ಸುದ್ದಿಗಳು

ಲೋಕಸಭಾ ಚುನಾವಣೆ: ನಿಖಿಲ್ ಗೆ ಮಾತ್ರವಲ್ಲ, ಹರಿಪ್ರಿಯಾ, ಉಪೇಂದ್ರರ ಚಿತ್ರಕ್ಕೂ ಸಮಸ್ಯೆ

ಚುನಾವಣೆ ನೀತಿ ಸಂಹಿತಿಯ ಮೇಲೆ ಚಿತ್ರಗಳ ಬಿಡುಗಡೆ ಮುಂದಕ್ಕೆ

ಬೆಂಗಳೂರು.ಮಾ.15

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಈಗಾಗಲೇ ಚುನಾವಣೆಯ ದಿನಾಂಕ ಸಹ ಘೋಷಣೆಯಾಗಿದ್ದು, ‘ಚುನಾವಣೆ ನೀತಿ ಸಂಹಿತಿ’ಯೂ ಸಹ ಜಾರಿಗೆ ಬಂದಿದೆ. ಹೀಗಾಗಿ ನಿಖಿಲ್, ಹರಿಪ್ರಿಯಾ, ಉಪೇಂದ್ರರ ಸಿನಿಮಾಗಳಿಗೆ ಸಮಸ್ಯೆಯಾಗಿದೆ.

ಹೌದು, ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ಮತ್ತು ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಸಿನಿಮಾಗಳ ಪ್ರಚಾರ ಮಾಡುವಂತಿಲ್ಲ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಾಗಿರುವ ನಿಖಿಲ್ ಕುಮಾರ್ ಮತ್ತು ಸುಮಲತಾ ಅಭಿನಯದ ಯಾವ ಚಿತ್ರಗಳು ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ.

Related image

ದರ್ಶನ್ ಹಾಗೂ ನಿಖಿಲ್ ನಟನೆಯ ‘ಕುರುಕ್ಷೇತ್ರ’ ಮುಂದಿನ ತಿಂಗಳ ಏಪ್ರಿಲ್ 5ಕ್ಕೆ ತೆರೆಗೆ ತರುವ ತಯಾರಿಯಲ್ಲಿತ್ತು. ಆದರೆ ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಚಿತ್ರದ ಬಿಡುಗಡೆಗೆ ಬಿಡುಗಡೆಗೆ ಬ್ರೇಕ್ ಬಿದ್ದಿದೆ.

Image result for d/o parvathamma

ಅದೇ ರೀತಿ ಸುಮಲತಾ ಮತ್ತು ಹರಿಪ್ರಿಯಾ ನಟಿಸಿರುವ ‘ಡಾಟರ್ ಆಫ್ ಪಾರ್ವತಮ್ಮ’ ಹಾಗೂ ‘ಐ ಲವ್ ಯೂ’ ಚಿತ್ರಗಳಿಗೂ ಸಹ ಚುನಾವಣೆ ನೀತಿ ಸಂಹಿತಿಯ ಎದುರಾಗಿದೆ. ಏಕೆಂದರೆ, ಸುಮಲತಾ ಅಂಬರೀಶ್ ಮಂಡ್ಯದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸೂಚನೆ ಸಿಕ್ಕಿದೆ.

Image result for upendra i love you

ಹಾಗೆಯೇ ಉಪೇಂದ್ರ ಸಹ ‘ಪ್ರಜಾಕೀಯ’ ಪಕ್ಷದ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುವ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ‘ಐ ಲವ್ ಯೂ’ ಹಾಗೂ ಹೋ‍ಮ್ ಮಿನಿಸ್ಟರ್’ ಚಿತ್ರಗಳು ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ಇನ್ನು ಚುನಾವಣೆಯ ಫಲಿತಾಂಶ ಹೊರಬೀಳುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಲ್ಲಿಯವರೆಗೂ ಈ ಎಲ್ಲಾ ಚಿತ್ರಗಳು ತೆರೆಗೆ ಬರುವುದು ಕಷ್ಟವೆಂದೇ ಹೇಳಬಹುದು. ಈಗಾಗಲೇ ‘ಕುರುಕ್ಷೇತ್ರ’ ಸಿನಿಮಾ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವುದರಿಂದ ಬೇಗನೇ ಬಿಡುಗಡೆಯಾದರೆ ಒಳ್ಳೆಯದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ನಿನ್ನೊಲುಮೆಯಿಂದಲೇ ಜೋಗುಳ ಹಾಡಿದ ಲವಲವಿಕೆಯ ಕಿನ್ನರಿ…!

#lokasabhaelection, #filmnews, #released, #balkaninews #kannadasuddigalu, #upendra, #nikhilkumar, #haripriya #darshan, #kurukshetra, #iloveyou, #d/oparvathamma

Tags

Related Articles