ಸುದ್ದಿಗಳು

ಲವ್ವರ್ ಬಾಯ್ ಇದೀಗ ‘ಶಿವಾಜಿ ಸೂರತ್ಕಲ್’ ನಲ್ಲಿ ದಾಡಿ ಬಾಯ್..!

ಡಿಫ್ರೆಂಟ್ ಗೆಟಪ್ ನಲ್ಲಿ ಅಭಿಮಾನಿಗಳಿಗೆ ಥ್ರಿಲ್ ಕೊಡಲು ಬರ್ತಿದ್ದಾರೆ ರಮೇಶ್ ಅರವಿಂದ್..!

ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ರಮೇಶ್ ಅರವಿಂದ್ ಇದೀಗ ಕೊಂಚ ಡಿಫ್ರೆಂಟ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಈ ಹಿಂದೆ ಯಾವ ಸಿನಿಮಾದಲ್ಲೂ ಮಾಡದ ಪಾತ್ರವನ್ನ ‘ಶಿವಾಜಿ ಸೂರತ್ಕಲ್’ ನಲ್ಲಿ ನಿರ್ವಹಿಸಿದ್ದಾರೆ.

ಇಷ್ಟು ದಿನ ಸ್ಮಾರ್ಟ್ ಬಾಯ್ ಅವತಾರದಲ್ಲೇ ಎಲ್ಲರನ್ನು ಮರುಳು ಮಾಡಿದ್ದ ರಮೇಶ್ ಅರವಿಂದ್ ಈಗ ದಾಡಿ‌ ಬಿಟ್ಟು ಇನ್ವೆಸ್ಟಿಗೇಟರ್ ಅವತಾರದಲ್ಲಿ ಎಲ್ಲರಿಗೂ ದರ್ಶನ ನೀಡಲು ರೆಡಿಯಾಗಿದ್ದಾರೆ. ಶುವರಾತ್ರಿಯ ಹಬ್ಬದಂದು ಇದೇ 21 ರಂದು’ಶಿವಾಜಿ ಸೂರತ್ಕಲ್’ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಈಗಾಗಲೇ ‘ಶಿವಾಜಿ ಸೂರತ್ಕಲ್’ಸಿನಿಮಾ ಪೋಸ್ಟರ್, ಟ್ರೇಲರ್ ನಿಂದ ಸಖತ್ ಸದ್ದು ಮಾಡಿದೆ. ಟ್ರೇಲರ್ ನಲ್ಲಿ ರಮೇಶ್ ಅರವಿಂದ್ ಗೆಟಪ್ ನೋಡಿ, ಡಿಟೆಕ್ಟಿವ್‌ ಪಾತ್ರದಲ್ಲಿ ರಹಸ್ಯ ಭೇದಿಸುವ ಪರಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಟ್ರೇಲರ್ ಇಷ್ಟು ಮಟ್ಟಿಗೆ ಸಸ್ಪೆನ್ಸ್ ಆಗಿರ್ಬೇಕಾದ್ರೆ ಸಿನಿಮಾ ಇನ್ನೆಗೆ ಇರಬೇಡ ಎಂಬ ಟಾಕ್ ಗಳು ಶುರುವಾಗಿವೆ.

ಮಾಹಿತಿ ಕಲೆ ಹಾಕುವಾಗ ಎದುರಾಗುವ ಸವಾಲಿಗಳಿಂದ ಶಿವಾಜಿ ಹೊರ ಬರ್ತಾರಾ, ಅಪರಾಧಿಗಳನ್ನ ಭೇದಿಸ್ತಾರಾ ಎಂಬೆಲ್ಲಾ ಪ್ರಶ್ನೆಗಳು ಪ್ರೇಕ್ಷಕರ ತಲೆಹೊಕ್ಕು ಸಿನಿಮಾಗಾಗಿ ಕಾಯುತ್ತಿದ್ದಾರೆ. ಪ್ರೇಕ್ಷಕರ ಈ ಕಾತುರಕ್ಕೆ ಚಿತ್ರತಂಡ ಕೂಡ ಸಪೋರ್ಟ್ ಮಾಡಿದ್ದು ಇದೇ 21 ರಂದು ಸಿನಿಮಾವನ್ನ ತೆರೆಗೆ ತರಲು ನಿರ್ಧರಿಸಿದೆ.


ರಣಗಿರಿ ರಹಸ್ಯವನ್ನ ರಮೇಶ್ ಹೇಗೆ ಭೇಟೆ ಆಡ್ತಾರೆ ಅನ್ನೋದು ಸಿನಿಮಾದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ನಂಬಿಕೆ ಈಗಾಗಲೇ ಎಲ್ಲರಲ್ಲೂ ಹುಟ್ಟಿದೆ. ರಮೇಶ್ ಅರವಿಂದ್ ಎರೆಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದು, ರಾಧಿಕಾ ನಾರಾಯಣ್, ಆರೋಹಿ, ಅವಿನಾಶ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ರೇಖಾ ಕೆ. ಎನ್. ಹಾಗೂ ಅನೂಪ್ ಗೌಡ ನಿರ್ಮಾಣ ಮಾಡಿದ್ದಾರೆ.

ಮುರಳಿ, ಆಶಿಕಾ ‘ಆಶಿಕಿ’

#balkaninewskannada #ramesharvind #shivajisuratkal #radhikanarayana #anupgowda #arohi #avinash #anjanadricinicreation

Tags