ಸುದ್ದಿಗಳು

ಕನ್ನಡದ ಹಿರಿಯ ನಟ ಲೋಕೇಶ್ ರ ಜನ್ಮದಿನ

ಬೆಂಗಳೂರು.ಮೇ.19: ಅಪ್ಪಟ ಕನ್ನಡ ನೆಲದ ಹೀರೋ ಎಂದು ಪ್ರೀತಿಯಿಂದ ಕರೆಸಿಕೊಂಡವರು ಲೋಕೇಶ್, ಇಂದು ಇವರ ಜನ್ಮದಿನ.. ಇವರು ಸ್ಯಾಂಡಲ್ ವುಡ್ ನ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಹಾಗೆಯೇ ಬರೀ ನಾಯಕ ನಟರಾಗಿ ಮಾತ್ರವಲ್ಲದೆ, ಅನೇಕ ಚಿತ್ರಗಳಲ್ಲಿಯೂ ಪೋಷಕ ನಟರಾಗಿ ಅಭಿನಯಿಸಿದ್ದಾರೆ.

ಅಂದ ಹಾಗೆ ಲೋಕೇಶ್ ಅವರು ಪ್ರಸಿದ್ದ ರಂಗ ಕಲಾವಿದರಾಗಿದ್ದ ಹಾಗೂ ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕನಟ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಮಗ. ಇವರು ನಟಿಸಿದ ಚಿತ್ರಗಳಾದ ‘ಪರಸಂಗದ ಗೆಂಡೆತಿಮ್ಮ’, ‘ಭೂತಯ್ಯನ ಮಗ ಅಯ್ಯು’ ‘ಕಾಕನಕೋಟೆ’ ಸೇರಿದಂತೆ ಅನೇಕ ಚಿತ್ರಗಳು ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದವು.

ಇನ್ನು ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್, ಮಗಳು ಪೂಜಾ ಲೋಕೇಶ್ ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಅಲ್ಲದೆ ಕನ್ನಡದ ಅನೇಕ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಶ್ರೇಷ್ಠ ಎನ್ನುವಂತಹ ಅಭಿನಯ ನೀಡಿದ ಮಹಾನ್ ಕಲಾವಿದರಾಗಿದ್ದಾರೆ.

ಸುಬ್ಬಯ್ಯನಾಯ್ಡು ಅವರ ಇಡೀ ಕುಟುಂಬ ಕಲಾರಂಗದಲ್ಲಿ ಸೇವೆ ಸಲ್ಲಿಸುತ್ತಿದೆ. 2004ರಲ್ಲಿ ಲೋಕೇಶ್ ನಿಧನರಾದ ನಂತರ ಪ್ರತಿ ವರ್ಷ ಬೇರೆ ಬೇರೆ ನಗರಗಳಲ್ಲಿ ‘ಲೋಕೇಶ್ ನೆನಪು’ ಕಾರ್ಯಕ್ರಮ ಹಮ್ಮಿಕೊಂಡು ವೃತ್ತಿರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸುಬ್ಬಯ್ಯನಾಯ್ಡು ಹೆಸರಲ್ಲಿ, ಅವರ ತಾರಾಪತ್ನಿ ಲಕ್ಷ್ಮೀಬಾಯಿ ಸೇರಿನಲ್ಲಿ ಹಿರಿಯ ಕಲಾವಿದರೊಬ್ಬರಿಗೆ ಹಾಗೂ ಲೋಕೇಶ್ ಹೆಸರಲ್ಲಿ ರಂಗಭೂಮಿ ಮತ್ತು ಚಲನಚಿತ್ರ ರಂಗದ ಸಾಧಕರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬರಲಾಗುತ್ತಿದೆ.

ಈ ಬಾರಿ 16ನೇ ವರ್ಷದ ಲೋಕೇಶ್ ನೆನಪು ಕಾರ್ಯಕ್ರಮ ಮೈಸೂರಿನ ನಟನ ರಂಗಶಾಲೆಯಲ್ಲಿ ಮೇ 19ರಂದು ಸಂಜೆ 5ಗಂಟೆಗೆ ನಡೆಯಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ.ಕಪ್ಪಣ್ಣ ಸಮಾರಂಭದ ಅಧ್ಯಕ್ಷತೆವಹಿಸಲಿದ್ದಾರೆ.

ಈ ಬಾರಿ ಹಿರಿಯ ರಂಗತಜ್ಞ, ವೃತ್ತಿ ರಂಗಭೂಮಿಯ ಚಿಂದೋಡಿ ಬಂಗಾರೇಶ್ ಅವರಿಗೆ ಸುಬ್ಬಯ್ಯನಾಯ್ಡು ಪ್ರಶಸ್ತಿ, ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಶೈಲಶ್ರೀ ಅವರಿಗೆ ಲಕ್ಷ್ಮೀಬಾಯಿ ಪ್ರಶಸ್ತಿ ಹಾಗೂ ರಂಗಕರ್ಮಿ, ಚಿತ್ರನಟ ರಮೇಶ್ ಭಟ್ ಅವರಿಗೆ ಲೋಕೇಶ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಹೀಗಿರಲಿ ನಿಮ್ಮ ಮುಖ ತೊಳೆಯುವ ಕ್ರಮ

#lokesh, #birthday, #news, #balkaninews #filmnews, #kannadasuddigalu, #rameshbhat, #lokeshnenapu

Tags