ಸುದ್ದಿಗಳು

‘ಲವ್ ಯಾತ್ರಿ’ ಚಿತ್ರಕ್ಕೆ ಸುಪ್ರೀಂ ಕೋರ್ಟಿನಿಂದ ಸಿಕ್ತು ಗ್ರೀನ್ ಸಿಗ್ನಲ್..

ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಮೂರ್ತಿಗಳ ಪೀಠ

ಮುಂಬೈ,ಸೆ.27: ಸಲ್ಮಾನ್ ಖಾನ್ ‘ಲವ್ ರಾತ್ರಿ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ಬಾವ ಆಯುಷ್ ಶರ್ಮಾ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ. ಹಿಂದುಗಳ ಪಾಲಿಗೆ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ ಕೂಡ ಒಂದು. ಇಡೀ ಚಿತ್ರದ ಕಥೆ ನವರಾತ್ರಿಯಲ್ಲೇ ಸಾಗಲಿದೆಯಂತೆ. ಇನ್ನು ಚಿತ್ರದಲ್ಲಿ ಸುಂದರ ಪ್ರೇಮ ಕಥೆ ಕೂಡ ಇರುವುದರಿಂದ ‘ಲವ್ ರಾತ್ರಿ’ ಎನ್ನುವ ಶೀರ್ಷಿಕೆ ಫೈನಲ್ ಮಾಡಲಾಗಿತ್ತು.  ಇದಕ್ಕೆ ಎಲ್ಲೆಡೆಯಿಂದ ಬಾರಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಲವ್ ರಾತ್ರಿ ಹೋಗಿ ‘ಲವ್ ಯಾತ್ರಿ’ ಅಂತ ಹೆಸರು ಬದಲಿಸಿದ್ದಾರೆ. ಮುಜಾಫರ್ ನ್ಯಾಯಾಲಯ ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಖಲೆಗೆ ಸೂಚನೆ ನೀಡಿತ್ತು.  ಈಗ ಹೊಸ ಖುಷಿಯ ವಿಚಾರ ಚಿತ್ರತಂಡಕ್ಕೆ ಸಿಕ್ಕಿದೆ.

Image result for loveyatri

ಸಿಹಿ ಸುದ್ದಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಸುಪ್ರೀಂ ಕೋರ್ಟ್ ಗುರುವಾರ ಸಂತಸ ಸುದ್ದಿ ನೀಡಿದೆ. ‘ಲವ್ ಯಾತ್ರಿ’ ಚಿತ್ರದ ನಿರ್ಮಾಪಕ ಸಲ್ಮಾನ್ ಖಾನ್ ವೆಂಚರ್ಸ್ ಪ್ರೈ ವಿರುದ್ಧ ದೇಶದ ಯಾವುದೇ ಭಾಗದಲ್ಲಿ ಯಾವುದೇ ದಂಡನಾ ಕ್ರಮವನ್ನು ತೆಗೆದುಕೊಳ್ಳವಂತಿಲ್ಲವೆಂದು ಕೋರ್ಟ್ ಹೇಳಿದೆ.

ಚಿತ್ರ ಬಿಡುಗಡೆಗೆ ಒಪ್ಪಿಗೆ

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಮೂರ್ತಿಗಳ ಪೀಠ, ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದ್ದು ಚಿತ್ರ ಅಕ್ಟೋಬರ್ 5 ರಂದು ತೆರೆಯ ಮೇಲೆ ಅಪ್ಪಳಿಸಲಿದೆ. ಅರ್ಜಿ ವಿಚಾರಣೆ ನಡೆಸಿದ ಪೀಠ, ಚಿತ್ರದ ಹೆಸರು ಹಾಗೂ ಕಥೆಗೆ ಸಂಬಂಧಿಸಿದಂತೆ ದೇಶದ ಯಾವ ಸ್ಥಳದಲ್ಲಿಯೂ ದಂಡನಾ ಕ್ರಮಕೈಗೊಳ್ಳಬೇಡಿ ಎಂದಿದೆ. ಸಲ್ಮಾನ್ ಖಾನ್ ಹಾಗೂ ಚಿತ್ರಕ್ಕೆ ಸಂಬಂಧಿಸಿದ ಕೆಲವರ ವಿರುದ್ಧ ದಾಖಲಾಗಿದ್ದ ಎಲ್ಲ ಎಫ್ಐಆರ್ ರದ್ದು ಮಾಡಿದೆ.

.

 

Tags