಾಡುವ ಹೊಸ ನಡೆ ಸ್ವಾಗತಾರ್ಹ.

ಅದರಲ್ಲೂ ‘ಲಾಕ್’ ಚಿತ್ರದ ನಿರ್ದೇಶಕ ಪರಶುರಾಮ್ ಚಂದನವನದಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಅಪ್ರತಿಮ ರಾಷ್ಟ್ರನಾಯಕ , ತಾಯಿ ಭಾರತಾಂಬೆಯನ್ನು ಮೂರು ಶತಮಾನದ ದಾಸ್ಯದ ಉರುಳಿನಿಂದ ಮುಕ್ತಿಗೊಳಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರ ಕುರಿತಾಗಿ ಒಂದಷ್ಟು ಬೆಳಕು ಚೆಲ್ಲುವ ಸತ್ಯ ಕಥೆಗಳನ್ನು ಬೆಳ್ಳಿತೆರೆಗೆ ತರುವ ಸಾಹಸ ಮಾಡಿದ್ದಾರೆ.

‘ಲಾಕ್’ ಎಂದು ನಾಮಕರಣ ಮಾಡಿಕೊಂಡ ಈ ಚಿತ್ರದ ಮೂಲಕ ಸ್ವಾತಂತ್ರ್ಯ ಪೂರ್ವ ಭಾರತದ ರಾಷ್ಟ್ರನಾಯಕನ ಬಗ್ಗೆ ಹಲವು ರಹಸ್ಯಗಳನ್ನು ‘ಅನ್ ಲಾಕ್’ ಮಾಡುವ ನಿಟ್ಟಿನಲ್ಲಿ ಈ ಸಿನಿಮಾ ಇನ್ನೇನು ಸದ್ಯದಲ್ಲಿಯೇ ಅನಾವರಣಗೊಳ್ಳುತ್ತಿದೆ. ಅದೇ ವೇಳೆ ಹಿರಿಯ ಪೋಷಕ ನಟ ಅವಿನಾಶ್ ರವರ ಜಬರ್ದಸ್ತ್ ಪಾತ್ರವೊಂದರ ಪ್ರಭಾವೀ ನಟನೆಯಿಂದ ಪ್ರೋತ್ಸಾಹಿತರಾದ ಸ್ವಯಂ ನಿರ್ದೇಶಕರೇ ‘ಲಾಕ್’ ಕುರಿತಾಗಿ ಅವರ ಒಂದು ಬೈಟ್ ಬಿಡುಗಡೆ ಮಾಡಿದ್ದಾರೆ.

Tags

Related Articles