ಸುದ್ದಿಗಳು

‘ಲುಂಗಿ’ ಮೋಷನ್ ಪೋಸ್ಟರ್ ಬಿಡುಗಡೆ

‘ಲುಂಗಿ ಕಟ್ಟೋ, ಲುಂಗಿ ಕಟ್ಟೋ..’ ಎನ್ನುತ್ತಿದೆ ಚಿತ್ರತಂಡ

ಬೆಂಗಳೂರು,ಸ.12: ಖಾರ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮುಖೇಶ್ ಹೆಗ್ಡೆ ನಿರ್ಮಿಸುತ್ತಿರುವ ಅಕ್ಷಿತ್ ಶೆಟ್ಟಿ ನಿರ್ದೇಶನದ ಕನ್ನಡ ಸಿನೆಮಾ ‘ಲುಂಗಿ’. ಇತ್ತಿಚೆಗಷ್ಟೇ ಈ ಚಿತ್ರದ ಮೋಷನ್ ಪೋಸ್ಟರ್ ಯೂಟ್ಯೂಬ್ ನಲ್ಲಿ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ಮೋಷನ್ ಪೋಸ್ಟರ್

‘ಲುಂಗಿ ಕಟ್ಟೋ, ಲುಂಗಿ ಕಟ್ಟೋ..’ ಎಂದು ಹಿನ್ನೆಲೆಯಲ್ಲಿ ಧ್ವನಿ ಕೇಳಿ ಬರುವ ಈ ಚಿತ್ರದ ಮೋಷನ್ ಪೋಸ್ಟರ್ ಎಲ್ಲರನ್ನೂ ಸೆಳೆಯುತ್ತಿದೆ. ಚಿತ್ರದ ತಾಂತ್ರಿಕ ಕೆಲಸಗಳು ಭರದಿಂದ ಸಾಗುತ್ತಿದ್ದು ಮುಂದಿನ ತಿಂಗಳು ಅಥವಾ ನವ್ಹಂಬರ್ ತಿಂಗಳಲ್ಲಿ ತೆರೆ ಮೇಲೆ ಬರುವ ಸಾಧ್ಯತೆಗಳಿವೆ

ಚಿತ್ರದ ಬಗ್ಗೆ

‘ಲುಂಗಿ’ ಚಿತ್ರದ ನಾಯಕನಾಗಿ ಪ್ರಣವ್ ಹೆಗ್ಡೆ, ನಾಯಕಿಯರು ಅಹಲ್ಯಾ ಸುರೇಶ್ ಮತ್ತು ರಾಧಿಕ ರಾವ್ ಪ್ರಕಾಶ್ ತೂಮಿನಾಡು, ರೂಪ ವರ್ಕಾಡಿ, ದೀಪಕ್ ರೈ ಪಾಣಜೆ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ.

ಅರ್ಜುನ್ ಲೂಯಿಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಿಂಪಲ್ ಸುನಿ, ಅರ್ಜುನ್ ಲೂಯಿಸ್ ಮತ್ತು ವಿಲ್ಸನ್ ಕಟೀಲ್ ಹಾಡುಗಳನ್ನು ರಚಿಸಿದ್ದಾರೆ. ಚಿತ್ರಕ್ಕೆ ರಿಜ್ಜೋ ಪಿ ಜಾನ್ ಕ್ಯಾಮೆರಾ, ಪ್ರಸಾದ್ ಕೆ ಶೆಟ್ಟಿ ಸಂಗೀತ, ಮನು ಶೆಡ್ಗಾರ್ ಸಂಕಲನ, ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ, ರಕ್ಷಿತ್ ರೈ ಸಹ-ನಿರ್ದೇಶನ ಮತ್ತು ಮಹೇಶ್ ಯೆನ್ಮೂರು ಕಲಾ ನಿರ್ದೇಶನವಿದೆ.

Tags

Related Articles