ಸುದ್ದಿಗಳು

‘ಲಾಕ್’ ಹಿಂದಿರುವ ರಹಸ್ಯ ಓಪನ್ ಆಗುತ್ತಿದೆ..! ಹುಷಾರು..

ಎಲ್ಲರನ್ನೂ 'ಲಾಕ್' ಮಾಡಿದ ನಿರ್ದೇಶಕ

ಬೆಂಗಳೂರು, ಅ.26: ಪೋಸ್ಟರ್ ನಲ್ಲಿ ಹಳೆಯ ಕಾಲದ ಬೀಗದ ಚಿತ್ರವಿದೆ. ಅದರ ಕೆಳಗೆ ಕೀಗಳ ಗೊಂಚಲು ನೇತಾಡುತ್ತಿದೆ. ಇನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರಣವೂ ಕಂಡು ಬರುತ್ತಿದೆ. ಹಾಗಿದ್ದರೆ ಇದರ ಹಿಂದಿರುವ ನಿಜವಾದ ಕಥೆಯೇನು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ

ಈ ಚಿತ್ರದ ಟೀಸರ್ ನೋಡಿದಾಗ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೆಂದು ಮೇಲ್ನೋಟಕ್ಕೆ ಅನಿಸುತ್ತದೆ. ದಿನಾಂಕ 29 , ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಟ್ರೈಲರ್ ನೋಡಿದ ಮೇಲೆ ನಿರ್ದೇಶಕರು ಸದ್ಯ ಮೂಡಿಸಿರುವ ಕುತೂಹಲಕ್ಕೆ ‘ಕೀಲಿ ಕೈ’ ನಮಗೆ ಕೊಡಬಹುದಾ….?? ಕಾದು ನೋಡಬೇಕಾಗಿದೆ.

ಕಾಲದೊಂದಿಗಿರುವ ಮರ್ಮ

“ಕನಸಲ್ಲ ಇದು ಕರ್ಮ.. ಕಾಲದೊಂದಿಗಿರುವ ಮರ್ಮ.. ಭೂತಕಾಲದಿಂದ ಭವಿಷ್ಯತ್ ಕಾಲದವರೆಗೂ ಕರೆದುಕೊಂಡು ಹೋಗುವ ಬದುಕಿಕೊಂದು ಭದ್ರತೆ, ಸಂಸ್ಕೃತಿ, ಶಾಂತಿ, ಶೌರ್ಯ ಸಾರ್ವಭೌಮತ್ಯವನ್ನು ಸ್ಥಾಪಿಸಿದ ಸಾಮ್ರಾಜ್ಯವೊಂದಕ್ಕೆ…….” ಎಂದು ನಟ ಅವಿನಾಶ್  ಹೇಳುತ್ತಾರೆ. ಇಲ್ಲಿ ಅವರದು ವಿಭಿನ್ನ ಗೆಟಪ್. ಅದು ಯಾವ ರೀತಿಯಲ್ಲಿ ವಿಭಿನ್ನವಾಗಲಿದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಲೇ ಬೇಕು.

ತಾರಾಬಳಗ

‘ಹಳೆ ಬೇರು ಹೊಸ ಚಿಗುರು’ ಎಂಬಂತೆ ಈ ಚಿತ್ರದಲ್ಲಿ ಹಿರಿಯ ಕಲಾವಿದರೊಂದಿಗೆ ಹೊಸ ಪ್ರತಿಭಾವಂತ ನಟರನ್ನೂ ನೋಡಬಹುದು. ಶಶಿಕುಮಾರ್, ಅವಿನಾಶ್, ಶರತ್ ಲೋಹಿತಾಶ್ವ, ಎಂ ಕೆ ಮಠ, ದಿಶಾ ಪೂವಯ್ಯ, ರಾಕ್ ಸತೀಶ್, ಅಭಿಲಾಶ್, ಸೌಂದರ್ಯ, ರಾಜ್ ಹಿರೇಮಠ್ ಸೇರಿದಂತೆ ಅನೇಕರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗ

ಪಿ ಆರ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಲ್ಲಿ ರೋಹಿತ್, ಅಶೋಕ್ ಕುಮಾರ್, ಹಾಗೂ ಪಿ ರಾಮ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿನಯ್ ಚಂದ್ರ ಪ್ರಸನ್ನ ಛಾಯಾಗ್ರಹಣ, ವಿ ರಾಘವೇಂದ್ರ ಸಂಗೀತ, ಗೌತಮ್ ನಾಯಕ್ ಸಂಕಲನವಿದ್ದು, ಪರಶುರಾಮ್ ನಿರ್ದೇಶನ ಮಾಡಿದ್ದಾರೆ.

 

Tags

Related Articles