ಸುದ್ದಿಗಳು

‘ಲಂಡನ್ ನಲ್ಲಿ ಲಂಬೋದರ’ ನಿಗೆ ರಿಷಬ್ ಸಾಥ್

ಬೆಂಗಳೂರು, ಮಾ.16:

‘ಲಂಡನ್ ನಲ್ಲಿ ಲಂಬೋದರ’ ಸಿನಿಮಾ ಹಲವಾರು ವಿಶೇಷತೆಗಳಿಂದ ಕೂಡಿದೆ ಅನ್ನೋದು ಚಿತ್ರತಂಡದ ಮಾತು. ಸದ್ಯ ಶೃತಿ ಪ್ರಕಾಶ್ ಅಭಿನಯದ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಗೆ ರೆಡಿಯಾಗಿದೆ. ಇದೀಗ ಈ ಸಿನಿಮಾಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ‌.

ಟ್ರೇಲರ್ ಲಾಂಚ್ ಮಾಡಲಿದ್ದಾರೆ ರಿಷಬ್

ಲಂಡನ್ ಗೆ ತೆರಳುವ ನಾಯಕ ಲಂಬೋದರ ತನ್ನೆಲ್ಲ ಸಂಕಷ್ಟಗಳನ್ನು ಅಲ್ಲಿ ಹೇಗೆ ಎದುರಿಸಿ ನಿಲ್ಲುತ್ತಾನೆ ಎಂಬುದೇ ಚಿತ್ರದ ಒಂದು ಎಳೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾವಾಗಿದೆಯಂತೆ. ಚಿಕ್ಕ ಮನೆಯೊಂದರಲ್ಲಿ ಶುರುವಾಗುವ ಈ ಚಿತ್ರದ ಕಥೆ, ಕೊನೆಗೆ ಲಂಡನ್‌ ಗೆ ಹೋಗಿ ನಿಲ್ಲುತ್ತದೆ. ಆಮೇಲೆ ಏನೆಲ್ಲಾ ಆಗುತ್ತದೆ ಎಂಬುದೇ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ.

18ರಂದು ಆಡಿಯೋ ಹಾಗೂ ಟ್ರೇಲರ್

ಇನ್ನೂ ಈ ಸಿನಿಮಾ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಇದೇ ತಿಂಗಳ 18ಕ್ಕೆ ನಡೆಯಲಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾ ಆಡಿಯೋ ಹಾಗೂ ಟ್ರೇಲರ್ ಲಾಂಚ್ ಮಾಡಲಿದ್ದಾರೆ. ನವ ಪ್ರತಿಭೆ ಸಂತೋಷ್ ಚಿತ್ರದಲ್ಲಿ ಶೃತಿಯೊಂದಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು  ರಾಜ್ ಸೂರ್ಯ ನಿರ್ದೇಶಿಸುತ್ತಿದ್ದು, ಉಳಿದಂತೆ ಹೊಸಬರದ್ದೇ ತಾರಾಗಣ ಚಿತ್ರದಲ್ಲಿದೆ.

“ನಿಮ್ಮ ಜೀವನವನ್ನು ಪ್ರಪಂಚಕ್ಕೆ ಸಾಬೀತುಪಡಿಸುವುದರಲ್ಲಿ ಸಮಯ ಕಳೆಯ ಬೇಡಿ”!!

#rishabshetty #balkaninews #sandalwood #londonnallilambodarakannadamovie #shruthiprakash #trailerlaunched

Tags