ಸುದ್ದಿಗಳು

‘ಲೌಡ್ ಸ್ಪೀಕರ್’ ಚಿತ್ರತಂಡಕ್ಕೆ ಶುಭ ಹಾರೈಸಿದ ರೋರಿಂಗ್ ಸ್ಟಾರ್ ಶ್ರೀ ಮುರುಳಿ

ಈಗಾಗಲೇ ಚಿತ್ರವು ತನ್ನ ವಿಭಿನ್ನ ಪೋಸ್ಟರ್, ಟ್ರೈಲರ್ ಹಾಗೂ ಪ್ರಮೋಶನಲ್ ಸಾಂಗ್ ಮೂಲಕ ಗಮನ ಸೆಳೆಯುತ್ತಿದೆ.

ಅಗಸ್ಟ್ 10 ರಂದು ಬಿಡುಗಡೆಗೆ ತಯಾರಿ ನಡೆಸಿರುವ ‘ಲೌಡ್ ಸ್ಪೀಕರ್’ ಚಿತ್ರವು ಈಗಾಗಲೇ ಒಂದು ಮಟ್ಟದ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಈಗಾಗಲೇ ಚಿತ್ರವು ತನ್ನ ವಿಭಿನ್ನ ಪೋಸ್ಟರ್, ಟ್ರೈಲರ್ ಹಾಗೂ ಪ್ರಮೋಶನಲ್ ಸಾಂಗ್ ಮೂಲಕ ಗಮನ ಸೆಳೆಯುತ್ತಿದೆ.

ಬೆಂಗಳೂರು, ಜು. 26: ಲೌಡ್ ಸ್ಪೀಕರ್.. ಈಗಾಗಲೇ ನಿರೀಕ್ಷೆಯನ್ನುಂಟು ಹಾಕಿರುವ ಸಿನಿಮಾ. ಜೊತೆಗೆ ಚಿತ್ರದ ಪೋಸ್ಟರ್ ನಲ್ಲಿ ಇದು ಪ್ರಪಂಚದ ಭಯಾನಕ ಆಟವೆಂದು ಮುದ್ರಿಸಲಾಗಿದ್ದು, , ಅದು ಏನು ಎಂದು ತಿಳಿಯಲು ಅಗಸ್ಟ್ 10 ರ ವರೆಗೂ ಕಾಯಬೇಕಾಗುತ್ತದೆ.

ವೆರಿ ಗುಡ್ ಟ್ರೈಲರ್ ಕಣ್ರೀ..

ಉಗ್ರಂ, ಮಫ್ತಿ ಸಿನಿಮಾಗಳ ಖ್ಯಾತ ನಟ ಶ್ರೀ ಮುರುಳಿಯವರು ಲೌಡ್ ಸ್ಪೀಕರ್ ಚಿತ್ರದ ಪೋಸ್ಟರ್, ಟ್ರೈಲರ್ ಮತ್ತು ಪ್ರಮೋಶನಲ್ ಸಾಂಗ್ ಅನ್ನು, ಮೆಚ್ಚಿಕೊಂಡಿದ್ದು, ಸಖತ್ ಆಗಿ ಮೂಡಿ ಬಂದಿದ್ದನ್ನು ಮೆಚ್ಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಒಂದು ಹೊಸ ಟೀಮ್, ಹೊಸ ಪ್ರಯತ್ನದಲ್ಲಿ ಹೊಸ ಸ್ಟೈಲ್ ನೊಂದಿಗೆ ಜೊತೆಗೆ ಪರ್ಮಾಮೆನ್ಸ್ ಮತ್ತು ಕ್ವಾಲಿಟಿ ವೈಸ್, ಸೇರಿದಂತೆ ಮೂಡಿ ಬಂದಿರುವ ಈ ಚಿತ್ರದ ಟ್ರೈಲರ್ ನೋಡಿದಾಗ ಬಹಳ ಖುಷಿಯಾಗುತ್ತೆ. ತುಂಬಾ ಕಾಮಿಕ್ ಇದೆ, ಹ್ಯೂಮರ್ ಇದೆ, ಎಲ್ಲೋ ಒಂದು ಕಡೆ ಸೀರಿಯಸ್ ನೆಸ್ ಇದೆ. ಲೌಡ್ ಸ್ಪೀಕರ್ ಎಂದ ಕೂಡಲೇ ಒಂದು ಫ್ಲ್ಯಾಶ್ ಆಗುತ್ತೆ. ಜೊತೆಗೆ ಚಿತ್ರದಲ್ಲಿರುವ ಡಾರ್ಕ್ ಕಾಮಿಡಿ ನೋಡುಗರಿಗೆ ಖಂಡಿತ ಇಷ್ಟವಾಗುತ್ತೆ. ಎಲ್ಲಿಗೂ ಖಂಡಿತ ಇಷ್ಟವಾಗುತ್ತದೆ’ ಎಂದು ಚಿತ್ರದ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನು ಹೇಳಿ ಶುಭ ಹಾರೈಸಿದ್ದಾರೆ.

ಡಾರ್ಕ್ ಕಾಮಿಡಿ ಚಿತ್ರ

ಲೌಡ್ ಸ್ಪೀಕರ್ ಸಿನಿಮಾಗೆ ಹೀರೋ- ಹಿರೋಯಿನ್ ಅಂತಾ ಯಾರೂ ಇಲ್ಲ. ಈ ಸಿನಿಮಾಗೆ ಕಥೆಯೇ ಹೀರೋ. ಲೌಡ್ ಸ್ಪೀಕರ್ ನಲ್ಲಿ ಇಂದಿನ ಯುವಜನತೆ ಅನುಭವಿಸುತ್ತಿರೋ ತೊಳಲಾಟಗಳನ್ನು ಹೇಳುವ ಕಥೆ ಇದೆಯನ್ನು ಒಳಗೊಂಡಿದೆ. ಮತ್ತು ಚಿತ್ರದ ಕಥೆ ಏಳು ಪಾತ್ರಧಾರಿಗಳ ಸುತ್ತ ಸುತ್ತುತ್ತದೆ. ಒಂದೊಳ್ಳೆ ಸಂದೇಶವನ್ನು ಕಾಮಿಡಿಯೊಂದಿಗೆ ಜನರ ಮುಂದಿಡುತ್ತಿದ್ದಾರೆ ನಿರ್ದೇಶಕರು.

ಧೈರ್ಯಂ ನಿರ್ಮಾಪಕರು

ಹೌದು, ಕಳೆದ ವರ್ಷ ‘ಧೈರ್ಯಂ’ ಚಿತ್ರವನ್ನು ಮಾಡಿದ್ದ ನಿರ್ಮಾಪಕರಾದ ಡಾ. ಕೆ. ರಾಜು ಅವರೇ ಈ ಲೌಡ್ ಸ್ಪೀಕರ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶಿವ ತೇಜಸ್ ನಿರ್ದೇಶನ ಮಾಡಿದ್ದಾರೆ. ‘ರಾಜ್ ಬ್ಯಾನರ್ ಅಡಿಯಲ್ಲಿ ‘ಲೌಡ್ ಸ್ಪೀಕರ್’ ಚಿತ್ರವು ಮೂಡಿ ಬಂದಿದೆ. ಈ ಚಿತ್ರವು ಅಗಸ್ಟ್ ತಿಂಗಳ 10 ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ದತೆ ನಡೆಸಿದೆ.

ತಾರಾಬಳಗ

ನಾಟಕ ಮತ್ತು ಕಿರುತೆರೆಗಳಲ್ಲಿ ಕಲಿತು ಬಂದಿರುವ ಭಾಸ್ಕರ್ ನೀನಾಸಂ, ಸುಮಂತ್ ಭಟ್, ಅಭಿಷೇಕ್ ಹಾಗೂ ಕಾರ್ತಿಕ್ ರಾವ್ ಲೌಡ್ ಸ್ಪೀಕರ್ ನಿಂದ ಬೆಳ್ಳಿತೆರೆಗೆ ಲಾಂಚ್ ಆಗುತ್ತಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ಸಂಗೀತ ನೀಡಿದ್ದು, ಕಿರಣ್ ಹಂಪಾಪುರ ಅವರ ಕ್ಯಾಮೆರಾ ವರ್ಕ್ ಇರಲಿದೆ.

ಈ ಚಿತ್ರವು ಹಲವಾರು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ತೆರೆ ಕಂಡ ಮೇಲೆ ಯಾವ ರೀತಿಯಲ್ಲಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

 

 

Tags