ವೈರಲ್ ನ್ಯೂಸ್ಸುದ್ದಿಗಳು

ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಎಂದ ಪ್ರೇಮಿಗಳು: ವಿಡಿಯೋ ವೈರಲ್

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕ್ಕಿನ ಜೀವಿತಾ ಮತ್ತು ರಾಕೇಶ್ ಎಂಬ ಪ್ರೇಮಿಗಳು ಸೆಲ್ಪೀ ವಿಡಿಯೋವೊಂದನ್ನು ಮಾಡಿದ್ದು, ಇದರಲ್ಲಿ ‘ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಜೀವಿತಾ ಹಾಗೂ ರಾಕೇಶ್ ಪರಸ್ಪರ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಅತ್ತೆಯ ಮಗನ ಜೊತೆ ಮದುವೆ ಮಾಡುತ್ತಾರೆ ಎಂದು ಜೀವಿತಾ ತನ್ನ ಪ್ರೇಮಿ ರಾಕೇಶ್ ಜೊತೆ ಮನೆ ಬಿಟ್ಟು ಓಡಿ ಹೋದರು. ಬಳಿಕ ಪೋಷಕರನ್ನು ವಿರೋಧಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.

ಈ ವಿಡಿಯೋದಲ್ಲಿ ಜೀವಿತಾ ಇದೀಗ ತಾನು ಲಾರಿ ಡ್ರೈವರ್ ರಾಕೇಶ್ ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದಾಗ ಯಾವ ರೀತಿ ಮನೆಯವರು ಪ್ರತಿಕ್ರಿಯಿಸಿದರು ಎಂಬುದನ್ನು ಈ ವಿಡಿಯೋ ಮೂಲಕ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಚನ್ನರಾಯಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಹದ ನೀರಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಜಾರಿ ಬಿದ್ದ ಪ್ರವಾಸಿಗ: ವಿಡಿಯೋ ವೈಲರ್

#lovers #loversSelfyVideo  #KannadaSuddigalu,

Tags