ಸುದ್ದಿಗಳು

ಈ ರಾತ್ರಿ ‘ಲವ್ ರಾತ್ರಿ’ ಹಾಡನ್ನು ಕೇಳಿ

ಈಗಾಗಲೇ ನಿರೀಕ್ಷೆ ಹುಟ್ಟಿಸಿರುವ ‘ಲವ್ ರಾತ್ರಿ’ ಸಿನಿಮಾ

ಈಗಾಗಲೇ ಸಾಕಷ್ಟು ವಿವಾದಗಳನ್ನು ಎಳೆದುಕೊಂಡಿರುವ ‘ಲವ್ ರಾತ್ರಿ’ ಚಿತ್ರವು ಇದೀಗ ಚಿತ್ರದ ಹಾಡನ್ನು ಬಿಡುಗಡೆ ಮಾಡುತ್ತಿದೆ.

ಮುಂಬೈ. ಆ. 23: ‘ಲವ್ ರಾತ್ರಿ’ … ಈಗಾಗಲೇ ಸಾಕಷ್ಟು ವಿವಾದಗಳನ್ನ ಎಳೆದುಕೊಂಡಿರುವ ಸಿನಿಮಾ. ಈ ಚಿತ್ರದ ಬಿಡುಗಡೆಗೆ ನಿಷೇಧ ಹೇರುವಂತೆ ಹಲವಾರು ಸಂಘ ಸಂಸ್ಥೆಗಳು ಒತ್ತಾಯ ಮಾಡಿರುವ ವಿಷಯ ಎಲ್ಲರಿಗೂ ತಿಳಿದೆ. ಆದರೂ ಸಹ ಈ ಸಿನಿಮಾ ತಂಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಚಿತ್ರೀಕರಣ ಮುಂದುವರೆಸಿದೆ. ಈಗ ಈ ಚಿತ್ರದ ಹಾಡೊಂದು ಇಂದು ಬಿಡುಗಡೆಯಾಗಲಿದೆ.

ಲವ್ ರಾತ್ರಿ

ನಟ ಸಲ್ಮಾನ್ ನಿರ್ಮಿಸುತ್ತಿರುವ ಸಿನಿಮಾ ಈ ‘ಲವ್ ರಾತ್ರಿ’. ಪ್ರತಿ ಈದ್ ಹಬ್ಬಕ್ಕೂ ಪ್ರೇಕ್ಷಕರಿಗೆ ಏನಾದರೂ ಕೊಡುವ ಅವರು ಈ ಬಾರಿ ತಮ್ಮ ಚಿತ್ರದ ಹಾಡನ್ನು ನೀಡುತ್ತಿದ್ದಾರೆ.

ಅಖ್ ಲಡ್ ಜಾವೇ

‘ಅಖ್ ಲಡ್ ಜಾವೇ ‘ ಅನ್ನುವ ಹಾಡನ್ನು ಇವತ್ತು ಬಿಡುಗಡೆ ಮಾಡುವುದಾಗಿ ಖುದ್ದು ಸಲ್ಮಾನ್ ಹೇಳಿದ್ದಾರೆ. ಇನ್ನು ಈ ಚಿತ್ರದಲ್ಲಿ ಅವರ ಬಾಮೈದ ಆಯುಶ್ ಶರ್ಮಾ ಹಾಗೂ ಹೊಸ ಪ್ರತಿಭೆ ವಾರಿನಾ ಹುಸೇನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಟ್ವಿಟರ್ ನಲ್ಲಿ ವಿಡಿಯೋ

ಇನ್ನು ಸಲ್ಮಾನ್ ಅವರು ಟ್ವಿಟರ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ತಮ್ಮ ಅಭಿಮಾನಿಗಳಿಗೆ ಈದ್ ನ ಶುಭಾಶಯ ತಿಳಿಸುತ್ತಾ, ಇಂದು ‘ಲವ್ ರಾತ್ರಿ’ ಚಿತ್ರದ ‘ಅಖ್ ಲಡ್ ಜಾವೇ’ ಹಾಡನ್ನು ಈ ಬಾರಿಯ ಈದ್ ಗೆ ಗಿಫ್ಟ್ ನೀಡುತ್ತಿರುವುದಾಗಿ ಹೇಳಿದ್ದಾರೆ.

Tags

Related Articles