ಸುದ್ದಿಗಳು

ಅಭಿನಯದತ್ತ ಗಮನ ಹರಿಸಿದ ‘ಲೂಸಿಯಾ’ ಡೈರೆಕ್ಟರ್

‘ಲೂಸಿಯಾ’ ಚಿತ್ರದ ಮೂಲಕ ವಿಶ್ವದಾದ್ಯಂತ ಗಮನ ಸೆಳೆದ ನಿರ್ದೇಶಕ ಪವನ್ ಕುಮಾರ್. ಸದ್ಯಕ್ಕೆ ಇವರು ನಿರ್ದೇಶನಕ್ಕೆ ಬ್ರೇಕ್ ನೀಡಿದ್ದು, ನಟನೆಯತ್ತ ಗಮನ ಹರಿಸಿದ್ದಾರೆ.

ಹೌದು, ಪವನ್ ಇದೀಗ ‘ಗಾಳಿಪಟ-2’ ಚಿತ್ರದಲ್ಲಿ ನಟಿಸುತ್ತಿದ್ದು, ಅದಕ್ಕಾಗಿ ಮುವಾಯ್ ಥಾಯ್ ಸಹ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರ ಮಾತ್ರವಲ್ಲದೇ ‘ಅಳಿದು ಉಳಿದವರು’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಲ್ಲಿ ಬಣ್ಣ ಹಚ್ಚಿದ್ದಾರೆ.

‘ಪಂಚರಂಗಿ’ ಚಿತ್ರದ ನಂತರ ಪವನ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಅವರು ‘ಮಿ. ಗರಗಸ’, `ಇಂತಿ ನಿನ್ನ ಪ್ರೀತಿಯ’, ‘ಮನಸಾರೆ’,`ಸರ್ಕಸ್’,`ಪಂಚರಂಗಿ’, ‘ಗುಳ್ಟು’ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಇದೀಗ ‘ಅಳಿದು ಉಳಿದವರು’ ಚಿತ್ರದ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ.

‘ಡಾಲಿ’ ಧನಂಜಯ್ ರೊಂದಿಗೆ ಅಭಿನಯಿಸಬೇಕೆಂಬ ಕನಸು ನನಸಾಗಿದೆ

#Lucia #PawanKumar #PawanKumarMovies  #SandalwoodMovies  ‍#kannadaSuddigalu

Tags