ಸುದ್ದಿಗಳು

ಶೀಘ್ರದಲ್ಲಿ ತೆರೆ ಮೇಲೆ `ಲುಂಗಿ’ ಡಾನ್ಸ್ ಶುರು

ಖಾರ ಎಂಟರ್ಟೈನ್ಮೆಂಟ್  ಬ್ಯಾನರ್ ಅಡಿಯಲ್ಲಿ ಮುಖೇಶ್ ಹೆಗ್ಡೆಯವರು ನಿರ್ಮಿಸುತ್ತಿರುವ ಯುವ-ನಿರ್ದೇಶಕ ಅಕ್ಷಿತ್ ಶೆಟ್ಟಿ ನಿರ್ದೇಶನದ ಚೊಚ್ಚಲ ಕನ್ನಡ ಸಿನೆಮಾ ಲುಂಗಿ ಮೊದಲ ಹಂತದ ಚಿತ್ರೀಕರಣವನ್ನು ಪೂರೈಸಿ ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.

ಚಿತ್ರದ ತಾಂತ್ರಿಕ ಕೆಲಸಗಳು ಭರದಿಂದ ಸಾಗುತ್ತಿದ್ದು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರುವ ಯೋಜನೆ ಚಿತ್ರ ತಂಡಕ್ಕಿದೆ. ಚಿತ್ರದ ನಾಯಕನಾಗಿ ಪ್ರಣವ್ ಹೆಗ್ಡೆ, ನಾಯಕಿಯರು ಅಹಲ್ಯಾ ಸುರೇಶ್ ಮತ್ತು ರಾಧಿಕ ರಾವ್ ಇನ್ನುಳಿದಂತೆ ಪ್ರಕಾಶ್ ತೂಮಿನಾಡು, ರೂಪ ವರ್ಕಾಡಿ, ದೀಪಕ್ ರೈ ಪಾಣಜೆ, ರಂಗಿತರಂಗ ಕಾರ್ತಿಕ್, ವಿ.ಜೆ.ವಿನೀತ್, ಮೈಮ್ ರಾಮದಾಸ್, ಸಂದೀಪ್ ಶೆಟ್ಟಿ ತಾರಾಗಣದಲ್ಲಿದ್ದಾರೆ.

ಅರ್ಜುನ್ ಲೂಯಿಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಿಂಪಲ್ ಸುನಿ, ಅರ್ಜುನ್ ಲೂಯಿಸ್ ಮತ್ತು ವಿಲ್ಸನ್ ಕಟೀಲ್ ಹಾಡುಗಳನ್ನು ರಚಿಸಿದ್ದಾರೆ. ಚಿತ್ರಕ್ಕೆ ರಿಜ್ಜೋ ಪಿ ಜಾನ್ ಕ್ಯಾಮೆರಾ, ಪ್ರಸಾದ್ ಕೆ ಶೆಟ್ಟಿ ಸಂಗೀತ, ಮನು ಶೆಡ್ಗಾರ್ ಸಂಕಲನ, ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ, ರಕ್ಷಿತ್ ರೈ ಸಹ-ನಿರ್ದೇಶನ ಮತ್ತು ಮಹೇಶ್ ಯೆನ್ಮೂರು ಕಲಾ ನಿರ್ದೇಶನವಿದೆ.

Tags

Related Articles

Leave a Reply

Your email address will not be published. Required fields are marked *