ಸುದ್ದಿಗಳು

ಗೂಡು ತೊರೆದು ಗುರಿಯ ಕಡೆಗೆ ಹಾರುವ ಹಕ್ಕಿಗಳು

ಮನ ಅರಳಿಸುವ ‘ಲಾಕ್’ ಚಿತ್ರದ ಹಾಡು : ಸದ್ಯದಲ್ಲಿಯೇ ಟ್ರೈಲರ್ ಬಿಡುಗಡೆ

ಬೆಂಗಳೂರು, ನ.14: ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಎಲ್ಲರ ಗಮನ ಸೆಳೆದಿರುವ ‘ಲಾಕ್’ ಚಿತ್ರದ ವಿಡಿಯೋ ಹಾಡೊಂದು ಬಿಡುಗಡೆಯಾಗಿದೆ. ಗೂಡು ತೊರೆದು ಗುರಿಯ ಕಡೆಗೆ

ನಿರ್ದೇಶಕ ಪರಶುರಾಮ್ ಅವರೇ ಚಿತ್ರದ ಈ ಹಾಡನ್ನು ಬರೆದಿದ್ದಾರೆ. ವಿ. ರಾಘವೇಂದ್ರ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡು ಕೇಳಲು ಮಾಧುರ್ಯವಾಗಿದೆ. ಈ ಗೀತೆಗೆ ಅನನ್ಯಾ ಪ್ರಕಾಶ್ ಧ್ವನಿಯಾಗಿದ್ದಾರೆ.

ಗೂಡು ತೊರೆದು ಗುರಿಯ ಕಡೆಗೆ ಹಾರುವ ಹಕ್ಕಿಗಳು

ಗೆಳೆಕಾರರಂತೆ ನಿಂತವರಲ್ಲ ಎದುರಾ ಬದುರು

ಅರಿವು ಮರೆವು ಮರಳನ್ನು ಮುಂದಿನ ಗುರಿಯಾ ನೆನೆದು ಹೊರಟವರಲ್ಲಾ… ಎಂಬ ಸಾಲುಗಳು ಹಾಗೂ ನಾಯಕ-ನಾಯಕಿಯರ ನೋಟಗಳು ಇಷ್ಟವಾಗುತ್ತವೆ.

ಚಿತ್ರದ ಬಗ್ಗೆ

ಇಂದಿನ ಯುವ ಜನಾಂಗವು ಸಿಸ್ಟಮ್ ಅನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಮತ್ತು ನೇತಾಜಿ ಸುಭಾಸ್ ಚಂದ್ರಬೋಸ್ ಹೇಳಿದ್ದೇನು ಎಂಬುದನ್ನು ವಿವರವಾಗಿ ತಿಳಿಯಲು ಯುವಕರು ಅದನ್ನು ಸಂಶೋಧನೆ ನಡೆಸಲು ಹೋಗುತ್ತಾರೆ. ಆ ಸಮಯದಲ್ಲಿ ಅದು ‘ಲಾಕ್’ ಆಗುತ್ತದೆ. ಇನ್ನು ಕತೆಯಲ್ಲಿ ಶೇಕಡ 15 ರಷ್ಟು ನೇತಾಜಿ ಅವರ ಬೋಧನೆ ಬಳಸಲಾಗಿದ್ದು, ಉಳಿದಂತೆ ಕಮರ್ಷಿಯಲ್ ಫಾರ್ಮೆಟ್ನಲ್ಲಿ ಸಿನಿಮಾವನ್ನಾಗಿ ತರುತ್ತಿದ್ದಾರೆ ನಿರ್ದೇಶಕರು.“1940 ರಿಂದ 2018ರ ವರೆಗಿನ ಯುವ ಜನಾಂಗವು ಯಾವ ಉದ್ದೇಶಕ್ಕೆ ‘ಲಾಕ್’ ಅನ್ನು ಹುಡುಗಿಕೊಂಡು ಹೋಗುತ್ತಾರೆ. ಏತಕ್ಕಾಗಿ ‘ಲಾಕ್’ ಆಗುತ್ತಾರೆ. ಅದರ ತನಿಖೆಯಲ್ಲಿ ಯಾರಾ ಯಾರು ಸೇರಿಕೊಂಡಿರುತ್ತಾರೆ. ಅದನ್ನು ‘ಅನ್ ಲಾಕ್’ ಮಾಡೋದು ಹೇಗೆ ಎಂಬುದನ್ನು ಸದ್ಯದಲ್ಲಿಯೇ ನಿರ್ದೇಶಕ ಪರಶುರಾಮ್ ತಿಳಿಸಲಿದ್ದಾರೆ. ಇದರೊಂದಿಗೆ ಸದ್ಯದಲ್ಲಿಯೇ ಚಿತ್ರದ ಟ್ರೈಲರ್ ಕೂಡಾ ಬಿಡುಗಡೆಯಾಗಲಿದೆ.

ತಾರಾಬಳಗ

ಅಂದಹಾಗೆ ಈ ಸಿನಿಮಾದಲ್ಲಿ ನಟ ಶಶಿಕುಮಾರ್ ಸುಭಾಶ್ ಚಂದ್ರ ಬೋಸ್ ಆಗಿ ಕಾಣಿಸಿದ್ದಾರೆ. ಉಳಿದಂತೆ ಅವಿನಾಶ್, ಶರತ್ ಲೋಹಿತಾಶ್ವ, ಎಂ.ಕೆ ಮಠ, ದಿಶಾ ಪೂವಯ್ಯ, ಅಭಿಲಾಷ್, ಸೌಂದರ್ಯ ರಮೇಶ್ ಮೊದಲಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪಿ ಆರ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಲ್ಲಿ ರೋಹಿತ್, ಅಶೋಕ್ ಕುಮಾರ್, ಹಾಗೂ ಪಿ ರಾಮ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿನಯ್ ಚಂದ್ರ ಪ್ರಸನ್ನ ಛಾಯಾಗ್ರಹಣ, ವಿ ರಾಘವೇಂದ್ರ ಸಂಗೀತ, ಗೌತಮ್ ನಾಯಕ್ ಸಂಕಲನವಿದ್ದು, ಪರಶುರಾಮ್ ನಿರ್ದೇಶನ ಮಾಡಿದ್ದಾರೆ.

Tags

Related Articles